ಮೈಸೂರು; ರಮ್ಮನಹಳ್ಳಿ ರಾಜ್ಯದ ಮೊದಲ ವೈ-ಫೈ ಗ್ರಾಮ
ಮೈಸೂರು, ಮಾರ್ಚ್ 01; ಬಿಎಸ್‌ಎನ್‌ಎಲ್ ಸಾರ್ವಜನಿಕ ವೈ-ಫೈ ನೀತಿಯಡಿ ರಾಜ್ಯದಲ್ಲೇ ಮೊದಲ ಸಾರ್ವಜನಿಕ ದತ್ತಾಂಶ ಕೇಂದ್ರವನ್ನು ರಮ್ಮನಹಳ್ಳಿಯಲ್ಲಿ ಸ್ಥಾಪನೆ ಮಾಡಿದೆ. ಸಾರ್ವಜನಿಕ ವೈ-ಫೈ ಪಡೆದ ರಾಜ್ಯದ ಮೊದಲ ಗ್ರಾಮ ರಮ್ಮನಹಳ್ಳಿಯಾಗಿದೆ.
ಭಾರತ್ ಸಂಚಾರ ನಿಗಮ ನಿಯಮಿತದ ಕರ್ನಾಟಕ ವೃತ್ತದ ಮುಖ್ಯ ಪ್ರಧಾನ ವ್ಯವಸ್ಥಾಪಕ ದೇವೇಶ್ ಕುಮಾರ್ ಮಂಗಳವಾರ ನಡೆಯುವ ಕಾರ್ಯಕ್ರಮದಲ್ಲಿ ಯೋಜನೆ ಉದ್ಘಾಟನೆ ಮಾಡಲಿದ್ದಾರೆ. ಇನ್ನು ಮುಂದೆ ಮೈಸೂರು ತಾಲೂಕಿನ ರಮ್ಮನಹಳ್ಳಿಯ ಸಂಪೂರ್ಣ ವೈ-ಫೈ ಗ್ರಾಮವಾಗಲಿದೆ.
ಬಿಎಸ್ಎನ್‌ಎಲ್‌ನ ಮೈಸೂರು ವೃತ್ತ ಗ್ರಾಮಕ್ಕೆ ಆಪ್ಟಿಕಲ್ ಫೈಬರ್ ಸಂಪರ್ಕದ ಮೂಲಕ 8 ಕಡೆ ಸಾರ್ವಜನಿಕ ದತ್ತಾಂಶ ಕೇಂದ್ರವನ್ನು ಸ್ಥಾಪನೆ ಮಾಡಿದೆ. ಗ್ರಾಮದ 32 ಪ್ರದೇಶಗಳಲ್ಲಿ ವೈ-ಫೈ ಹಾಟ್ ಸ್ಟಾಟ್ ಲಭ್ಯವಿರಲಿದೆ.

ರಮ್ಮನಹಳ್ಳಿಯು ಸಂಪೂರ್ಣ ವೈ-ಪೈ ಗ್ರಾಮವಾಗಿದ್ದು, ವಿವಿಧ ಯೋಜನೆಯಡಿ 50 ಎಂಬಿಪಿಎಸ್ ವೇಗದ ತನಕ ಇಂಟರ್ ನೆಟ್ ಸಂಪರ್ಕ ಪಡೆಯಬಹುದಾಗಿದೆ. ಬಿಎಸ್‌ಎನ್‌ಎಲ್ ವೈ-ಫೈ 69 ಸೇರಿದಂತೆ 5 ಯೋಜನೆಗಳನ್ನು ಜನರಿಗಾಗಿ ಪರಿಚಯಿಸಲಾಗಿದೆ.
5 ಯೋಜನೆಗಳು; ರಮ್ಮನಹಳ್ಳಿ ಗ್ರಾಮದ ಜನರು 69 ರೂ. ಪಾವತಿ ಮಾಡಿ 30 ದಿನದ ತನಕ 300 ಜಿಡಿ ಡೇಟಾವನ್ನು ಬಿಎಸ್‌ಎನ್‌ಎಲ್ ವೈಫೈ 69 ಯೋಜನೆಯಡಿ ಪಡೆಯಬಹುದಾಗಿದೆ.
ಬಿಎಸ್‌ಎನ್‌ಎಲ್ ವೈಫೈ 9 ಯೋಜನೆಯಡಿ 9 ರೂ. ಪಾವತಿ ಮಾಡಿದರೆ 1 ದಿನಕ್ಕೆ 1 ಜಿಬಿ ಡೇಟಾ ಪಡೆಯಬಹುದಾಗಿದೆ. ಇದೇ ಮಾದರಿಯ ಒಟ್ಟು 5 ಯೋಜನೆಗಳನ್ನು ಬಿಎಸ್ಎನ್‌ಎಲ್ ಪರಿಚಯಿಸಿದೆ. ಜನರು ವೋಚರ್ ಖರೀದಿ ಮಾಡಿದ ಬಳಿಕ ಮೊಬೈಲ್ ಅಥವ ಲ್ಯಾಪ್ ಟಾಪ್ ಮೂಲಕ ವೈ-ಫೈ ಸಂಪರ್ಕ ಪಡೆಯಬಹುದಾಗಿದೆ.
ಬಿಎಸ್ಎನ್‌ಎಲ್ ದೇಶದಲ್ಲಿ 40 ಸಾವಿರ ವೈ-ಫೈ ಹಾಟ್ ಸ್ಟಾಟ್‌ಗಳನ್ನು ನಿರ್ಮಿಸಲಾಗುತ್ತದೆ ಎಂದು ಘೋಷಣೆ ಮಾಡಿತ್ತು. ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಸಾರ್ವಜನಿಕ ವೈ-ಫೈ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ.
-
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ












Click it and Unblock the Notifications