ರಂಗಾಯಣ ಕಲಾವಿದ ಮಂಜುನಾಥ್ ಬೆಳೆಕೆರೆ ಇನ್ನಿಲ್ಲ
ಮೈಸೂರು, ಡಿಸೆಂಬರ್. 19 : ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರಂಗಾಯಣ ಕಲಾವಿದ ಮಂಜುನಾಥ್ ಬೆಳೆಕೆರೆ (52) ಸೋಮವಾರ ಬೆಳಗ್ಗೆ ಮೈಸೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ.
ಹರಿಹರದ ಮೂಲದವರಾದ ಮಂಜುನಾಥ್ ಅವರು, 1989ರಿಂದಲೂ ರಂಗಾಯಣದಲ್ಲಿ ಸಕ್ರಿಯ ಕಲಾವಿದರಾಗಿದ್ದರು. ನಾಟಕ ರಚನೆ, ನಿರ್ದೇಶನ ಮತ್ತು ಅಭಿನಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಬಿ.ವಿ.ಕಾರಂತ ಸೇರಿದಂತೆ ಕಲಾವಿದರ ಜೊತೆ ಒಡನಾಟವನ್ನಿಟ್ಟುಕೊಂಡಿದ್ದರು.

ಬಂದೂಕು ಕಳ್ಳನ ಸೆರೆ: ಬಂದೂಕು ಕಳವು ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ರಾಮಾಪುರ ಠಾಣಾ ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ.
ಕರೆದೊಡ್ಡಿ ನಿವಾಸಿಯಾಗಿರುವ ಮಾದೇಶ್ ಅಲಿಯಾಸ್ ಮೂಸ(37) ಇತ್ತೀಚಿಗೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ ನಡೆದ ಕಳ್ಳಬೇಟೆ ತಡೆ ಶಿಬಿರದಿಂದ ಬಂದೂಕನ್ನು ಕದ್ದು ಪರಾರಿಯಾಗಿದ್ದ.
ಈತನೊಂದಿಗೆ ಶಾಮೀಲಾಗಿದ್ದ ಇನ್ನೊಬ್ಬ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.












Click it and Unblock the Notifications