ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲೂ ಖಾಸಗಿ ಆಸ್ಪತ್ರೆ ಬಂದ್: ವೈದ್ಯರ ಬೇಡಿಕೆ ಏನು?

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಅಕ್ಟೋಬರ್ 03: ರಾಜ್ಯ ಸರ್ಕಾರ ಜಾರಿ ಮಾಡಲು ಮುಂದಾಗಿರುವ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಸೂದೆ (ತಿದ್ದುಪಡಿ) 2017 (ಕೆಪಿಎಂಇ)ಅನ್ನು ವಿರೋಧಿಸಿ ಮೈಸೂರಿನಲ್ಲೂ ವೈದ್ಯರ ಪ್ರತಿಭಟನೆ ನಡೆಯುತ್ತಿದೆ. ನಗರದ ಜೆಕೆ ಮೈದಾನದಲ್ಲಿ ವೈದ್ಯರು ಮೌನ ಪ್ರತಿಭಟನೆ ನಡೆಸುತ್ತಿದ್ದು, ಇಂದು ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ರವರೆಗೆ ಖಾಸಗಿ ಆಸ್ಪತ್ರೆ ಬಂದ್ ಆಗಲಿವೆ.

In Pics : ವೈದ್ಯರ ಮುಷ್ಕರದಿಂದ ರೋಗಿಗಳ ನೀಗದ ಸಂಕಷ್ಟ

ಮೈಸೂರಿನಲ್ಲಿ 120 ಖಾಸಗಿ ಆಸ್ಪತ್ರೆಗಳನ್ನು ಮುಚ್ಚಲಾಗಿದ್ದು, ಸುಮಾರು 2000 ವೈದ್ಯರು ಇಂದು ಕಾರ್ಯನಿರ್ವಹಿಸುತ್ತಿಲ್ಲ. ಈಗಾಗಲೇ ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳಿಗೆ ಯಾವುದೆ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಖಾಸಗಿ ಆಸ್ಪತ್ರೆಗಳು ತಿಳಿಸಿವೆ.

Private hospitals in Mysuru are closed on Nov 3rd.

ಖಾಸಗೀ ಆಸ್ಪತ್ರೆಗೆ ಬರುವ ರೋಗಿಗಳನ್ನ ಅಲ್ಲಿಂದಲೇ ಅಂಬುಲೇನ್ಸ್ ನಲ್ಲಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ ಕೊಡುವ ವ್ಯವಸ್ಥೆ ಮಾಡಲಾಗಿದೆ.

LIVE: ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರ, ಸರ್ಕಾರಿ ಆಸ್ಪತ್ರೆಯೇ ದಿಕ್ಕುLIVE: ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರ, ಸರ್ಕಾರಿ ಆಸ್ಪತ್ರೆಯೇ ದಿಕ್ಕು

ವೈದರ ಬೇಡಿಕೆ ಏನು?

* ಕುಂದುಕೊರತೆ ಪರಿಹಾರ ಸಮಿತಿ ರಚನೆ.
* ಜೈಲು ಶಿಕ್ಷೆ ಮತ್ತು ದಂಡ ಹಾಕವ ಕೆಲಸ ಮಾಡಬಾರದು.
* ದರ ನಿಗದಿ ಮಾಡುವುದನ್ನು ಆಯಾ ಆಸ್ಪತ್ರೆಗಳ ವಿವೇಚನೆಗೆ ಬೀಡಬೇಕು.
* ಖಾಸಗಿ ಆಸ್ಪತ್ರೆಗಳ ನಿಗದಿ ಮಾಡಿದ ದರದ ಪಟ್ಟಿ ಪ್ರಕಟಮಾಡಲಾಗುವುದು.
* ಖಾಸಗಿ ಆಸ್ಪತ್ರೆಯ ದರವನ್ನ ಸರ್ಕಾರ ನಿಗದಿ ಮಾಡಬಾರದು.
* ಚಿಕಿತ್ಸೆ ನೀಡುವ ವೇಳೆ ರೋಗಿ ಮೃತ ಪಟ್ಟಲ್ಲಿ ವೈದ್ಯರನ್ನ ದೋಷಿಸುವಂತಿಲ್ಲ.

ಸರ್ಕಾರದ ವಿಧೇಯಕದಲ್ಲೇನಿದೆ..?

* ಖಾಸಗಿ ಆಸ್ಪತ್ರೆಗಳ ವೈದ್ಯಕೀಯ ಶುಲ್ಕ ನಿಗದಿ ಅಧಿಕಾರ ರಾಜ್ಯ ಸರ್ಕಾರಕ್ಕೆ.
* ರಾಜ್ಯ ಸರ್ಕಾರ ನಿಗದಿ ಮಾಡಿದ ಶುಲ್ಕವನ್ನ ಖಾಸಗಿ ಆಸ್ಪತ್ರೆಗಳ ಒಳಗೆ ರೇಟ್​ ಬೋರ್ಡ್​ ಹಾಕಬೇಕು.
* ಚಿಕಿತ್ಸೆಯ ವೆಚ್ಚವನ್ನು ಚಿಕಿತ್ಸೆಯ ಮೊದಲೇ ಅಂದಾಜಿಸಬೇಕು, ಅಂದಾಜಿಸಿದ ಬಿಲ್​ ಮೀತಿ ಮೀರುವಂತಿಲ್ಲ.
* ತುರ್ತು ಸಂದರ್ಭದಲ್ಲಿ ರೋಗಿಯಿಂದ ಮುಂಗಡ ಪಾವತಿಗೆ ಒತ್ತಾಯಿಸುವಂತಿಲ್ಲ.
* ಮುಂಗಡ ಹಣಕ್ಕಾಗಿ ಒತ್ತಾಯಿಸಿ ಚಿಕಿತ್ಸೆ ನಿರಾಕರಿಸುವಂತಿಲ್ಲ.
* ರೋಗಿಯ ಮೃತದೇಹ ಹಸ್ತಾಂತರಿಸುವಾಗ ಬಾಕಿ ಮೊತ್ತಕ್ಕೆ ಒತ್ತಾಯಿಸುವಂತಿಲ್ಲ.
* ಹೆಚ್ಚಿನ ಶುಲ್ಕ ವಸೂಲಿ ಮಾಡಿದರೆ 5 ಲಕ್ಷ ರೂ.ವರೆಗೆ ದಂಡ, 3 ವರ್ಷಗಳವರೆಗೆ ಜೈಲು.
* ಪ್ರತಿ ಜಿಲ್ಲೆಗೂ ಕುಂದುಕೊರತೆ ಪರಿಹಾರ ಸಮಿತಿ ರಚನೆ
* ದರ ನಿಗದಿ ಮಾಡುವುದಕ್ಕೂ ತಜ್ಞರ ಸಮಿತಿ ರಚನೆ

English summary
Doctors of Private hospitals in Mysuru protested silently against KPMG bill Amendment. Private hospitals in the city are closed on Nov 3rd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X