ಸ್ತನ ಕ್ಯಾನ್ಸರ್‌ಗೆ ಮದ್ದು ಕಂಡುಹಿಡಿದ ಮೈಸೂರಿನ ಪ್ರೊಫೆಸರ್
ಮೈಸೂರು, ಫೆಬ್ರವರಿ 3: ಇಂದು ಜಗತ್ತಿನಲ್ಲಿ ಅತ್ಯಂತ ಹೆಚ್ಚು ಜನರು ಬಲಿಯಾಗುತ್ತಿರುವ ಖಾಯಿಲೆ ಎಂದರೆ ಕ್ಯಾನ್ಸರ್. ಈ ಖಾಯಿಲೆಯನ್ನು ಪ್ರಾರಂಭಿಕ ಹಂತದಲ್ಲಿ ಗುಣಪಡಿಸಬಹುದಾದರೂ ನಂತರದ ಹಂತಗಳಲ್ಲಿ ಗುಣಪಡಿಸಲು ಸಾಧ್ಯವೇ ಇಲ್ಲ. ಈ ನತದೃಷ್ಟ ರೋಗಿಗಳಿಗೆ ಸಾವೇ ಗತಿ.
ದೇಹದ ಯಾವುದೇ ಅಂಗಕ್ಕಾದರೂ ಕ್ಯಾನ್ಸರ್ ತಗುಲಬಹುದಾಗಿದೆ. ವಿಶ್ವದಲ್ಲಿ ಲಕ್ಷಾಂತರ ಮಹಿಳೆಯರು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್ ನಿರೋಧಕ ಔಷಧಿಗಳು ಅಲ್ಪ ಪ್ರಮಾಣದಲ್ಲಿ ಮಾತ್ರ ರೋಗ ಗುಣಪಡಿಸುತ್ತಿವೆ.
ಇದೀಗ ಇದಕ್ಕೆ ಅಲ್ಪ ಪ್ರಮಾಣಕ್ಕಿಂತ ದೊಡ್ಡ ಮಟ್ಟದಲ್ಲಿ ಕೆಲಸ ಮಾಡುವ ಔಷಧವೊಂದನ್ನು ಮೈಸೂರು ವಿವಿಯ ರಾಸಾಯನಿಕ ವಿಭಾಗದ ಪ್ರೊಫೆಸರ್ ಡಾ.ಬಸಪ್ಪ ಅವರು ಕಂಡು ಹಿಡಿದಿದ್ದಾರೆ.

ಈಗ ಸ್ತನ ಕ್ಯಾನ್ಸರ್‌ಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಔಷಧಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಈ ಔಷಧ ಕೆಲಸ ಮಾಡಲಿದ್ದು, ಇದು ಬಸಪ್ಪ ಅವರ ಹಲವು ವರ್ಷಗಳ ಸಂಶೋಧನೆಯ ಫಲವಾಗಿದೆ.
ಈ ಕುರಿತು ಮಾತನಾಡಿದ ಮೈಸೂರು ವಿಶ್ವವಿದ್ಯಾಲಯದ ಸಾವಯವ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಬಸಪ್ಪ ಅವರು, "ಸ್ತನ ಕ್ಯಾನ್ಸರ್ ಹೋಗಲಾಡಿಸಲು ಔಷಧ ಬೀಜವನ್ನು ಪತ್ತೆ ಹಚ್ಚಿ, ಈ ಹಿಂದಿನ ಔಷಧಿಯಾದ ಟ್ಯಾಮೊಕ್ಸಿಫೆನ್‍ಗೆ ಹೋಲಿಸಿದಾಗ ಇದಕ್ಕಿಂತ ತಾವು ಕಂಡು ಹಿಡಿದ ಔಷಧ ಹೆಚ್ಚು ಉಪಯುಕ್ತವಾಗಿದೆ" ಎಂದರು.
ಎಎಂಟಿಎ ಎಂಬ ಹೆಸರಿನ ಔಷಧಿ ಬೀಜವನ್ನ ಪ್ರಯೋಗಾಲಯದಲ್ಲಿ ವಿನ್ಯಾಸಗೊಳಿಸಿ ಅಭಿವೃದ್ಧಿಗೊಳಿಸಿದ್ದೇವೆ. ಇದು ಟ್ಯಾಮೊಕ್ಸಿಫೆನ್‍ಗಿಂತ ಹೆಚ್ಚು ಸಾಂದ್ರತೆ ಹಾಗೂ ಸ್ತನ ಕ್ಯಾನ್ಸರ್ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ನಮ್ಮ ತಂಡದ ಸಾಧನೆ ಎಂದು ಪ್ರೊಫೆಸರ್ ಬಸಪ್ಪ ಅವರು ಹೇಳಿದರು.
ಈ ಸಂಶೋಧನೆಯಲ್ಲಿ ಫ್ರೋ.ಪೀಟರ್, ಲೋಬಿ, ಡಾ.ವಿಜಯ್, ಜೊತೆಯಲ್ಲಿ ವಿಶನ್ ಗ್ರೂಪ್ ಆನ್ ಸೈನ್ಸ್ ಅಂಡ್ ಟೆಕ್ನಾಲಜಿ ಕೂಡ ಜೊತೆಯಾಗಿದೆ. ಕರ್ನಾಟಕ ಮತ್ತು ಭಾರತ ಸರ್ಕಾರದ ನಿಧಿ ಹಾಗೂ ಸಹಕಾರ ನೀಡಿದೆ. ಈ ಔಷಧ ಸ್ತನ ಕ್ಯಾನ್ಸರ್ ಇದ್ದವರಿಗೆ ಚೇತರಿಕೆಗೆ ಹೆಚ್ಚು ವೇಗವಾಗಿ ಸಹಕಾರಿಯಾಗಲಿದೆ ಎಂದು ಡಾ.ಬಸಪ್ಪ ತಿಳಿಸಿದರು.
ನೂತನವಾಗಿ ಆವಿಷ್ಕರಿಸಿರುವ ಈ ಔಷಧದಿಂದಾಗಿ ಜಗತ್ತಿನ ಕೋಟ್ಯಾಂತರ ಸ್ತನ ಕ್ಯಾನ್ಸರ್ ರೋಗಿಗಳಿಗೆ ಉಪಯೋಗವಾಗಲಿದೆ ಎಂದು ಬಸಪ್ಪ ತಿಳಿಸಿದರು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications