ಮಾರ್ಚ್ 11ರಂದು ಮೈಸೂರಿನಲ್ಲಿ ತೊಗಾಡಿಯಾ ಭಾಷಣ
ಮೈಸೂರು, ಫೆ. 25 : ಮೈಸೂರಿನಲ್ಲಿ ಮಾರ್ಚ್ 11ರಂದು ವಿರಾಟ್ ಹಿಂದೂ ಸಮಾಜೋತ್ಸವ ನಡೆಯಲಿದೆ. ವಿಶ್ವಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಸಮಾಜೋತ್ಸವ ಉದ್ದೇಶಿಸಿ ಮಾತನಾಡಲಿದ್ದಾರೆ. ಮಾರ್ಚ್ ತಿಂಗಳಿನಲ್ಲಿ ರಾಜ್ಯದಲ್ಲಿ ನಾಲ್ಕು ಸಮಾವೇಶ ಉದ್ದೇಶಿಸಿ ತೊಗಾಡಿಯಾ ಭಾಷಣ ಮಾಡಲಿದ್ದಾರೆ.
ಮೈಸೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ವಿರಾಟ್ ಹಿಂದೂ ಸಮಾಜೋತ್ಸವದ ಕಾರ್ಯಾಧ್ಯಕ್ಷ ರಾಜೇಂದ್ರ ಅವರು, ನಗರದ ದೊಡ್ಡಕೆರೆ ಮೈದಾನದಲ್ಲಿ ಮಾರ್ಚ್ 11ರಂದು ನಾಲ್ಕು ಗಂಟೆಗೆ ಸಮಾಜೋತ್ಸವ ಆಯೋಜಿಸಲಾಗಿದೆ ಎಂದು ಹೇಳಿದರು. [ಮಂಗಳೂರಿನಲ್ಲಿ ಮಾರ್ಚ್ 1ರಂದು ಸಮಾಜೋತ್ಸವ]

ವಿಶ್ವಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಸಮಾಜೋತ್ಸವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ತೊಗಾಡಿಯಾ ಅವರು ಬೆಂಗಳೂರು ಸಮಾವೇಶದಲ್ಲಿ ಭಾಷಣ ಮಾಡದಂತೆ ಪೊಲೀಸರು ನಿಷೇಧ ಹೇರಿದ್ದರು. ಆ ನಿಷೇಧ ಮೈಸೂರಿಗೆ ಅನ್ವಯವಾಗುವುದಿಲ್ಲ ಎಂದರು. [ಬೆಂಗಳೂರಿನಲ್ಲಿ ತೊಗಾಡಿಯಾ ಮಾಡಿದ ಭಾಷಣ]
ಮೈಸೂರಿನ ಸಮಾವೇಶದಲ್ಲಿ ಪ್ರವೀಣ್ ತೊಗಾಡಿಯಾ ಭಾಗವಹಿಸಲಿದ್ದಾರೆ ಎಂದು ಪೊಲೀಸರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಪೊಲೀಸರಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿಸಿದರು.
ಹಿಂದೂ ಸಮಾಜೋತ್ಸವದ ಅಧ್ಯಕ್ಷತೆಯನ್ನು ಮೈಸೂರು ವಿವಿ ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದಗೌಡ ವಹಿಸಲಿದ್ದಾರೆ. ವಿಜಯ ವಿಠಲ ಸಂಸ್ಥೆ ಕಾರ್ಯದರ್ಶಿ ವಾಸುದೇವ ಭಟ್, ಕೌಟಿಲ್ಯ ವಿದ್ಯಾಸಂಸ್ಥೆ ಆರ್.ರಘು, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ಮುಖಂಡರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ನಾಲ್ಕು ಭಾಷಣ ಮಾಡಲಿದ್ದಾರೆ ತೊಗಾಡಿಯಾ : ಬೆಂಗಳೂರಿನಲ್ಲಿ ಪ್ರವೀಣ್ ತೊಗಾಡಿಯಾ ಭಾಷಣ ಮಾಡದಂತೆ ಪೊಲೀಸರು ನಿಷೇಧ ಹೇರಿದ್ದರು. ಆದರೆ, ಮಾರ್ಚ್ ತಿಂಗಳಿನಲ್ಲಿ ತೊಗಾಡಿಯಾ ಅವರು ರಾಜ್ಯದಲ್ಲಿ ನಾಲ್ಕು ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.
ಉಡುಪಿಯಲ್ಲಿ ಮಾರ್ಚ್ 9ರಂದು, ಚಿಕ್ಕಮಗಳೂರು ಮತ್ತು ಹಾಸನದಲ್ಲಿ ಮಾರ್ಚ್ 10 ರಂದು, ಮಾರ್ಚ್ 11ರಂದು ಮೈಸೂರಿನಲ್ಲಿ ಹಿಂದೂ ಸಮಾಜೋತ್ಸವ ಉದ್ದೇಶಿಸಿ ಅವರು ಮಾತನಾಡಲಿದ್ದಾರೆ.












Click it and Unblock the Notifications