ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅದ್ಧೂರಿ ಮೈಸೂರು ದಸರಾಕ್ಕಾಗಿ ಪೂರ್ವಭಾವಿ ಸಭೆ

By Yashaswini
|
Google Oneindia Kannada News

ಮೈಸೂರು, ಜುಲೈ 5: ಇದೇ ಸೆಪ್ಟೆಂಬರ್ 21 ರಿಂದ ಆರಂಭವಾಗಲಿರುವ ವಿಶ್ವವಿಖ್ಯಾತ ಮೈಸೂರು ದಸರಾವನ್ನು ಈ ಬಾರಿ ಸಾಂಪ್ರದಾಯಿಕವಾಗಿ ಆಚರಿಸಲು ಹೆಚ್ಚು ಒತ್ತು ನೀಡಲಾಗುವುದರ ಜತೆಗೆ ದಸರಾ ಮಹೋತ್ಸವದ ಶಾಶ್ವತ ಲೋಗೋವನ್ನು ಸಿದ್ಧಪಡಿಸಲು ಚಿಂತನೆ ನಡೆಸಲಾಗುತ್ತಿದೆ.

ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ನೇತೃತ್ವದಲ್ಲಿ ನಿನ್ನೆ(ಜು.4) ನಡೆದ ಪೂರ್ವಭಾವಿ ಭಾವಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು. ಇತ್ತ ತಿಂಗಳ ಒಳಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ದಸರಾ ಹೈ ಪವರ್ ಕಮಿಟಿ ಸಭೆ ನಡೆಸಲಾಗುವುದು.

ಆಷಾಢ ಶುಕ್ರವಾರ, ಚಾಮುಂಡೇಶ್ವರಿಗೆ ನಮೋ ಎಂದ ಜನಸಾಗರಆಷಾಢ ಶುಕ್ರವಾರ, ಚಾಮುಂಡೇಶ್ವರಿಗೆ ನಮೋ ಎಂದ ಜನಸಾಗರ

Pre meeting to celebrate world famous Mysuru Dasara

ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಸಂಸ್ಕೃತಿ ಬಿಂಬಿಸುವ ಟ್ಯಾಬ್ಲೋಗೆ ಅವಕಾಶ ನೀಡಲಾಗಿದ್ದು, ಈ ಬಾರಿಯ ದಸರಾದಲ್ಲಿ ಸಂಸ್ಕೃತಿ, ಆಡಳಿತದ, ಸಂವಿಧಾನದ ಆಶಯ ಈಡೇರಿಸುವ ಟ್ಯಾಬ್ಲೋಗಳ ಪ್ರದರ್ಶನವಿರಲಿದೆ. ಆಗಸ್ಟ್ 10 ರೊಳಗಾಗಿ ಮೈಸೂರಿಗೆ ಗಜಪಡೆ ಆಗಮಿಸುವ ಸಾಧ್ಯತೆ ಇದ್ದು, ಸೆ.21 ರಿಂದ 30 ರವರೆಗೆ ದಸರಾ ಆಚರಣೆ ಮಾಡುವ ಸಾಧ್ಯತೆ ಇದೆ.

90,000 ಪಡಿತರ ಕಾರ್ಡ್ ಬೇಡಿಕೆ

ರಾಜ್ಯದಲ್ಲಿ ಹೆಚ್ಚುವರಿಯಾಗಿ 8-10 ಲಕ್ಷ ಪಡಿತರ ಚೀಟಿಗಳಿಗೆ ಬೇಡಿಕೆ ಬಂದಿದ್ದು, ಮೈಸೂರು ಜಿಲ್ಲೆಯಲ್ಲಿ 90,000 ಕಾರ್ಡ್ ಗಳ ಬೇಡಿಕೆಯಿದ್ದು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದವರಿಗೆ ಕಾರ್ಡ್ ಗಳನ್ನು ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹೇಳಿದರು.

ಆಷಾಡ ಶುಕ್ರವಾರ ಚಾಮುಂಡಿಬೆಟ್ಟಕ್ಕೆ ತೆರಳೋರು ಗಮನಿಸಿ..

ಸರ್ಕಾರ ಜಾರಿಗೆ ತಂದ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಸಹಕರಿಸಿದ ಅಧಿಕಾರಿಗಳನ್ನು ಅಭಿನಂದಿಸಿದರು. ಬಳಿಕ ಮಾತನಾಡಿದ ಅವರು ರಾಜ್ಯದಲ್ಲಿ ಯಾರೂ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಅನ್ನಭಾಗ್ಯ ಯೋಜನೆ ಜಾರಿಗೆ ತರಲಾಗಿದೆ.

Pre meeting to celebrate world famous Mysuru Dasara

ಕಳೆದ ನಾಲ್ಕು ವರ್ಷಗಳಲ್ಲಿ ಶೇ.90ರಷ್ಟು ಸಾಧನೆ ಮಾಡಲಾಗಿದ್ದು, ಇನ್ನೂ ಒಂದು ವರ್ಷದೊಳಗಾಗಿ ಉಳಿದ ಶೇ.10ರಷ್ಟು ಗುರಿ ತಲುಪಲಾಗುವುದು ಎಂದರು. ಅಂತರ್ಜಾತಿಯ ವಿವಾಹವನ್ನು ಉತ್ತೇಜಿಸಲು ಅನುಕೂಲವಾಗುವಂತೆ ಅಂತರ್ಜಾತಿಯ ವಿವಾಹವನ್ನು ಹಮ್ಮಿಕೊಳ್ಳಲಾಗಿದೆ. ಈ ಕುರಿತು ಹೆಚ್ಚಿನ ಪ್ರಚಾರ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ನಗರದಲ್ಲಿನ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಪ್ರವಾಸಿಗರಿಗೆ, ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಎಚ್ಚರವಹಿಸಬೇಕೆಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು. ಜು. 23,24ರ ಬಳಿಕ ಕೆಡಿಪಿ ಸಭೆ ನಡೆಸಿ, ಸಾಧಿಸಲಾಗಿರುವ ಗುರಿಯ ಅಧ್ಯಯನ ನಡೆಸಲಾಗುವುದು ಎಂದರು.

English summary
A pre Dasara meeting held in Mysuru on july 4th to celebrate world famous Mysuru Dasara lavishly this year. The Mysuru district incharge and state minister HC Mahadevappa headed the meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X