'ನಾನು ಕನ್ನಂಬಾಡಿ ಕಟ್ಟೆ' ಮುಟ್ಟುಗೋಲು ಹಾಕಿ: ಮೈಸೂರಿನಲ್ಲಿ ಪ್ರತಿಭಟನೆ

ಮೈಸೂರು, ಜೂನ್ 7 : ಇತಿಹಾಸಕಾರ ಪ್ರೊ.ನಂಜರಾಜೇ ಅರಸು ಅವರ 'ನಾನು ಕನ್ನಂಬಾಡಿ ಕಟ್ಟೆ, ಹೀಗೊಂದು ಆತ್ಮಕಥೆ' ಪುಸ್ತಕ ಬಿಡುಗಡೆ ಮಾಡಿದ್ದನ್ನ ವಿರೋಧಿಸಿ ಮೈಸೂರಿನಲ್ಲಿ ಪ್ರಜ್ಞಾವಂತ ನಾಗರಿಕ ವೇದಿಕೆ ಕಾರ್ಯಕರ್ತರು ಮೌನ ಪ್ರತಿಭಟನೆ ನಡೆಸಿದರು.

'ನಂಜರಾಜ ಅರಸು ಅವರ 'ನಾನು ಕನ್ನಂಬಾಡಿ ಕಟ್ಟೆ... ಹೀಗೊಂದು ಆತ್ಮಕಥೆ' ಪುಸ್ತಕ ಬಿಡುಗಡೆಗೊಂಡಿದ್ದು, ಅದರಲ್ಲಿನ ಕನ್ನಂಬಾಡಿ ಕಟ್ಟೆ ನಿರ್ಮಾಣಕ್ಕೆ ಮೂಲ ಯೋಜನೆ ರೂಪಿಸಿದವರು ವಿಶ್ವೇಶ್ವರಯ್ಯನವರಲ್ಲ ಎಂಬ ಉಲ್ಲೇಖ ತಪ್ಪು.[ವಿವಾದಿತ 'ನಾನು ಕನ್ನಂಬಾಡಿ ಕಟ್ಟೆ' ಆತ್ಮಕಥೆ ಪುಸ್ತಕ ಬಿಡುಗಡೆ]

Protest against Nanu Kannambadi Katte book in Mysuru

ಕನ್ನಂಬಾಡಿ ಕಟ್ಟೆ ನಿರ್ಮಾಣದಲ್ಲಿ ವಿಶ್ವೇಶ್ವರಯ್ಯ ಮೂಲ ರಚನಾಕಾರರಲ್ಲ. ಬ್ರಿಟಿಷ್ ಇಂಜಿನಿಯರ್ ಡಾಸ್ ಕನ್ನಂಬಾಡಿ ಮೂಲ ರಚನೆಕಾರ. ಯಾರದ್ದೋ ಯೋಜನೆ ಮತ್ಯಾರದ್ದೊ ಹೆಸರು ಬಂದಿದೆ ಎಂಬ ನಂಜರಾಜೇ ಅರಸ್ ಅಭಿಪ್ರಾಯ ಅಪ್ಪಟ ಸುಳ್ಳು' ಎಂದು ಪ್ರತಿಭಟನಾನಿರತರು ಹೇಳಿದರು.

ನಂಜನರಾಜೇ ಅರಸ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಪ್ರಜ್ಞಾವಂತ ನಾಗರಿಕ ವೇದಿಕೆ ಕಾರ್ಯಕರ್ತರು ಮೈಸೂರಿನ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್ ಮುಂಭಾಗದ ವಿಶ್ವೇಶ್ವರಯ್ಯ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು. ಜತೆಗೆ ನಂಜರಾಜೇ ಅರಸ್ ಇತಿಹಾಸ ತಿರುಚಿದ್ದಾರೆ. ಕೂಡಲೇ ಪುಸ್ತಕ ಮುಟ್ಟುಗೋಲು ಹಾಕಿಕೊಳ್ಳಬೇಕು. ನಂಜರಾಜೇ ಅರಸ್ ಗೆ ದೇವರು ಒಳ್ಳೆ ಬುದ್ಧಿ ಕೊಡಲಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+