ಅತಿ ವಿಶ್ವಾಸ, ಸಮನ್ವಯದ ಕೊರತೆಯಿಂದಲೇ ಕೈ ತಪ್ಪಿತೆ ಸ್ವಚ್ಛ ನಗರಿ ಪಟ್ಟ ?
ಮೈಸೂರು, ಮೇ 5 : ಇನ್ನು ನಮಗೆ ನಂಬರ್ ಒನ್ ಪಟ್ಟ ಸಿಗಲಿದೆ ಎಂಬ ಮಾತು ಸುಳ್ಳಾಯಿತು. ಹೌದು ಸತತ 2 ವರುಷಗಳಿಂದಲೂ ಹ್ಯಾಟ್ರಿಕ್ ಸಾಧನೆ ಮಾಡುತ್ತಿದ್ದ ಸ್ವಚ್ಛ ನಗರಿ ಮೈಸೂರು, ಈ ಬಾರಿ 5ನೇ ಸ್ಥಾನಕ್ಕೆ ದೂಡಲ್ಪಟ್ಟಿದೆ. ಹಾಗಾದ್ರೆ ಮೈಸೂರಿಗೆ ಈ ಸ್ಥಾನ ಕೈತಪ್ಪಲು ಇರುವ ಕಾರಣವಾದರೂ ಏನು...ಅನ್ನೋದು ಎಲ್ಲರಲ್ಲಿಯೂ ಕಾಡುತ್ತಿರುವ ಪ್ರಶ್ನೆ ಅವೆಲ್ಲದಕ್ಕೂ ಒನ್ ಇಂಡಿಯಾ ಸಮೀಕ್ಷೆ ನಡೆಸಿದೆ. ಹಾಗಾದ್ರೆ ಮೈಸೂರು ಮಹಾನಗರ ಪಾಲಿಕೆ ಎಡವಿದ್ದು ಎಲ್ಲಿ..? ಎಂಬುದಕ್ಕೆ ಕಾರಣಗಳು ಇಲ್ಲಿದೆ.
ಸಮನ್ವಯದ ಕೊರತೆ: ಹೌದು. ಸ್ವಚ್ಛ ನಗರಿಯ 5ನೇ ಸ್ಥಾನಕ್ಕೆ ದೂಡಲ್ಪಟ್ಟ ಮೈಸೂರಿನ ಜನರಿಗೆ ಬೇಸರವುಂಟಾಗಿದೆ. ಅತಿಯಾದ ಆತ್ಮವಿಶ್ವಾಸ, ಅಧಿಕಾರಿಗಳ ಬದ್ಧತೆಯ ಕೊರತೆ ಹಾಗೂ ಸಾರ್ವಜನಿಕರ ನಿರಾಸಕ್ತಿಯಿಂದಾಗಿ ಮೈಸೂರು ನಗರವು ಈ ಬಾರಿ ನಂ.1 ಸ್ವಚ್ಛತಾ ನಗರಿ ಸ್ಥಾನವನ್ನು ಉಳಿಸಿಕೊಳ್ಳಲು ವಿಫಲವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.

ಅದು 2014ರ ಮಾತು. ಅಂದು ಪಿ.ಜಿ.ರಮೇಶ್ ಅವರು ನಗರಪಾಲಿಕೆ ಆಯುಕ್ತರಾಗಿದ್ದರು. ಅವರ ಅವಧಿಯಲ್ಲಿ ನಗರಪಾಲಿಕೆಯಲ್ಲಿ ಸ್ವಚ್ಛತಾ ಕಾರ್ಯಗಳು ಉತ್ತಮವಾಗಿ ಆರಂಭಗೊಂಡವು. ಘನತಾಜ್ಯ ನಿರ್ವಹಣೆ, ಬಡಾವಣೆ ಗಳಲ್ಲಿನ ಕಸ ವಿಲೇವಾರಿ ಕಾರ್ಯಗಳು ಪೌರಕಾರ್ಮಿಕರ ಸಹಕಾರದೊಂದಿಗೆ ಉತ್ತಮವಾಗಿ ನಡೆದವು.
ನಂತರ ಆಯುಕ್ತರಾಗಿ ಡಾ.ಸಿ.ಜಿ.ಬೆಟಸೂರಮಠ ಹಾಗೂ ಮಹಾಪೌರರಾಗಿ ಆರ್.ಲಿಂಗಪ್ಪ ಅವರು ಅಧಿಕಾರ ಸ್ವೀಕರಿಸಿದರು. ಪಿ.ಜಿ.ರಮೇಶ್ ಅವರ ಕಾರ್ಯಗಳನ್ನು ಬೆಟಸೂರಮಠ ಹಾಗೂ ಲಿಂಗಪ್ಪ ಅವರು ಮುಂದುವರಿಸಿ ಕೊಂಡು ಹೋದ ಪರಿಣಾಮ ಮೈಸೂರು ಸ್ವಚ್ಛತೆಯಲ್ಲಿ ಮೊದಲ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಯಿತು. ನಂತರ ಬೆಟಸೂರಮಠ ಅವರು ಸ್ವಚ್ಛತೆ ಕುರಿತು ಸಾಕಷ್ಟು ಶ್ರಮ ವಹಿಸಿ ಪ್ರಶಸ್ತಿಯನ್ನು ಮತ್ತೊಮ್ಮೆ ಪಡೆಯಲೇಬೇಕು ಎಂದು ಹಠಕ್ಕೆ ಬಿದ್ದವರಂತೆ ಕಾರ್ಯ ನಿರ್ವಹಿಸಿದ್ದರು.

ಇನ್ನು ಬೆಟಸೂರಮಠ ರವರು ಸ್ವಚ್ಛತೆ ಕುರಿತು ಕಾರ್ಯಾಗಾರ, ಪ್ರಾತ್ಯಕ್ಷಿಕೆ ಹಾಗೂ ಸಮೀಕ್ಷೆ ಕಾರ್ಯಕ್ಕೆ ಬಂದವರಿಗೆ ಅಗತ್ಯ ಮಾಹಿತಿ ನೀಡುವ ಮೂಲಕ 2 ಸಾವಿರ ಅಂಕಗಳಿಗೆ 1749 ಅಂಕಗಳನ್ನು ಪಡೆದು ಎರಡನೇ ಅವಧಿಗೆ ಪಶಸ್ತಿಯನ್ನು ಮುಡಿಗೇರಿಸಿಕೊಂಡರು. ಆದರೆ, ಕಳೆದ 2 ಬಾರಿ ಹಾಕಿದ ಶ್ರಮವನ್ನು ಮೂರನೇ ಬಾರಿಗೆ ಹಾಕುವಲ್ಲಿ ನಗರಪಾಲಿಕೆ ಅಧಿಕಾರಿಗಳು ವಿಫಲರಾದರು ಮತ್ತು ಪಶಸ್ತಿ ಮೂರನೇ ಬಾರಿಗೂ ನಮಗೇ ದಕ್ಕುತ್ತದೆ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿ ತಾವು ಕೈಗೊಳ್ಳಬೇಕಾದ ಕೆಲಸಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದರು.
ಶೌಚಾಲಯ ನಿರ್ಮಾಣದಲ್ಲಿ ಹಿಂದುಳಿದ ಮೈಸೂರು ಜಿಲ್ಲೆ :
ಎರಡನೇ ಬಾರಿ ಸ್ವಚ್ಛ ನಗರಿ ಪ್ರಶಸ್ತಿಯನ್ನು ಪಡೆದ ನಂತರ ಮೈಸೂರು ನಗರದಾದ್ಯಂತ 425 ಶೌಚಾಲಯಗಳನ್ನು ನಿರ್ಮಿಸ ಬೇಕೆಂದು ಕೇಂದ್ರ ನಗರಾಭಿವೃದ್ಧಿ ಇಲಾಖೆಯಿಂದ ಸೂಚನೆ ನೀಡಲಾಗಿತ್ತು. ಆದರೆ, ನಗರದಲ್ಲಿ ಕೇವಲ 250 ಶೌಚಾಲಯಗಳನ್ನು ಮಾತ್ರ ನಗರಪಾಲಿಕೆ ನಿರ್ಮಿಸಿತ್ತು. ಉಳಿದ ಶೌಚಾಲಯಗಳ ನಿರ್ಮಾಣಕ್ಕೆ ಅಧಿಕಾರಿಗಳು ಟೆಂಡರ್ ಕರೆದು ಸುಮ್ಮನಾದರು. ಇದರಿಂದಾಗಿ ಮೈಸೂರಿಗೆ 50 ಅಂಕಗಳು ಕೈತಪ್ಪಿದವು.

ಸ್ವಚ್ಛತೆ ಕುರಿತು ಅರಿವು ಮೂಡಿಸದೇ ಇರುವುದು: ಸ್ವಚ್ಛತೆಯ ಬಗ್ಗೆ ಸಮೀಕ್ಷೆ ನಡೆಸಲು ಕೇಂದ ಸರ್ಕಾರ ಸೂಚಿಸಿದ್ದ ಸಂಸ್ಥೆಯ ಸಿಬ್ಬಂದಿ ಮೈಸೂರಿಗೆ ಆಗಮಿಸಿದ್ದ ವೇಳೆ ನಗರದ ಸುತ್ತಮುತ್ತ ರಸ್ತೆ ಕಾಮಗಾರಿ ನಡೆಸಲಾಗುತ್ತಿತ್ತು.
ಇದರಿಂದಾಗಿ ಧೂಳು ಹೆಚ್ಚಾಗಿತ್ತು. ಇದನ್ನು ನಿರ್ವಹಣೆ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದರು. ಜೊತೆಗೆ ಸಮೀಕ್ಷೆಗೆ ಬಂದವರಿಗೆ ಸೂಕ್ತ ಮಾಹಿತಿ ನೀಡುವಲ್ಲಿ ಕೂಡ ಅಧಿಕಾರಿಗಳು ವಿಫಲರಾದರು. ಹೀಗಾಗಿ ಅವರು ಕಳೆದ ಬಾರಿಗಿಂತ ಈ ಬಾರಿ 50 ಅಂಕಗಳನ್ನು ಕಡಿಮೆ ನೀಡಿದ್ದರು.
ಮಾಹಿತಿ ಕೊರತೆ : ಸ್ವಚ್ಛತಾ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ನಗರದ ಸಮಸ್ಯೆ ಹಾಗೂ ನೈರ್ಮಲ್ಯ ಕುರಿತಂತೆ ಸುಮಾರು 50 ಸಾವಿರ ಮಂದಿ ಸಾರ್ವಜನಿಕರು ಆ್ಯಪ್ ಮೂಲಕ ಅಭಿಪ್ರಾಯ ಹಂಚಿಕೆ ಮಾಡಿಕೊಳ್ಳುವ ಅವಕಾಶ ಒದಗಿಸಲಾಗಿತ್ತು. ಆದರೆ, ನಗರದಾದ್ಯಂತ ಕೇವಲ 2 ಸಾವಿರ ಮಂದಿ ಸಾರ್ವ ಜನಿಕರು ಮಾತ್ರ ಆ್ಯಪ್‍ನಲ್ಲಿ ಅಭಿಪ್ರಾಯ ಹಂಚಿ ಕೊಂಡಿದ್ದರು.
ಇದರಿಂದಾಗಿ ಮೈಸೂರಿಗೆ 151 ಅಂಕಗಳು ನಷ್ಟವಾದವು. ಮೂರನೇ ಬಾರಿಗೆ ನಂ.1 ಸ್ವಚ್ಛ ನಗರವಾಗಿ ಹೊರಹೊಮ್ಮಬೇಕಾಗಿದ್ದ ಮೈಸೂರು ಇಂದು 5ನೇ ಸ್ಥಾನಕ್ಕೆ ಕುಸಿದಿದೆ. ಇನ್ನಾದರೂ ಅಧಿಕಾರಿಗಳು ತಮ್ಮ ತಪ್ಪನ್ನು ಪುನರಾವರ್ತಿಸದೆ ಮುಂದಿನ ಬಾರಿ ಮತ್ತೆ ನಂ.1 ಸ್ಥಾನವನ್ನು ಪಡೆಯಲು ಪ್ರಯತ್ನಿಸಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯ.
ಆಧುನಿಕ ಉಪಕರಣಗಳ ಕೊರತೆ: 2014-15ರಲ್ಲಿ ಮೊದಲ ಬಾರಿಗೆ ಸ್ವಚ್ಛ ನಗರಿ ಎಂಬ ಖ್ಯಾತಿಯನ್ನ ಪಡೆದ ಸಂದರ್ಭದಲ್ಲಿ ದೇಶದಲ್ಲಿ 73 ನಗರಗಳು ಸ್ಪರ್ಧೆಯಲ್ಲಿದ್ದವು. ಅಲ್ಲದೆ 10 ಲಕ್ಷ ಜನಸಂಖ್ಯೆ ಇರುವ ನಗರಗಳ ನಡುವೆ ಸ್ಪರ್ಧೆ ನಡೆದಿತ್ತು.
ನಂತರ 2015-16ರಲ್ಲಿ 10 ಲಕ್ಷ ಜನಸಂಖ್ಯೆಯುಳ್ಳ 400 ನಗರಗಳ ನಡುವೆ ಸ್ಪರ್ಧೆ ನಡೆದು ಮೈಸೂರು ಎರಡನೇ ಬಾರಿಗೆ ಸ್ವಚ್ಛ ನಗರಿ ಪಟ್ಟ ಪಡೆದಿತ್ತು.
2016-17 ರಲ್ಲಿ ದೇಶದಲ್ಲಿ 434 ನಗರಗಳನ್ನ ಸ್ವಚ್ಛ ನಗರಿ ಸ್ಪರ್ಧೆಗೆ ಆಯ್ಕೆ ಮಾಡಿದ್ದು, ಅದರಲ್ಲಿ 1 ಲಕ್ಷ ಜನಸಂಖ್ಯೆ ಇರುವ ನಗರಗಳನ್ನು ಸಹ ಆಯ್ಕೆ ಮಾಡಲಾಗಿತ್ತು. ಈ ಬಾರಿ ಮೈಸೂರಿಗೆ 5ನೇ ಸ್ಥಾನ ಬಂದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕ ರಾಜ್ಯದಲ್ಲಿ ಅತಿ ವೇಗವಾಗಿ ಬೆಳಯುತ್ತಿರುವ ನಗರಗಳ ಸಾಲಿನಲ್ಲಿ ಮೈಸೂರು ಎರಡನೇ ಸಾಲಿನಲ್ಲಿದೆ. ಬೆಳವಣಿಗೆಯ ವೇಗಕ್ಕೆ ಹಾಗೂ ಜನಸಂಖ್ಯೆ ವೇಗಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರ ಸೌಲಭ್ಯ ನೀಡುತ್ತಿಲ್ಲ ಎಂಬ ಆರೋಪಗಳೂ ಇವೆ.
ಸ್ವಚ್ಛತೆ ಕಾಪಾಡಲು ಪೌರಕಾರ್ಮಿಕರು ಹಾಗೂ ಆಧುನಿಕ ಪರಿಕರಗಳ ಕೊರತೆಯಿದೆ. ಸಂಗ್ರಹವಾದ ಕಸವನ್ನ ಸಂಸ್ಕರಿಸಿ ವಿಂಗಡಿಸಿ ಮರು ಉಪಯೋಗ ಮಾಡುವ ಸಮರ್ಪಕ ವ್ಯವಸ್ಥೆ ಇಲ್ಲ. ಜೊತೆಗೆ ಮೈಸೂರು ನಗರದಲ್ಲಿ ಒಳಚರಂಡಿ ವ್ಯವಸ್ಥೆ ಶೇ.87 ರಷ್ಟು ಮಾತ್ರ ಇದೆ. ನಗರದ ಪ್ರಮುಖ ಬಡಾವಣೆಗಳಲ್ಲಿ ಮಾತ್ರ ಸಮರ್ಪಕ ಒಳಚರಂಡಿ ವ್ಯವಸ್ಥೆ ಇದೆ. ಆದರೆ ವೇಗವಾಗಿ ಬೆಳೆಯುತ್ತಿರುವ ಬಡಾವಣೆಗಳಲ್ಲಿ ಯಾವುದೇ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಮೈಸೂರು ಮಹಾನಗರ ಪಾಲಿಕೆ ಹಿಂದೆ ಬಿದ್ದಿದ್ದು, ಇದು ಸಹ ಹ್ಯಾಟ್ರಿಕ್ ಸಾಧನೆಗೆ ಅಡ್ಡಿಯಾಗಿದೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications