ಉಪಚುನಾವಣೆ – ಚಿರ ಯುವಕರಂತಾದ ಯಡಿಯೂರಪ್ಪ
ಶತಾಯಗತಾಯ ಬಿಜೆಪಿಯನ್ನು ಗೆಲ್ಲಿಸಲೇಬೇಕೆಂಬ ಪಣತೊಟ್ಟಿರುವ ಯಡಿಯೂರಪ್ಪ, ಬಿರು ಬಿಸಿಲನ್ನು ಲೆಕ್ಕಿಸದೇ ಎರಡೂ ಕ್ಷೇತ್ರಗಳಲ್ಲೂ ಪ್ರಚಾರ ನಡೆಸುತ್ತಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಮೈಸೂರು,
ಮಾರ್ಚ್ 31: ಮತಬೇಟೆಗಾಗಿ ಈಗಾಗಲೇ ಸರ್ವ ಪಕ್ಷಗಳು ರಣ ಕಣಕ್ಕೆ ಇಳಿದಾಗಿದೆ. ಎಲ್ಲರ ಚಿತ್ತ ನೆಟ್ಟಿರುವುದು ಇದೇ ಏಪ್ರಿಲ್ 9 ರ ಚುನಾವಣೆ ದಿನಕ್ಕಾಗಿ. ಪ್ರಚಾರದ ಕೇಂದ್ರ ಬಿಂದು ಎಪ್ಪತ್ನಾಲ್ಕರ ಯಡಿಯೂರಪ್ಪ ತಮ್ಮ ಇಳಿ ವಯಸ್ಸಿನಲ್ಲಿಯೂ ಯುವಕರನ್ನೂ ನಾಚಿಸುಂತೆ ಪ್ರಚಾರಕ್ಕೆ ಇಳಿದಿದ್ದಾರೆ. id="toptextpromo"> id='are-slot-1' class='oiad oi-axt oiadv'>ಶತಾಯಗತಾಯ
ಬಿಜೆಪಿಯನ್ನು ಗೆಲ್ಲಿಸಲೇಬೇಕೆಂಬ ಪಣತೊಟ್ಟಿರುವ ಯಡಿಯೂರಪ್ಪ, ಬಿರು ಬಿಸಿಲನ್ನು ಲೆಕ್ಕಿಸದೇ ಎರಡೂ ಕ್ಷೇತ್ರಗಳಲ್ಲೂ ಪ್ರಚಾರ ನಡೆಸುತ್ತಿದ್ದಾರೆ. ಹಾಗಾದ್ರೆ ಅವರ ಮಾಸ್ಟರ್ ಪ್ಲಾನ್ ಏನು...? ಅವರ ದಿನಚರಿ ಹೇಗಿದೆ..? ಇಲ್ಲಿದೆ ಸಂಪೂರ್ಣ ಮಾಹಿತಿ[ರಾಜಕೀಯ ನಾಯಕರ ಸ್ವಾಗತಕ್ಕೆ ಖಾಲಿ ಕೊಡಗಳು!] id='are-slot-2' class='oiad oi-axt oiadv'>
ಪ್ರತಿ ದಿನದ ಪ್ರಚಾರ ಹೇಗಿದೆ?
ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾದ ಮೇಲೆ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿರುವುದರಿಂದ 2018ರ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಗಳಿಸಿ, ರಾಜ್ಯದ ಅಧಿಕಾರ ಹಿಡಿಯಲು ಈ ಚುನಾವಣೆ ಸೆಮಿಫೈನಲ್ ಎಂದೇ ಬಿಂಬಿತವಾಗಿದೆ. ಬಿ.ಎಸ್.ಯಡಿಯೂರಪ್ಪ ಬೆಳಗ್ಗೆ ಮೈಸೂರಿನ ಖಾಸಗಿ ಹೋಟೆಲ್ ನಿಂದ ಪ್ರಚಾರಕ್ಕೆ ಹೊರಟರೆ ಒಂದು ದಿನ ಗುಂಡ್ಲುಪೇಟೆ, ಮೊತ್ತೊಂದು ದಿನ ನಂಜಗೂಡಿನ ಗ್ರಾಮಗಳಲ್ಲಿ ರೋಡ್ ಶೋ ಜೊತೆಗೆ ಪಾದಯಾತ್ರೆ ಮೂಲಕ ಮತಯಾಚನೆ ಮಾಡುತ್ತಿದ್ದಾರೆ.[ಮೈಸೂರಿನಲ್ಲಿ ಮುಖ್ಯಮಂತ್ರಿ: ಉಪಚುನಾವಣಾ ಕಣಕ್ಕೆ ಬಂತು ಕಳೆ]

ಪ್ರತಿ ಹಳ್ಳಿಗೂ ಭೇಟಿ
ಇಲ್ಲಿಯವರೆಗೆ 12 ದಿನಗಳಲ್ಲಿ ಗುಂಡ್ಲಪೇಟೆ ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸುಮಾರು 80 ಹಳ್ಳಿಗಳಲ್ಲಿ ಪ್ರಚಾರ ಮುಗಿದಿದೆ. ಉಳಿದ 8 ದಿನಗಳಲ್ಲಿ ಎರಡು ಕ್ಷೇತ್ರಗಳ ಪ್ರತಿಯೊಂದು ಗ್ರಾಮಗಳಿಗೂ ಭೇಟಿ ನೀಡಿ ಪ್ರಚಾರ ನಡೆಸಲು ಪ್ಲ್ಯಾನ್ ಮಾಡಲಾಗಿದೆ.[ಉಪಚುನಾವಣೆಯಲ್ಲಿ ನಡೆಯುತ್ತಿದೆಯಾ ಅಕ್ರಮ?]

ಗಣ್ಯರ ಸಾಥ್
ಯಡಿಯೂರಪ್ಪ ಜೊತೆ ಸಂಸದೆ ಶೋಭಾ ಕರದ್ಲಾಂಜೆ, ಶ್ರೀರಾಮಲು, ಸೋಮಣ್ಣ, ಪ್ರತಾಪ್ ಸಿಂಹ, ಆರ್. ಅಶೋಕ್ ಸೇರಿದಂತೆ ಕೇಂದ್ರ ಸಚಿವರಾದ ಸದಾನಂದಗೌಡ, ರಮೇಶ್ ಜಿಗಜಿಗಣಗಿ, ಕುಮಾರ್ ಬಂಗಾರಪ್ಪ ಭಾಗವಹಿಸುತ್ತಿದ್ದು, ಏಪ್ರಿಲ್ 3 ಮತ್ತು 6ರಂದು ಎಸ್.ಎಂ. ಕೃಷ್ಣ ನಂಜನಗೂಡು ಹಾಗೂ ಗುಂಡ್ಲುಪೇಟೆಯಲ್ಲಿ ಪ್ರಚಾರ ನಡೆಸಲಿದ್ದಾರೆ. ಏಪ್ರಿಲ್ 2 ಮತ್ತು 3 ರಂದು ಕೇಂದ್ರ ಸಚಿವ ಅನಂತ್ ಕುಮಾರ್ ಎರಡು ಕ್ಷೇತ್ರಗಳಲ್ಲಿ ರೋಡ್ ಶೋ ನಡೆಸಲಿದ್ದಾರೆ. ಹೀಗೆ ಉಪ ಚುನಾವಣೆಯನ್ನು ಗೆಲ್ಲಲು ಬಿಜೆಪಿ ತನ್ನದೇ ಆದ ಕಾರ್ಯತಂತ್ರ ರೂಪಿಸಿದೆ.[ಗುಂಡ್ಲುಪೇಟೆ ಉಪಚುನಾವಣೆ: ಗೆಲುವು ಸುಲಭವಲ್ಲ!]

ಪ್ರಚಾರಕ್ಕೆ ಬಾರದ ಶ್ರೀನಿವಾಸ್ ಪ್ರಸಾದ್:
ಮಾ. 20ರಂದು ರೋಡ್ ಶೋ ಮಾಡಿ ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸ್ ಪ್ರಸಾದ್ ನಂತರ 10 ದಿನಗಳಲ್ಲಿ ಒಂದು ದಿನ ಮಾತ್ರ ಯಡಿಯೂರಪ್ಪ ಜೊತೆ ಪ್ರಚಾರದಲ್ಲಿ ಪಾಲ್ಗೊಂಡಿದ್ದು ಬಿಟ್ಟರೆ ಇಲ್ಲಿಯವರೆಗೆ ಯಾವುದೇ ಗ್ರಾಮಗಳಲ್ಲೂ ಪ್ರಚಾರಕ್ಕೆ ಹೋಗಿಲ್ಲ. ಸುಡು ಬಿಸಿಲಿನಿಂದ ಆರೋಗ್ಯ ಹದಗೆಟ್ಟು ಜ್ವರದಿಂದ ಬಳಲುತ್ತಿರುವ ಶ್ರೀನಿವಾಸ್ ಪ್ರಸಾದ್ ಮನೆಯಿಂದಲೇ ದೂರವಾಣಿ ಮೂಲಕ ತಮ್ಮ ಆಪ್ತರ ಮೂಲಕ ಪ್ರಚಾರ ಮಾಡುತ್ತಿದ್ದಾರೆ.[ಅದೆಲ್ಲ ಸರಿ, ಶ್ರೀನಿವಾಸ್ ಪ್ರಸಾದ್ ನಡೆ ಮಾತ್ರ ನಿಗೂಢ]

ಹೊಟೇಲ್ ನಲ್ಲೂ ಲಕ್ಕಿ ನಂಬರ್!
ಬಿ.ಎಸ್.ಯಡಿಯೂರಪ್ಪ 2004ರ ಸಮ್ಮಿಶ್ರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾದಗಿನಿಂದಲೂ ಮೈಸೂರಿಗೆ ಬಂದಾಗ ಇಲ್ಲಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ವಿಂಡ್ ಫ್ಲವರ್ ರೆಸಾರ್ಟ್ ಅಂಡ್ ಸ್ಪಾ ಆಲೀವ್ ಗಾರ್ಡನ್ ನ ರೂಂ ನಂಬರ್ 39 ರಲ್ಲಿ ಉಳಿದುಕೊಳ್ಳುತ್ತಾರೆ. ಇದೇ ಹೋಟೆಲ್‌ನಲ್ಲಿ ಮುಖ್ಯಮಂತ್ರಿಯಾದಗಲೂ ತಂಗುತ್ತಿದ್ದರು. ಈಗಲೂ ಇದೇ ರೂಮಿನಲ್ಲಿ ತಂಗಿರುವುದರಿಂದ ಬಿಜೆಪಿ ವಿಜಯ ಮಾಲೆಯನ್ನು ಮುಡಿಗೇರಿಸಿಕೊಳ್ಳುತ್ತದಾ ಎಂಬುದನ್ನು ತಿಳಿಯಲು ಏಪ್ರಿಲ್ 13, ಫಲಿತಾಂಶದ ದಿನದವರೆಗೆ ಕಾಯಬೇಕಿದೆ ಅಷ್ಟೆ![ಉಪಚುನಾವಣೆ ಬಂದಾಯ್ತು, ಎಲ್ಲಿದ್ದಾರೆ ಅಂಬರೀಶ್, ರಮ್ಯಾ?]












Click it and Unblock the Notifications