• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು; ಹುಲಿ ಕೊಂದು ನಾಲ್ಕು ಕಾಲು ಕತ್ತರಿಸಿದ್ದ ನಾಲ್ವರ ಬಂಧನ

By ಮೈಸೂರು ಪ್ರತಿನಿಧಿ
|

ಮೈಸೂರು, ಸೆಪ್ಟೆಂಬರ್ 04: ಹುಲಿಯನ್ನು ಕೊಂದು ಅದರ ಉಗುರಿಗಾಗಿ ನಾಲ್ಕು ಕಾಲುಗಳನ್ನು ಕತ್ತರಿಸಿದ್ದ ಎಲ್ಲಾ ದುಷ್ಕರ್ಮಿಗಳನ್ನು ಅರಣ್ಯಾಧಿಕಾರಿಗಳು ಇಂದು ಬಂಧಿಸಿದ್ದಾರೆ.

ಒಂದು ವಾರದ ಹಿಂದೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಲ್ಲಹಳ್ಳ ವಲಯದ ಕಾರ್ಮಾಡು ಗೇಟ್ ಹಾಗೂ ತಟ್ಟೆಕೆರೆ ಹಾಡಿ ಮಧ್ಯದ ಅರಣ್ಯ ಪ್ರದೇಶದಲ್ಲಿ ಹುಲಿಯ ಶವ ಪತ್ತೆಯಾಗಿತ್ತು. ಉಗುರಿಗಾಗಿ ಹುಲಿಗೆ ಗುಂಡು ಹಾರಿಸಿ ಕೊಂದು, ನಾಲ್ಕು ಕಾಲುಗಳನ್ನು ಕತ್ತರಿಸಿಕೊಂಡು ಹೋಗಿದ್ದ ಮುಖ್ಯ ಆರೋಪಿಯಾದ ಸಂತೋಷ್​ನನ್ನು ಬಂಧಿಸಲಾಗಿತ್ತು.

ಉಗುರಿಗಾಗಿ ರಾಷ್ಟ್ರೀಯ ಪ್ರಾಣಿ ಹುಲಿ ಕೊಂದ ದುಷ್ಕರ್ಮಿಗಳ ಬಂಧನ

ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳಿದ ಆರೋಪಿಗಳಾದ ಕಾಂಡೇರ ಶಶಿ, ಕಾಂಡೇರ ಶರಣು, ವಟ್ಟಂಗಡ ರಾಜು ಹಾಗೂ ಕೆ.ಎಸ್ ರಾಜ ಎಂಬ ಆರೋಪಿಗಳನ್ನು ಇದೀಗ ಬಂಧಿಸಲಾಗಿದೆ. ಆರೋಪಿಗಳಿಂದ ಒಟ್ಟು 13 ಹುಲಿಯ ಉಗುರುಗಳು, 2 ಕೋರೆ ಹಲ್ಲು ಮತ್ತು 1.5 ಕೆಜಿ ಜಿಂಕೆ ಮಾಂಸ ಹಾಗೂ ಕೃತ್ಯಕ್ಕೆ ಬಳಸಿದ 2 ದ್ವಿಚಕ್ರ ವಾಹನಗಳು, ಬಂದೂಕು ಮತ್ತು ಕತ್ತಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

English summary
Police arrested all the four people who killed tiger near kallahalla of nagarahole region
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X