• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು: ಬಂದ್ ನಡುವೆ ಪ್ರೀ ವೆಡ್ಡಿಂಗ್ ಶೂಟ್‌ ನಡೆಸಿದ ನವಜೋಡಿ

By ಮೈಸೂರು ಪ್ರತಿನಿಧಿ
|

ಮೈಸೂರು, ಡಿಸೆಂಬರ್ 5: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದಾರೆ. ಬಂದ್ ಅಂತ ಹೇಳಿ ಜನರು ಹೊರಬರದೆ ಮನೆಯಲ್ಲಿಯೇ ವಾರಾಂತ್ಯ ಕಳೆಯುತ್ತಿದ್ದಾರೆ.

ಆದರೆ ಪ್ರತಿಭಟನೆಯ ಕಾವಿನ ನಡುವೆ ಇದ್ಯಾವುದರ ಪರಿವೆಯೇ ಇಲ್ಲದೇ ನವಜೋಡಿಯೊಂದು ಪ್ರೀ ವೆಡ್ಡಿಂಗ್ ಫೋಟ್ ಶೂಟ್‌ಗೆ ಪೋಸ್ ಕೊಟ್ಟು ಬಿಂದಾಸ್ ಆಗಿದ್ದ ದೃಶ್ಯ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಂಡುಬಂತು.

ಮೈಸೂರು-ಮಲಬಾರ್ ರೈಲು ಮಾರ್ಗಕ್ಕೆ ಕೇಂದ್ರ ಹಸಿರು ನಿಶಾನೆ

ಶನಿವಾರ ಬೆಳಿಗ್ಗೆ ಮೈಸೂರು ನಗರದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದರು. ಅಲ್ಲದೇ, ಪ್ರತಿಭಟನಾ ಮೆರವಣಿಗೆ ಕೂಡಾ ನಡೆಸಿದರು.

ಇದರ ಮಧ್ಯೆಯೇ ಜೋಡಿಯೊಂದು ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗವಿರುವ ಜಯ ಚಾಮರಾಜ ಒಡೆಯರ್ ವೃತ್ತದಲ್ಲಿ ಪ್ರೀ ವೆಡ್ಡಿಂಗ್ ಫೋಟೊ ಶೂಟ್‌ನಲ್ಲಿ ಮಗ್ನರಾಗಿದ್ದರು. ಕಲರ್‌ಫುಲ್‌ ಘೋಟೊಗಳನ್ನು ತೆಗೆಸಿಕೊಂಡು ಖುಷಿಪಟ್ಟರು.

ಮರಾಠಾ ಅಭಿವೃದ್ಧಿ ನಿಗಮದ ಸ್ಥಾಪನೆ ವಿರುದ್ಧ ವಿವಿಧ ಕನ್ನಡಪರ ಸಂಘಟನೆಗಳು ಇಂದು ಬಂದ್‌ಗೆ ಕೆಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಮೈಸೂರಿನಲ್ಲಿ ಪ್ರತಿಭಟನೆಗಷ್ಟೇ ಸೀಮಿತವಾಗಿದೆ. ಸಾಂಸ್ಕೃತಿಕ ನಗರಿಯಲ್ಲಿ ಇಂದು ಯಾವುದೇ ಬಂದ್‌ ನಡೆಯಲಿಲ್ಲ. ಎಲ್ಲ ವಾಹನ ಸಂಚಾರ, ಸರ್ಕಾರಿ ಹಾಗೂ ಖಾಸಗಿ ಬಸ್‌ ಗಳ ಓಡಾಟ ಎಂದಿನಂತಿದೆ. ಅಲ್ಲ ಅಂಗಡಿ ಮುಂಗಟ್ಟುಗಳು, ಶಾಪಿಂಗ್‌ ಕಾಂಪ್ಲೆಕ್ಸ್‌ ಗಳು ತೆರೆದಿವೆ.

English summary
A scene in Mysuru where a new couple was posing for a pre-wedding photo shoot amid Karnataka Bandh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X