Ration card: ಪಡಿತರ ಚೀಟಿದಾರರೇ ಅಪ್ಪಿತಪ್ಪಿಯೂ ಈ ಕೆಲಸಕ್ಕೆ ಕೈ ಹಾಕಿದ್ರೆ ಸಮಸ್ಯೆ ಕಟ್ಟಿಟ್ಟ ಬುತ್ತಿ
ಮೈಸೂರು, ನವೆಂಬರ್, 16: ಇತ್ತೀಚಿನ ದಿನಗಳಲ್ಲಿ ಕೆಲವರು ಅನ್ನಭಾಗ್ಯ ಅಕ್ಕಿಯನ್ನು ಬೇರೆಯವರಿಗೆ ಮಾಡುವ ಆರೋಪಗಳು ಕೇಳಿಬಂದಿವೆ. ಆದ್ದರಿಂದ ಮೈಸೂರಿನಲ್ಲಿ ಇದನ್ನು ತಡೆಯಲು ಜಿಲ್ಲಾಧಿಕಾರಿಗಳು ಖಡಕ್ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಈ ಸಂದೇಶವನ್ನು ಜಿಲ್ಲೆಯ ಜನರು ಗಮನಿಸಲೇಬೆಕು.
ಪಡಿತರ ಚೀಟಿಯನ್ನು ಸಾಮಾನ್ಯ ಜನರ ನೀಡಲಾಗುತ್ತದೆ. ಆದರೆ ಕೆಲವರು ನ್ಯಾಯಬೆಲೆ ಅಂಗಡಿಗಳಲ್ಲಿ ತಂದ ಪಡಿತರವನ್ನು ಬೇರೆಯವರಿಗೆ ಮಾರಾಟ ಮಾಡುತ್ತಿರುವ ಪ್ರಕರಣಗಳು ಹೊರಬರುತ್ತಿವೆ. ಹೀಗೆ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಮಾರಾಟ ಮಾಡಿಕೊಂಡವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955ರ ಅಡಿ ಪ್ರಕರಣ ದಾಖಲು ಮಾಡಲಾಗುತ್ತಿದೆ. ಕಾರ್ಡುದಾರರು ಸರ್ಕಾರದಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡೆಯುವ ಪಡಿತರ ಪದಾರ್ಥಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ ಆಗಿದೆ.

ಪಡಿತರ ಪದಾರ್ಥಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದು ಕಂಡುಬಂದರೆ ಪಡಿತರ ಚೀಟಿದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಮೂಲಕ ಅಕ್ಕಿಯನ್ನು ಮಾರಿಕೊಳ್ಳುವವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಸರ್ಕಾರ ಜಾರಿಗೆ ತಂದಿರುವ ಎಲ್ಲಾ ಯೋಜನೆಗಳಿಗೆ ರೇಷನ್ ಕಾರ್ಡ್ ಕಡ್ಡಾಯ ಆಗಿದೆ. ಸರ್ಕಾರ ರೇಷನ್ ಕಾರ್ಡ್‌ಗೆ ಇಕೆವೈಸಿ ಮಾಡಿಸುವುದು ಕಡ್ಡಾಯ ಮಾಡಿದೆ. ಅಸಲಿ ರೇಷನ್ ಕಾರ್ಡ್ ಯಾವುದು ನಕಲಿ ರೇಷನ್ ಕಾರ್ಡ್ ಯಾವುದು ಎಂಬುದನ್ನು ತಿಳಿಯಲು ಸರ್ಕಾರ ಇಕೆವೈಸಿ ಕಡ್ಡಾಯ ಮಾಡಿದೆ.
ಆದಕ್ಕಾಗಿ ಸರ್ಕಾರ ಡಿಸೆಂಬರ್ 30ರ ವರೆಗೂ ಕಾಲಾವಕಾಶ ನೀಡಿದ್ದು, ಇದನ್ನು ಮಾಡಿಸದೇ ಹೋದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುವ ಸಾಧ್ಯತೆ ಇದೆ. ಸರ್ಕಾರದ ಪ್ರತಿಯೊಂದು ಯೋಜನೆಗಳ ಸೌಲಭ್ಯ ಪಡೆಯಲು ರೇಷನ್ ಕಾರ್ಡ್ ಬೇಕಾಗುತ್ತದೆ. ರೇಷನ್ ಕಾರ್ಡ್ ಪಡಿತರ ಪಡೆಯಲು ಮಾತ್ರವಲ್ಲದೇ ಗುರುತಿನ ಚೀಟಿ ಪಡೆಯಲು ಕೂಡ ಸಹಕಾರಿ ಆಗುತ್ತದೆ.












Click it and Unblock the Notifications