ಚಂಪಾ ಅವರು ಬಾಯಿ ಬಿಟ್ಟರೆ ಉಚ್ಚೆಯ ವಾಸನೆ ಬರುತ್ತದೆ

Recommended Video

      ಚಂಪಾ ಅಲಿಯಾಸ್ ಪ್ರೊ ಚಂದ್ರಶೇಖರ್ ಪಾಟೀಲರನ್ನ ಲೇವಡಿ ಮಾಡಿದ ಪ್ರತಾಪ್ ಸಿಂಹ | Oneindia Kannada

      ಮೈಸೂರು, ನವೆಂಬರ್ 27 : ಚಂಪಾ ಅವರು ಬಾಯಿ ಬಿಟ್ಟರೆ ಉಚ್ಚೆಯ ವಾಸನೆ ಬರುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ಅವರು ಚಂಪಾ ವಿರುದ್ಧ ಕಿಡಿಕಾರಿದರು.

      ಮೈಸೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಬಸವನ ಬಾಲ ಬಡುಕ ಎಂದು ಸಮ್ಮೇಳನದಲ್ಲಿ ಅವಮಾನ ಮಾಡಿ ಚಂಪಾ ಅವರು ತಮ್ಮ ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಅವರು ಚಂಪಾ ವಿರುದ್ಧ ಕಿಡಿಕಾರಿದರು.

      ಚಂಪಾ ಅವರು ಸಮ್ಮೇಳನದಲ್ಲಿ ಭುವನೇಶ್ವರಿ ದೇವಿಗೆ ಅವಮಾನ ಮಾಡಿದ್ದಾರೆ, ಅಷ್ಟೇ ಅಲ್ಲದೆ ರಾಜರಿಗೂ ಕೂಡ ಅವಮಾನ ಮಾಡಿದ್ದಾರೆ. ಹಾಗೂ ಟಿಪ್ಪು ಬಗ್ಗೆ ಸಮ್ಮೇಳನದ ವೇದಿಕೆಯನ್ನು ಹಂಚಿಕೊಂಡು ವೇದಿಕೆಯನ್ನು ರಾಜಕೀಯವನ್ನಾಗಿ ಮಾಡಿ ಆತ್ಮಸಾಕ್ಷಿಯನ್ನು ಮಾರಿಕೊಂಡಿದ್ದಾರೆ ಎಂದು ಆರೋಪಿಸಿದರು.

      Pratap simha anger on Champa of critisised

      ಅವರ ಟೀಕೆ ಎಲ್ಲೆ ಮೀರಿನನ್ನನ್ನು ಬಸವನ ಬಾಲ ಎಂದು ಕರೆದು ಚಂಪಾ ಅವರು ಅವಮಾನಿಸಿದ್ದಾರೆ ಅವರ ಟೀಕೆ ಎಲ್ಲೆ ಮೀರಿದೆ, ಚಂಪಾ ಅವರು ಬಾಯಿ ಬಿಟ್ಟರೆ ಉಚ್ಚೆಯ ವಾಸನೆ ಬರುತ್ತದೆ ಎಂದು ಪ್ರತಾಪ್ ಸಿಂಹ್ ಚಂಪಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

      ಸಚಿವ ಅನಂತಕುಮಾರ್ ಕನ್ನಡ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ: ಸಚಿವ ಅನಂತಕುಮಾರ್ ಕನ್ನಡಕ್ಕಾಗಿ ದುಡಿಯುತ್ತಿದ್ದಾರೆ. ವಿಶ್ವಸಂಸ್ಥೆಯಲ್ಲೂ ಕನ್ನಡದ ಬಗ್ಗೆ ಮಾತನಾಡಿದ್ದಾರೆ, ಬ್ಯಾಂಕ್ ಪರೀಕ್ಷೆಯೂ ಕನ್ನಡದಲ್ಲೇ ಆಗಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ ಅಂತವರ ವಿರುದ್ಧ ಚಂಪಾ ಅವರು ಎಲ್ಲೆ ಮೀರಿ ಟೀಕೆ ಮಾಡುತ್ತಿದ್ದಾರೆ.

      ಚಂಪಾ ಅವರಿಗೆ ಸೆಕ್ಯುಲರ್ ಜ್ಞಾನವಿಲ್ಲ: ಚಂಪಾರವರೆ ಸೆಕ್ಯೂಲರ್ ಬಗ್ಗೆ ನಿಮಗೆ ಜ್ಞಾನ ವಿಲ್ಲ. ಜಗತ್ತಿನ ಎಲ್ಲಾ ಧರ್ಮಗಳು ಭಾರತದಲ್ಲಿ ನೆಲೆಸಿವೆ. ಭಾರತದ ಪರಂಪರೆ ನಿಮಗೆ ಗೊತ್ತಿಲ್ಲ. ಕನ್ನಡ ಭಾಷೆಯೊಳಗೆ ಎಲ್ಲವೂ ಇದೆ. ಭುವನೇಶ್ವರಿ ಹಾಗೂ ಪೇಟವನ್ನ ಧಿಕ್ಕರಿಸಿದ್ರಿ. ಯಾಕೆ ಬರಬೇಕಿತ್ತು ನೀವು ಮೈಸೂರಿಗೆ, ಇಲ್ಲಿಗೆ ಬಂದು ‌ನಮಗೆ ಪಾಠ ಹೇಳ್ತೀರಾ ಎಂದು ಚಂಪಾ ಅವರನ್ನು ಪ್ರಶ್ನಿಸಿದರು.

      ನೀವು ತುಮಕೂರಿಗೆ ಹೋದ್ರೆ ಜಾತಿ ನೆನಪಾಗುತ್ತೆ. ನೀವು ಎಲ್ಲಿ ಇದ್ರಿ, ಯಾವ ಪಕ್ಷದಿಂದ ಸ್ಪರ್ಧೆ ಮಾಡಿದ್ರಿ ನೆನಪಿಸಿಕೊಳ್ಳಿ. ಎಲ್ಲಾ ಕಡೆ ನಿಮ್ಮ‌ ಫ್ಲೆಕ್ಸ್ ಗಳು ರಾರಾಜಿಸುತ್ತೀವೆ, ಕನ್ನಡ‌ದ ಭೈರಪ್ಪರನ್ನ ಹಾಗೂ ರಾಜವಂಶದವರನ್ನ ಯಾಕೆ ಕರೆಯಲಿಲ್ಲ.

      ಸಮ್ಮೇಳನ ಟಿಪ್ಪು ಕುರಿತು ಮಾತನಾಡುವ ವೇದಿಕೆ ಅಲ್ಲ: ಟಿಪ್ಪು ಸುಲ್ತಾನ್ ಬಗ್ಗೆ ಯಾಕೆ ಕನ್ನಡದ ಜಾತ್ರೆ ವೇದಿಕೆಯಲ್ಲಿ ಮಾತನಾಡುತ್ತಿರಾ. ಟಿಪ್ಪು ಕನ್ನಡದ ಪ್ರಾಂತ್ಯಗಳ ಹೆಸರುಗಳನ್ನ ಬದಲಾವಣೆ ಮಾಡಿದವನು, ಅವನ ನೆನಪು ಬೇಕಿತ್ತ. ನಿಮಗೆ ಶಿಷ್ಠಾಚಾರ ಗೊತ್ತಿಲ್ಲ, ಕಲಬುರ್ಗಿ, ಗೌರಿ ಹತ್ಯೆಯಾಯಿತು ಸಿದ್ದರಾಮಯ್ಯ ನವರ ವೇದಿಕೆ ಮೇಲೆ ಇದ್ದು ಯಾಕೆ ಅವರ ಬಗ್ಗೆ ಮಾತನಾಡಲಿಲ್ಲ. ನಾನು 22 ಪುಸ್ತಕ ಬರೆದಿದ್ದೇನೆ, ಚರ್ಚೆ ಮಾಡಿ ಯಾರು ಚನ್ನಾಗಿ ಬರೆಯುತ್ತಾರೆ ಅಂತ.

      ಕಸಾಪ ಸರ್ಕಾರದ ಅಧೀನ ಸಂಸ್ಥೆಯಲ್ಲ, ಕನ್ನಡಿಗರ ಶ್ರೇಯೋಭಿವೃದ್ದಿಗಾಗಿ ಇರುವುದೇ ಹೊರತು ಪಕ್ಷದ್ದಲ್ಲ. ಟಿಪ್ಪು ಬಗ್ಗೆ ಸಮ್ಮೇಳನದ ವೇದಿಕೆಯನ್ನು ರಾಜಕೀಯವನ್ನಾಗಿಸಿದ್ದಾರೆ. ತಮ್ಮ ಆತ್ಮಸಾಕ್ಷಿಯ ನ್ನು ಮಾರಿಕೊಂಡಿದ್ದಾರೆ. ಕಲ್ಬುರ್ಗಿ, ಗೌರಿಹತ್ಯೆ ಬಗ್ಗೆಯೂ ಮಾತನಾಡದೇ ಒಬ್ಬ ರಾಜಕಾರಣಿಯನ್ನು ತೆಗಳುವ ವೇದಿಕೆಯನ್ನಾಗಿಸಿದ ಚಂಪಾ ಅವರು ಅಧ್ಯಕ್ಷರಾಗಿ ಸಮ್ಮೇಳನವನ್ನು ಹೊಲಸಾಗಿಸಿದ್ದಾರೆ.

      ಸುತ್ತೂರು ಶ್ರೀಗಳನ್ನು ಸಮ್ಮೇಳನಕ್ಕೆ ಆಹ್ವಾನಿಸಬೇಕಿತ್ತು: ಈ ಬಾರಿಯ ಸಮ್ಮೇಳನಕ್ಕೆ ಕಪ್ಪುಚುಕ್ಕೆಯಂತೆ, ಟೀಕಿಸಬೇಕು, ಆದರೆ ಅದಕ್ಕೂ ಇತಿ ಮಿತಿ ಇರಲಿ. ಯಾವ ವೇದಿಕೆಯಲ್ಲಿ ಮಾತನಾಡುತ್ತಿದ್ದೇನೆಂಬ ಅರಿವಿರಲಿ. ಕನಿಷ್ಠ ಸುತ್ತೂರು ಶ್ರೀ ಗಳನ್ನು ಸಮ್ಮೇಳನಕ್ಕೂ ಆಹ್ವಾನಿಸಿಲ್ಲ ಎಂದು ದೂರಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+