Breaking; ಪ್ರಿಯಾಂಕ್ ಖರ್ಗೆ ಹಿಟ್ ಅಂಡ್ ರನ್ ನಾಯಕ; ಪ್ರತಾಪ್ ಸಿಂಹ

ಮೈಸೂರು, ಏಪ್ರಿಲ್ 29 ; "ಪ್ರಿಯಾಂಕ್ ಖರ್ಗೆ ಹಿಟ್ ಅಂಡ್ ರನ್ ನಾಯಕ. ಉಗುಳಿ ಓಡಿ ಹೋಗಿದ್ದಾರೆ ಅಷ್ಟೇ. ಆತ ಹೇಳಿಕೆ ಶೂರ" ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಟೀಕಿಸಿದರು.

ಶುಕ್ರವಾರ ಮೈಸೂರಿನಲ್ಲಿ ಮಾತನಾಡಿದ ಅವರು, "ಪ್ರಿಯಾಂಕ್ ಖರ್ಗೆ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಡಿ. ಸಾಕ್ಷಿ ಇದ್ದಿದ್ದರೆ ಕೊಡಲು ಏಕೆ ಭಯ. ಹಿಂದೆ ಬಿಟ್ ಕಾಯಿನ್ ವಿಚಾರದಲ್ಲೂ ಇದೇ ರೀತಿ ಮಾಡಿದ್ದರು" ಎಂದರು.

"ಸುಖಾ ಸುಮ್ಮನೆ ನಮ್ಮನ್ನು ಟಾರ್ಗೆಟ್ ಮಾಡುತ್ತಾರೆ ಎಂದು ಆರೋಪ ಮಾಡಿದ್ದರು. ಸಾಕ್ಷಿ ಕೊಡಿ ಅಂದರೆ ಹಿಟ್ ಅಂಡ್ ರನ್ ಮಾಡುತ್ತಾರೆ. ಇವರಿಂದ ಬೇರೆ ಏನನ್ನು ನಿರೀಕ್ಷಿಸಲು ಸಾಧ್ಯವಿಲ್ಲ" ಎಂದು ಸಂಸದರು ದೂರಿದರು.

Priyank Kharge Is Hit And Run Leader Says Pratap Simha

ಪಿಎಸ್‌ಐ ಹಗರಣದ ಕುರಿತು ಪ್ರತಿಕ್ರಿಯೆ ನೀಡಿದ ಅವರು, "ಪರೀಕ್ಷೆಯಲ್ಲಿ ಯಾರು ಅಕ್ರಮವೆಸಗಿದ್ದಾರೆ ಅವರ ಮೇಲೆ ಮಾತ್ರ ಕ್ರಮ ಕೈಗೊಳ್ಳಿ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರಿಗೆ ಅನ್ಯಾಯವಾಗಬಾರದು. ಕಷ್ಟಪಟ್ಟು ಓದುವವರ ಆತ್ಮ ವಿಶ್ವಾಸ ಕುಗ್ಗಿಸಬೇಡಿ. ಪರೀಕ್ಷೆಗಳು ಪಾರದರ್ಶಕವಾಗಿರಬೇಕು" ಎಂದರು.

"50 ಲಕ್ಷ ಕೊಟ್ಟು ಪಿಎಸ್‌ಐ ಆದವರು ಯಾವ ರೀತಿ ಕೆಲಸ ಮಾಡಬಹುದು?. ಮೊದಲ ದಿನದಿಂದಲೇ ಲಂಚದ ಅಂಗಡಿ ತೆರೆಯುತ್ತಾರೆ. ಇದರಿಂದ ಜನ ಸಾಮಾನ್ಯರಿಗೆ ನ್ಯಾಯ ಹೇಗೆ ಕೊಡುತ್ತಾರೆ?. ಪರೀಕ್ಷಾ ಅಕ್ರಮದ ಸಮಗ್ರ ತನಿಖೆಯಾಗಬೇಕು" ಎಂದು ಆಗ್ರಹಿಸಿದರು.

ಶಾಸಕ ಜಮೀರ್ ಅಹ್ಮದ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರತಾಪ್ ಸಿಂಹ, "ಜಮೀರ್ ಮನಸ್ಥಿತಿ ಆರೋಪಿಗಳಿಗೆ ಬೆಂಬಲ ನೀಡುವುದು. ಇದು ಸಿದ್ದರಾಮಯ್ಯ ಕೃಪಾಕಟಾಕ್ಷದಿಂದಲೇ ಆಗಿದೆ. ಹಿಂದೆ ಡಿ. ಜೆ. ಹಳ್ಳಿ, ಕೆಜಿ ಹಳ್ಳಿ ಗಲಭೆಯಲ್ಲೂ ಇವರು ಆರೋಪಿಗಳ ಪರ ಇದ್ದರು. ಕಾಂಗ್ರೆಸ್ ಪಕ್ಷದಲ್ಲಿ ಹಿಂದೂ ಪರ ಇರುವ ಒಬ್ಬ ನಾಯಕನೂ ಇಲ್ಲ" ಎಂದು ಆರೋಪಿಸಿದರು.

"ಸಿದ್ದರಾಮಯ್ಯ ವೈಸ್ ಕ್ಯಾಪ್ಟನ್ ಜಮೀರ್. ಡಿ. ಕೆ. ಶಿವಕುಮಾರ್ ವೈಸ್ ಕ್ಯಾಪ್ಟನ್ ನಲಪಾಡ್. ಇವರಿಬ್ಬರ ಮೂಲಕ ಸಿದ್ದರಾಮಯ್ಯ, ಡಿಕೆಶಿ ಮುಸ್ಲಿಂ ಕ್ರಿಶ್ಚಿಯನ್ ಓಲೈಕೆಗೆ ನಿಂತಿದ್ದಾರೆ. ಜಮೀರ್ ಅಂತಹವರಿಂದ ಬೇರೆ ಏನು ನಿರೀಕ್ಷೆ ಮಾಡಬಹುದು?" ಎಂದು ಪ್ರತಾಪ್ ಸಿಂಹ ಪ್ರಶ್ನೆ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+