ವೈಭವದ ರಾಯರ ಆರಾಧನೆಗೆ ಮಂತ್ರಾಲಯ ಸಜ್ಜು
ಮೈಸೂರು, ಆಗಸ್ಟ್.23: ಮಂತ್ರಾಲಯದಲ್ಲಿ ಆಗಸ್ಟ್ 25 ರಂದು ಶನಿವಾರದಿಂದ ರಾಯರ ಆರಾಧನೆ ವಿಜೃಂಭಿಸಲಿದೆ. ಜೊತೆಗೆ ಇದರ ಮೇಲೆ ಏನಾದರೂ ಪರಿಣಾಮ ಬೀರಬಹುದೆಂಬ ಗೊಂದಲಗಳು ಶುರುವಿಟ್ಟುಕೊಂಡಿದೆ. ರಾಯರ ಆರಾಧನೆಗೆ ಹೇಗೆ ನಡೆಯುತ್ತಿದೆ? ಮೂಲವೃಂದಾವನದ ಸ್ಥಿತಿ ಹೇಗಿದೆ? ಆರಾಧನೆಗೆ ಹೋಗಬಹುದೇ ಎಂಬ ಹಲವು ಗೊಂದಲಗಳಿಗೆ ಇಲ್ಲಿದೆ ಉತ್ತರ...
ಮಂತ್ರಾಲಯದ ರಾಯರ ಮೂಲ ಬೃಂದಾವನದ ಸ್ಥಳದಲ್ಲಿರುವ ತುಂಗಾ - ಭದ್ರಾ ನದಿ ತುಂಬಿ ಹರಿಯುತ್ತಿದೆ. ಆದರೆ ಅಪಾಯದ ಮಟ್ಟದಲ್ಲಿಲ್ಲ ಎಂಬುದು ರಾಯರ ಮಠದ ಆಡಳಿತ ಮಂಡಳಿಯ ಸ್ಫಷ್ಟನೆ. ನೆರೆ, ಪ್ರವಾಹದ ಎಫೆಕ್ಟ್ ಇಲ್ಲಿ ತಟ್ಟುವುದಿಲ್ಲ. ಜನರು ಪ್ರತಿ ವರುಷದಂತೆ ಲಕ್ಷೋಪಾದಿಯಲ್ಲಿ ಹರಿದುಬರುತ್ತಾರೆ.
ನದಿ ತುಂಬಿದ್ದು, ಜನರಿಗೆ ನದಿಯ ಬಳಿ ತೆರಳದಂತೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಪೊಲೀಸ್ ಭದ್ರತೆ ಸಹ ನೀಡಲಾಗಿದೆ ಎಂದು ಮಂತ್ರಾಲಯ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಆರಾಧನೆ ಸಂದರ್ಭ ಭಕ್ತರ ಸಂಖ್ಯೆ ಹೆಚ್ಚುವ ಕಾರಣದಿಂದಾಗಿ 20 ಈಜುಗಾರರನ್ನು ನದಿ ದಡದಲ್ಲಿ ನಿಯೋಜಿಸಲು ಹಾಗೂ ಅಗತ್ಯ ಬಿದ್ದಲ್ಲಿ ಬಳಕೆಗೆ ತೆಪ್ಪಗಳ ವ್ಯವಸ್ಥೆ ಮಾಡಲು ಶ್ರೀಮಠ ತೀರ್ಮಾನ ಕೈಗೊಂಡಿದೆ.

ಮಂತ್ರಾಲಯದಲ್ಲಿ ಈಗ ಗುರು ರಾಘವೇಂದ್ರ ರಾಯರ 347ನೇ ಆರಾಧನ ಮಹೋತ್ಸವ ಸಂಭ್ರಮ ಮನೆಮಾಡಿದೆ. ಆ.25ರಿಂದ 31ರವರೆಗೆ ಏಳು ದಿನಗಳ ಕಾಲ ನಡೆಯಲಿರುವ ಸಪ್ತರಾತ್ರೋತ್ಸವಕ್ಕೆ ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥರು ಧ್ವಜಾರೋಹಣ ಮೂಲಕ ಚಾಲನೆ ನೀಡಿದ್ದಾರೆ.
ರಾಯರ ದರ್ಶನಕ್ಕೆ ದೇಶದ ಮೂಲೆ ಮೂಲೆಗಳಿಂದ ಭಕ್ತರ ದಂಡು ಹರಿದು ಬರುತ್ತಿದೆ. ಭಕ್ತರಿಗಾಗಿ ಮಠದ ಆಡಳಿತ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ. ರಾಯರ ಆರಾಧನೆ ಅಂಗವಾಗಿ ಸಪ್ತ ರಾತ್ರೋತ್ಸವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ, ಗ್ರಂಥಗಳ ಲೋಕಾರ್ಪಣೆ, ಪ್ರವಚನ ಅನುಗ್ರಹ ಪ್ರಶಸ್ತಿ ಪ್ರಧಾನ ಸಮಾರಂಭಗಳು ಶ್ರೀಮಠದ ಪೀಠಾಧಿಪತಿ ಸುಬುದೇಂದ್ರತೀರ್ಥ ಶ್ರೀಪಾದಂಗಳವರ ಸಾನಿಧ್ಯದಲ್ಲಿ ಜರುಗಲಿವೆ.

ಮದುವಣಗಿತ್ತಿಯಂತೆ ಸಿಂಗಾರಗೊಂಡ ಮಂತ್ರಾಲಯ
ನವ ಮದುವಣಗಿತ್ತಿಯಂತೆ ಸಿಂಗಾರಗೊಂಡಿರೋ ನವ ಮಂತ್ರಾಲಯದಲ್ಲಿ ಈಗ ರಾಯರ ಆರಾಧನೆ ನಾದ ಮೊಳಗಿದೆ. ಸಪ್ತರಾತ್ರೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿವೆ.
ಗೋವು ,ಗಜಾ, ಲಕ್ಷ್ಮೀ ಪೂಜೆ, ಧಾನ್ಯ ಪೂಜೆ ಹಾಗೂ ಪ್ರಭು ಉತ್ಸವ ವಿಜೃಂಭಣೆಯಿಂದ ನಡೆಯುತ್ತಿವೆ. ಧ್ವಜಾರೋಹಣ ಮೂಲಕ ಶ್ರೀಗಳು ಆರಾಧನಾ ಮಹೋತ್ಸವಕ್ಕೆ ಆ.25ಚಾಲನೆ ನೀಡಿದ್ದಾರೆ.
ಮಧ್ಯಾರಾಧನೆ ದಿನ ಸುವರ್ಣ ರಥೋತ್ಸವ ಹಾಗೂ ಉತ್ತರಾರಾಧನೆ ದಿನ ಮಹಾ ರಥೋತ್ಸವ ನಡೆಯಲಿದೆ. ಅಲ್ಲದೆ ಮಠದಲ್ಲಿ ಏಳುದಿನ ಕಾಲ ಪ್ರತಿದಿನ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿವೆ.
ಆ.25ರಂದು ಸಂಜೆ ಆರಾಧನಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದ್ದು, ಆ.27 ಪೂರ್ವಾರಾಧನೆ, 28ರಂದು ಮಧ್ಯಾರಾಧನೆ, 29ರಂದು ಉತ್ತರಾರಾಧನೆ ನಡೆಯಲಿದೆ. ಆ.25 ರಿಂದ 31ರವರೆಗೆ ಸಂಜೆ 6ಕ್ಕೆ ಶ್ರೀ ಮಠದ ಪೂಜಾ ಮಂದಿರದಲ್ಲಿ ಹುಬ್ಬಳ್ಳಿಯ ವಿದ್ವಾನ್ ಶ್ರೀಹರಿ ಆಚಾರ್ಯ ವಾಲ್ವೇಕರ್ ಹಾಗೂ ಪ್ರೊ. ಶ್ರೀಮದ್ ಭಾಗವತ ಸಪ್ತಾಹ ಜರುಗಲಿದ್ದು, 25ರಂದು ಯಜುರ್ವೇದ ನಿತ್ಯ ನೂತನ ಉಪಕರ್ಮ ನಡೆಯಲಿವೆ.

ಪ್ರಶಸ್ತಿ ಪ್ರಧಾನ ಸಮಾರಂಭ
ಪ್ರತಿ ವರುಷದಂತೆ ಈ ಬಾರಿಯೂ ಸಹ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಆ.27ರ ಕೊನೆಯ ದಿನದಂದು ಸಂಜೆ ನಡೆಯಲಿರುವ ವೇದಿಕೆ ಕಾರ್ಯಕ್ರಮದಲ್ಲಿ ಪ್ರಸಿದ್ಧ ವಿದ್ವಾಂಸರಾದ ತಿರುಪತಿಯ ಕೆ.ಇ.ದೇವನಾಥನ್, ಧಾರವಾಡದ ಗೋವಿಂದಾಚಾರ್ಯ ವಿ.ನವಲಗುಂದ, ಸಾಮಾಜಿಕ ಸೇವೆಯಡಿ ಬೆಂಗಳೂರಿನ ನಾ.ಕೆ.ಶ್ರೀಧರರಾವ್, ಬಳ್ಳಾರಿಯ ಡಾ.ಬಿ.ಕೆ ಶ್ರೀನಿವಾಸಮೂರ್ತಿ ಅವರಿಗೆ ಶ್ರೀರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಇದೇ ವೇಳೆ ಶ್ರೀಮಠದಿಂದ ಹೊರತಂದ 6 ಗ್ರಂಥಗಳ ಬಿಡುಗಡೆ ಸಮಾರಂಭ ಮತ್ತು 28ರಂದು ತಿರುಪತಿಯ ಟಿಟಿಡಿ ಶೇಷವಸ್ತ್ರ ಸಮರ್ಪಣೆ, 29ರಂದು ಮಹಾರಥೋತ್ಸವ ಜರುಗಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
-
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು -
ಬಿಜೆಪಿಯಿಂದ ನಟ ವಿಜಯ್ಗೆ ಡಿಸಿಎಂ ಹುದ್ದೆ, 80 ಸೀಟುಗಳ ಆಫರ್; ತಮಿಳುನಾಡು ಚುನಾವಣೆಗೆ ಹೊಸ ಮೈತ್ರಿ ಲೆಕ್ಕಾಚಾರ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
LPG New Rule: ಎಲ್ಪಿಜಿ ಹೊಸ ನಿಯಮ: ಪಿಎನ್ಜಿ ಸಂಪರ್ಕ ಇದ್ದರೆ ಇನ್ನು ಮುಂದೆ ಸಿಲಿಂಡರ್ ಸಿಗಲ್ಲ -
Government Employees: ಪಶ್ಚಿಮ ಬಂಗಾಳ ಸರ್ಕಾರಿ ನೌಕರರಿಗೆ ಸಿಎಂ ಮಮತಾ ಬ್ಯಾನರ್ಜಿ ಬಂಪರ್ ಕೊಡುಗೆ -
ರಾಜ್ಯದಲ್ಲಿ ಕಮರ್ಷಿಯಲ್ ಉದ್ದೇಶಕ್ಕೆ ಗೃಹಬಳಕೆ LPG ಸಿಲಿಂಡರ್ ಬಳಸಿದವರ ಮೇಲೆ ಅಧಿಕಾರಿಗಳ ಖಡಕ್ ದಾಳಿ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ












Click it and Unblock the Notifications