ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಪ್ ಕಾಮ್ಸ್‌ನಿಂದ ತರಕಾರಿ, ಹಣ್ಣು ಮನೆ ಬಾಗಿಲಿಗೆ

|
Google Oneindia Kannada News

ಮೈಸೂರು, ಫೆಬ್ರವರಿ 18; ಮೈಸೂರು ಜಿಲ್ಲಾ ಹಾಪ್‍ಕಾಮ್ಸ್ ವತಿಯಿಂದ ಆನ್‍ಲೈನ್ ಮೂಲಕ ಮೈಸೂರು ನಗರದ ನಿವಾಸಿಗಳ ಮನೆ ಬಾಗಿಲಿಗೆ ತಾಜಾ ಹಣ್ಣು, ತರಕಾರಿಗಳನ್ನು ತಲುಪಿಸಲಾಗುತ್ತಿದೆ. ಈ ಸೇವೆ ಪಡೆಯಲು ಸಾರ್ವಜನಿಕರು ಮುಂಗಡವಾಗಿ ತಮ್ಮ ಹೆಸರನ್ನು ನೊಂದಾಯಿಕೊಳ್ಳಬೇಕು.

ಮನೆ ಬಾಗಿಲಿಗೆ, ಅಪಾಟ್ಮೆರ್ಟ್‌ಮೆಂಟ್‌ ಹಾಗೂ ಶುಭ ಸಮಾರಂಭಗಳ ಸ್ಥಳಗಳಿಗೆ ಹಣ್ಣು, ತರಕಾರಿಗಳನ್ನು ತಲುಪಿಸಲಾಗುತ್ತಿದೆ. ಈಗ ಸರ್ಕಾರಿ, ಖಾಸಗಿ ಹಾಸ್ಟೆಲ್‌, ವಿವಿಧ ಆಶ್ರಮ, ಆಸ್ಪತ್ರೆಗಳಿಗೆ, ಖಾಸಗಿ ಹೋಟೆಲ್‍ಗಳಿಗೆ ಸಹ ರೈತರಿಂದ ಖರೀದಿಸಿದ ಹಣ್ಣು, ತರಕಾರಿಗಳನ್ನು ತಲುಪಿಸಲಾಗುತ್ತಿದೆ.

 ರೈತರ ಅನುಕೂಲಕ್ಕೆ ದುಪ್ಪಟ್ಟು ಹಾಪ್ ಕಾಮ್ಸ್; ಧೈರ್ಯ ಹೇಳಿದ ಕೃಷಿ ಸಚಿವ ರೈತರ ಅನುಕೂಲಕ್ಕೆ ದುಪ್ಪಟ್ಟು ಹಾಪ್ ಕಾಮ್ಸ್; ಧೈರ್ಯ ಹೇಳಿದ ಕೃಷಿ ಸಚಿವ

ನಿಗದಿತ ದರ ಹಾಗೂ ನಿಖರವಾದ ತೂಕದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಸರಬರಾಜು ಮಾಡಲಾಗುತ್ತದೆ. ಈ ಸೇವೆ ಪಡೆಯಲು ಸಾರ್ವಜನಿಕರು ಮುಂಗಡವಾಗಿ ತಮ್ಮ ಹೆಸರನ್ನು ನೊಂದಾಯಿಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

ಮೈಸೂರು-ಚಾಮರಾಜನಗರ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ಮೈಸೂರು-ಚಾಮರಾಜನಗರ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ

Register Name To Get Hopcoms Vegetables Fruits To Doorstep

ಹಣ್ಣು, ತರಕಾರಿ, ಸೊಪ್ಪು ಹಾಗೂ ಇತರೆ ಸಾಮಗ್ರಿಗಳಿಗೆ ದರವನ್ನು ಆನ್‍ಲೈನ್‍ನಲ್ಲಿ ವೀಕ್ಷಿಸಿ ಹಣವನ್ನು ಪಾವತಿಸಬಹುದು ಅಥವಾ ಹಣ್ಣು, ತರಕಾರಿಗಳನ್ನು ವಿತರಿಸಿದ ನಂತರ ಪಾವತಿ ಮಾಡಲು ಸಹ ಅವಕಾಶವನ್ನು ನೀಡಲಾಗಿದೆ.

ಕೊಡಗಿನಲ್ಲಿ ಹಣ್ಣು ಬೆಳೆಯೋದಕ್ಕೆ ಮಾರುಕಟ್ಟೆ ಕೊರತೆ?ಕೊಡಗಿನಲ್ಲಿ ಹಣ್ಣು ಬೆಳೆಯೋದಕ್ಕೆ ಮಾರುಕಟ್ಟೆ ಕೊರತೆ?

ಮೈಸೂರು ನಗರದ ಜನರಿಗಾಗಿ ಇದಕ್ಕಾಗಿಯೇ 'Hopcoms online' ಮೊಬೈಲ್ ಆಪ್ಲಿಕೇಶನ್ ಸಿದ್ಧ ಪಡಿಸಲಾಗಿದೆ. ಸಾರ್ವಜನಿಕರು ಈ ಸೌಲಭ್ಯಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

ಜನರು ಹೆಚ್ಚಿನ ಮಾಹಿತಿಗಾಗಿ 8277814143 ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದು ಜಿಲ್ಲಾ ಹಾಪ್‍ಕಾಮ್ಸ್ ಪದನಿಮಿತ್ತ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

English summary
Register your name to get Hopcoms vegetables, fruits to doorstep in Mysuru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X