ಮೈಸೂರಿನಲ್ಲಿ ಬಿಗ್ ಬಾಸ್ ಸ್ಪರ್ಧಿಗಳಾದ ಅಕ್ಷತಾ-ರಾಕೇಶ್ ವಿರುದ್ಧ ಪ್ರತಿಭಟನೆ

ಮೈಸೂರು, ಡಿಸೆಂಬರ್ 7: ಕನ್ನಡದ ಪ್ರತಿಷ್ಠಿತ ಖಾಸಗಿ ಚಾನೆಲ್ ಒಂದರಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ - 6 ನಿಂದ ಜನತೆಗೆ ಹಾಗೂ ನೋಡುಗರಿಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ ಎಂದು ಆರೋಪಿಸಿ ಕನ್ನಡ ಕ್ರಾಂತಿ ದಳ ಮೈಸೂರಿನಲ್ಲಿ ಪ್ರತಿಭಟನೆ ನಡೆಸಿತು.

ರಾಕೇಶ್ ಎಷ್ಟೇ ಬ್ರೇನ್ ವಾಶ್ ಮಾಡಿದರೂ ಅಕ್ಷತಾ ಬಗ್ಗಲಿಲ್ಲ.!

ಅಗ್ರಹಾರ ವೃತ್ತದಲ್ಲಿ ಜಮಾಯಿಸಿ ಮಾತನಾಡಿದ ಪ್ರತಿಭಟನಾಕಾರರು, ಬಿಗ್ ಬಾಸ್ ನಲ್ಲಿ ಪಾಲ್ಗೊಂಡಿರುವ ಸ್ಪರ್ಧಿಗಳಾದ ಅಕ್ಷತಾ ಮತ್ತು ರಾಕೇಶ್ ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತಿದ್ದು, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಯುವ ಪೀಳಿಗೆಯ ಮೇಲೆ ಇದು ಪರಿಣಾಮ ಬೀರಲಿದೆ.

ಸೂಕ್ಷ್ಮತೆ ಅರ್ಥೈಸಿಕೊಳ್ಳದ, ಹೇಳಿದ್ದನ್ನ ಒಪ್ಪಿಕೊಳ್ಳದ ರಾಕೇಶ್-ಅಕ್ಷತಾಗೆ ಏನನ್ನಬೇಕು.?

ಭಾರತೀಯ ಪರಂಪರೆಯಲ್ಲಿ ಮದುವೆಯಾದ ಹೆಣ್ಣು ಮಕ್ಕಳು ಹೇಗೆ ನಡೆದುಕೊಳ್ಳಬೇಕೆಂದು ಎಲ್ಲರಿಗೂ ತಿಳಿದಿದೆ. ಆದರೆ ಇಡೀ ಜಗತ್ತೇ ವೀಕ್ಷಣೆ ಮಾಡುತ್ತಿರುವ ಕಾರ್ಯಕ್ರಮವೊಂದರಲ್ಲಿ ಅವರಿಬ್ಬರೂ ಅನುಚಿತವಾಗಿ ವರ್ತಿಸುತ್ತಿರುವುದು ಸರಿಯಲ್ಲ ಎಂದರು.

Protest against Kannada Bigg Boss 6 contestants Akshata-Rakesh

ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಇಡೀ ವಿಶ್ವಕ್ಕೆ ಮದುವೆ ಎಂಬ ಪವಿತ್ರ ಬಂಧನವನ್ನು ಕೊಟ್ಟಿದ್ದು, ಇವರಿಬ್ಬರೂ ಅದಕ್ಕೆ ಕಿಂಚಿತ್ತು ಗೌರವ ನೀಡುತ್ತಿಲ್ಲ. ಇಬ್ಬರನ್ನು ಈ ಕಾರ್ಯಕ್ರಮದಿಂದ ಹೊರ ಹಾಕಿ ಎಂದು ಒತ್ತಾಯಿಸಿದರು.

ದಡ್ಡರ ತರಹ ಆಡುತ್ತಿದ್ದೀರಾ': ರಾಕೇಶ್-ಅಕ್ಷತಾ ವಿರುದ್ಧ ಗುಡುಗಿದ ಸುದೀಪ್

ಪ್ರತಿಭಟನೆಯಲ್ಲಿ ಕಾಂತ್ರಿದಳದ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸತ್ಯಪ್ಪ, ಶ್ರೀಧರ್ , ನವೀನ್ , ಭಾನು ಮೋಹನ್ ಸೇರಿದಂತೆ ಮತ್ತಿತರು ಇದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+