ದೇಶಪ್ರೇಮ ಅಂದರೆ ಪ್ರಧಾನಿ ಅಂತಾಗಿದೆ: ಜಿಕೆ ಗೋವಿಂದ ರಾವ್
ಮೈಸೂರು, ಜೂನ್ 12: ಪ್ರಧಾನಿಯನ್ನು ಹೊಗಳಿದವರಷ್ಟೇ ದೇಶಪ್ರೇಮಿಗಳು, ವಿರೋಧಿಸಿದವರು ದೇಶ ಭ್ರಷ್ಟರು ಅನ್ನೋ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ದೇಶಭಕ್ತಿ ಅಂದರೆ ಪ್ರಧಾನ ಮಂತ್ರಿ ಎಂದು ಮಾಧ್ಯಮಗಳ ಮೂಲಕ ಪ್ರಚಾರ ಮಾಡಲಾಗುತ್ತಿದೆ ಎಂದು ಚಿಂತಕ ಜಿಕೆ ಗೋವಿಂದ ರಾವ್ ಹೇಳಿದರು.
ಇಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಲುಷಿತ ಆದ ಮನಸ್ಸುಗಳನ್ನು ಮೊದಲು ಸ್ವಚ್ಛ ಮಾಡಿಕೊಳ್ಳಲಿ. ಆಮೇಲೆ ಪೊರಕೆ ಹಿಡಿದುಕೊಂಡು ಕಸ ಗುಡಿಸಲಿ ಎಂದು ಸ್ವಚ್ಛ ಭಾರತ ಅಭಿಯಾನದ ಬಗ್ಗೆ ವ್ಯಂಗ್ಯವಾಡಿದರು.
['ನೋಟು ನಿಷೇಧ ಮಾಡಿದ ಮೋದಿಯಿಂದ 3 ಲಕ್ಷ ಕೋಟಿ ನಷ್ಟ']

ಪತ್ರಕರ್ತರು ಹಾಗೂ ರಾಜಕಾರಣಿಗಳ ಮಧ್ಯೆ ಹತ್ತಿರರದ ಸಂಬಂಧ ಇರುವುದರಲ್ಲಿ ತಪ್ಪಿಲ್ಲ. ಆದರೆ ಪತ್ರಕರ್ತರನ್ನು ರಾಜಕಾರಣಿಗಳು ಬಳಸಿಕೊಳ್ಳಲು ಬಿಡಬಾರದು ಎಂದ ಅವರು, ಅನಿಸಿದ್ದನ್ನು ಧೈರ್ಯವಾಗಿ ಹೇಳಬೇಕು ಎಂಬುದು ಪತ್ರಿಕೋದ್ಯಮದ ತತ್ವ. ಆದರೆ ಇಂದು ಕೆಲವು ಪತ್ರಿಕೆಗಳು ಬಾಯಿ ಮುಚ್ಚಿಕೊಂಡು ಕೂತಿವೆ ಎಂದರು.
ಈಗೇನೂ ತುರ್ತು ಪರಿಸ್ಥಿತಿ ಅಂತೇನೂ ಇಲ್ಲದಿದ್ದರೂ ತಾವಾಗಿಯೇ ಅಂಥ ಪರಿಸ್ಥಿತಿ ಹೇರಿಕೊಂಡಿವೆ ಎಂದು ಅವರು ಹೇಳಿದರು. ಪತ್ರಿಕೆಗಳ ಮೇಲೆ ಸರಕಾರ ನಿಯಂತ್ರಣ ಹೇರಲು ಹೊರಟಿರುವ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.












Click it and Unblock the Notifications