ನಟ ದರ್ಶನ್ ಕಾರು ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ

ಮೈಸೂರು, ಸೆಪ್ಟೆಂಬರ್.24 : ನಟ ದರ್ಶನ್ ಕಾರು ಅಪಘಾತಕ್ಕೆ ಕಾರು ಚಾಲಕನ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ. ನಿನ್ನೆ ತಡ ರಾತ್ರಿ ಸಂಭವಿಸಿದ ಅಪಘಾತದ ವೇಳೆ ದರ್ಶನ್ ಜೊತೆ ಗನ್ ಮ್ಯಾನ್ ಹಾಗೂ ಕಾರು ಚಾಲಕ ರಾಯ್ ಆಂಟೋನಿ ಕೂಡ ಇದ್ದರು.

ಕಾರು ಚಲಾಯಿಸುತ್ತಿದ್ದದ್ದು ಆಂಟೋನಿಯೇ ಎಂದು ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ರಾಯ್ ಆಂಟೋನಿ ಬೆಂಗಳೂರಿನ ಬಸವೇಶ್ವರ ನಗರದ ನಿವಾಸಿ. ನಟ ದರ್ಶನ್ ಕಾರು ಸಂಖ್ಯೆ JA 51 JD 7999 ಆರ್ಡಿ ಕ್ಯೂ 7.

ಅಪಘಾತದ ಬಳಿಕ ಕಾರನ್ನು ಬೆಂಗಳೂರಿಗೆ ರಾತ್ರೋರಾತ್ರಿ ಶಿಫ್ಟ್ ಮಾಡಲಾಗಿತ್ತು. ಸದ್ಯ ಈ ಕಾರನ್ನು ಮೈಸೂರು ಪೊಲೀಸರು ವಿಚಾರಣೆಗಾಗಿ ಬೆಂಗಳೂರಿನಿಂದ ವಾಪಸ್ ತರಿಸಲು ಸಜ್ಜಾಗಿದ್ದಾರೆ. ವಿವಿ ಪುರಂ ಸಂಚಾರಿ ಠಾಣೆ ಇನ್ಸ್ಪೆಕ್ಟರ್ ರವಿ ಅವರಿಂದ ವಿಚಾರಣೆ ನಡೆಯುತ್ತಿದೆ.

Reason for the Darshan car accident was the negligence of the driver

ಸದ್ಯ ದರ್ಶನ್ ಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆದಿದ್ದು, ಯಾವುದೇ ಪ್ರಾಣಾಪಾಯವಿಲ್ಲ ಎಂದು ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಉಪೇಂದ್ರ ಶೆಣೈ ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದರ್ಶನ್ ಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, 25 ಹೊಲಿಗೆ ಹಾಕಲಾಗಿದೆ. ಅವರ ಮುಂಗೈ ಮುರಿದಿದೆ. ಅದಕ್ಕೆ ಪ್ಲೇಟ್ ಹಾಕಿದ್ದೇವೆ. ಸದ್ಯ ಆಸ್ಪತ್ರೆಯಲ್ಲಿಯೇ ಇರುತ್ತಾರೆ. ಸಾಧ್ಯವಾದರೇ ಇಂದು ವಾರ್ಡ್ ಗೆ ಶಿಫ್ಟ್ ಮಾಡಲಾಗುವುದು.

Reason for the Darshan car accident was the negligence of the driver

24 ರಿಂದ 48 ಗಂಟೆಯವರೆಗೂ ಆಸ್ಪತ್ರೆಯಲ್ಲಿಯೇ ಪರಿಶೀಲನೆಯಲ್ಲಿ ಇರಿಸಲಾಗುತ್ತದೆ. ಇಬ್ಬರು ನುರಿತ ವೈದ್ಯರಿಂದ ಸೂಕ್ತ ಚಿಕಿತ್ಸೆ ನಡೆಸಲಾಗುತ್ತಿದೆ. ಇನ್ನು ನಟ ದೇವರಾಜ್ ಅವರ ಎಡಗೈ ಬೆರಳಿಗೆ ಪೆಟ್ಟಾಗಿದೆ. ಪ್ರಜ್ವಲ್ ದೇವರಾಜ್ ಗೆ ಎದೆ ಹಾಗೂ ತಲೆ ಭಾಗಕ್ಕೆ ಗಾಯವಾಗಿದೆ.

ಕಾರು ಚಾಲಕನಿಗೆ ಕಾಲು, ಕೈಗೆ ಪೆಟ್ಟಾಗಿದೆ. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.

ದರ್ಶನ್ ಗೆ ಡಾ. ಅಜಯ್ ಹೆಗ್ಡೆ, ಡಾ. ವಿಜಯ್ ವೈದ್ಯ, ಡಾ. ಉಪೇಂದ್ರ ಶೈಣೈ ಸರ್ಜರಿ ನಡೆಸಿದ್ದು, 48 ಗಂಟೆಗಳ ಬಳಿಕ ಡಿಸ್ಚಾರ್ಜ್ ಮಾಡುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+