ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಷ್ಟ್ರಪತಿ ಚುನಾವಣೆ; ಮೈಸೂರಿನಿಂದ ವಿಶೇಷ ಮಾರ್ಕರ್ ಪೆನ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂನ್ 18: ಈ ಬಾರಿಯ ರಾಷ್ಟ್ರಪತಿ ಚುನಾವಣೆಗೆ ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆ (ಎಂಪಿವಿಎಲ್) ನವೀನ ಮಾದರಿ ಹಾಗೂ ವಿಶೇಷ ಮಾಡೆಲ್‌ಗಳನ್ನು ಒಳಗೊಂಡ ನೇರಳೆ ಬಣ್ಣದ ಬ್ಯಾಲೆಟ್ ಮಾರ್ಕರ್ ಪೆನ್ ಅನ್ನು ತಯಾರಿಸುತ್ತಿದೆ.

ದೇಶದಲ್ಲಿ ನಡೆಯಲಿರುವ ಎಲ್ಲಾ ಚುನಾವಣೆಗಳಿಗೂ ಮೈಸೂರಿನಿಂದಲೇ ಅಳಿಸಲಾಗದ ಶಾಯಿ ಸರಬರಾಜು ಆಗುತ್ತದೆ. ಅತಿ ಹಳೆಯ ಸಂಸ್ಥೆಯಾದ ಎಂಪಿವಿಎಲ್ ಗುಣಮಟ್ಟದ ಇಂಕ್ ತಯಾರಿಕೆಗೆ ಹೆಸರುವಾಸಿಯಾಗಿದೆ.

ಜೂ.20ರಂದು ಬೆಂಗಳೂರಿಗೆ ಪ್ರಧಾನಿ: ಸಿದ್ಧತೆ ಪರಿಶೀಲಿಸಿದ ಸಿಎಂಜೂ.20ರಂದು ಬೆಂಗಳೂರಿಗೆ ಪ್ರಧಾನಿ: ಸಿದ್ಧತೆ ಪರಿಶೀಲಿಸಿದ ಸಿಎಂ

ನ್ಯಾಷನಲ್ ಕೆಮಿಕಲ್ ಲ್ಯಾಬೋರೇಟರಿ, ನ್ಯಾಷನಲ್ ರಿಸರ್ಚ್ ಡೆವಲಪ್‌ಮೆಂಟ್ ಕಾರ್ಪೋರೇಷನ್, ನ್ಯಾಷನಲ್ ಫಿಸಿಕಲ್ ಲ್ಯಾಬೋರೇಟರಿಗಳಿಂದ ತಾಂತ್ರಿಕ ನೆರವು ಪಡೆದು ಮಾರ್ಕರ್ ಪೆನ್‌ಗಳನ್ನು ತಯಾರಿಸುತ್ತಿದೆ.

Presidential polls on July 18th Mysuru MPVL to supply marker pens

ನಾನಾ ದೇಶಗಳಿಗೆ ಶಾಯಿ; 2018ರ ರಾಷ್ಟ್ರಪತಿ ಚುನಾವಣೆಗೂ ಸಂಸ್ಥೆ ಮಾರ್ಕರ್ ಪೆನ್ ಪೂರೈಸಿತ್ತು. ಇತ್ತೀಚಿಗೆ ಮುಕ್ತಾಯ ಕಂಡ ಪಂಚರಾಜ್ಯಗಳ ಚುನಾವಣೆಗೂ ಮೈಸೂರಿನಿಂದಲೇ ಅಳಿಸಲಾಗದ ಶಾಯಿ ಪೂರೈಕೆ ಆಗಿತ್ತು.

ವಿಶ್ವದ ನಾನಾ ದೇಶಗಳ ಚುನಾವಣಾ ಪ್ರಕ್ರಿಯೆಗೆ ಅಳಿಸಲಾಗದ ಶಾಯಿಯನ್ನು ಪೂರೈಸಿದ ಹೆಗ್ಗಳಿಕೆ ಹೊಂದಿರುವ ಜು.18ರಂದು ನಡೆಯಲಿರುವ ಚುನಾವಣೆಗೆ ತುಸು ಬದಲಾವಣೆಯೊಂದಿಗೆ ಮಾರ್ಕರ್ ಪೆನ್ ಪೂರೈಕೆಸುವಂತೆ ಚುನಾವಣಾ ಆಯೋಗ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದೆ.

ಜೂ.19ರಿಂದ ಮೂರು ದಿನ ಮೈಸೂರು ಅರಮನೆ ಪ್ರವೇಶಕ್ಕೆ ನಿರ್ಬಂಧಜೂ.19ರಿಂದ ಮೂರು ದಿನ ಮೈಸೂರು ಅರಮನೆ ಪ್ರವೇಶಕ್ಕೆ ನಿರ್ಬಂಧ

ತಿಂಗಳೊಳಗೆ ಕಳುಹಿಸಿಕೊಡಲು ಮೈಲ್ಯಾಕ್ ಸಂಸ್ಥೆ ಒಪ್ಪಿಗೆ ಸೂಚಿಸಿದೆ. ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, 21ರಂದು ಮತ ಎಣಿಕೆ ನಡೆಯಲಿದೆ. ಒಟ್ಟು 4,809 ಮತದಾರರು (ಜನಪ್ರತಿನಿಧಿಗಳು) ಮತ ಚಲಾಯಿಸಲಿದ್ದಾರೆ.

Presidential polls on July 18th Mysuru MPVL to supply marker pens

ಈ ಬಾರಿ ಪೆನ್ ವಿಶೇಷತೆ ಏನು?; ಪರಿಸರ ಸ್ನೇಹಿಯಾಗಿ ಈ ಬಾರಿಯ ಚುನಾವಣೆ ನಡೆಯಬೇಕೆಂಬ ಆಶಯ ಚುನಾವಣಾ ಆಯೋಗದ್ದು. ಹಾಗಾಗಿ ನೇರಳೆ ಬಣ್ಣದ 500 ಬ್ಯಾಲೆಟ್ ಮಾರ್ಕರ್ ಪೆನ್ ಮಾಡಿಕೊಡುವಂತೆ ಮೈಲ್ಯಾಕ್‌ಗೆ ಪತ್ರ ಬರೆದಿದೆ. ಬ್ಯಾಲೆಟ್ ಪೇಪರ್‌ನಲ್ಲಿ ಮತವನ್ನು ಗುರುತು ಮಾಡುವುದಕ್ಕಾಗಿ ಈ ವಿಶೇಷ ಪೆನ್ ಅನ್ನು ಬಳಕೆ ಮಾಡಲಾಗುತ್ತದೆ.

ಜನಪ್ರತಿನಿಧಿಗಳಿಗೆ ಮತದಾನ ಮಾಡಲು ನಿರ್ದಿಷ್ಟ ಪೆನ್‌ಗಳನ್ನು ನೀಡಲಿದೆ. ಇದನ್ನು ಹೊರತುಪಡಿಸಿ ಯಾವುದೇ ಪೆನ್ ಬಳಕೆ ಮಾಡುವಂತಿಲ್ಲ. ಒಂದು ವೇಳೆ ಬೇರೆ ಪೆನ್ ಬಳಸಿದ್ದೇ ಆದ್ದಲ್ಲಿ ಆ ಮತ ಅಸಿಂಧುವಾಗಲಿದೆ.

"ಈ ಬಾರಿ ಮಾರ್ಕರ್ ಪೆನ್ನಿನ ಮಾಡೆಲ್ ಹಾಗೂ ಇಂಕಿನ ನಿರ್ದಿಷ್ಟತೆ ಬಗ್ಗೆ ಒಂದಷ್ಟು ಬದಲಾವಣೆಯೊಂದಿಗೆ ವಿಶೇಷವಾಗಿ ಮಾಡಿ ಪೂರೈಸುವಂತೆ ಚುನಾವಣಾ ಆಯೋಗ ಕೇಳಿಕೊಂಡಿದೆ. ಅದರಂತೆ ನಾವು ಕಾರ್ಯೋನ್ಮುಖರಾಗಿದ್ದು, ಈ ತಿಂಗಳೊಳಗೆ 500 ಪೆನ್ ಪೂರೈಕೆ ಮಾಡುತ್ತೇವೆ" ಎಂದು ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆ ಅಧ್ಯಕ್ಷ ಎನ್. ವಿ. ಫಣೀಶ್ ತಿಳಿಸಿದ್ದಾರೆ.

English summary
Election commission announced date for presidential elections. Elections will be held on July 18th. Mysuru-based Mysore Paints and Varnish Limited (MPVL) will supply marker pens for the election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X