ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು: ಬಲೆಗೆ ಬಿದ್ದ ನಕಲಿ ಅಸಿಸ್ಟೆಂಟ್ ಕಮಿಶನರ್

|
Google Oneindia Kannada News

ಮೈಸೂರು, ಜ. 8: 'ನಾನು ಮೈಸೂರು ಮಹಾನಗರದ ಪಾಲಿಕೆಯ ಅಸಿಸ್ಟೆಂಟ್‌ ಕಮಿಷನರ್' ಎಂದು ಹೇಳಿ ಜನರನ್ನು ನಂಬಿಸಿ ವಂಚನೆ ಮಾಡಿತ್ತಿದ್ದ ಆರೋಪಿ ಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ನಕಲಿ ಕಾಗದ ಪತ್ರ ಮತ್ತು ರಬ್ಬರ್ ಸ್ಟಾಂಪ್ ಇಟ್ಟುಕೊಂಡು ಜನರನ್ನು ವಂಚಿಸುತ್ತಿದ್ದ ರಾಜೇಂದ್ರ ನಗರದ ವಿನೋದ್ ರಾವ್ ಎಂಬಾತನ್ನು ಬಂಧಿಸಲಾಗಿದೆ.
ಆರೋಪಿ ವಿನೋದ್ ರಾವ್ ಕಳೆದ 3 ತಿಂಗಳಿನಿಂದ ವಂಚನೆಯಲ್ಲಿ ತೊಡಗಿದ್ದ.[ಲೈಂಗಿಕ ದೌರ್ಜನ್ಯ ಹೆಸರಲ್ಲಿ ಹಣ ಕೇಳಿದ ಪತ್ರಕರ್ತ ಸೆರೆ]

mysuru

ಸದ್ಯ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಅಂಗಡಿಗಳಿಗೆ ಭೇಟಿ ನೀಡಿ ತೆರಿಗೆ ವಸೂಲಿ ಮಾಡುತ್ತಿದ್ದಾರೆ. ಇನ್ನು ತನ್ನ ಲಾಭಕ್ಕೆ ಬಳಸಿಕೊಂಡ ವಿನೋದ್ ಅಂಗಡಿಗಳಿಗೆ ತೆರಳಿ ತಾನು ಎಸಿ ಎಂದು ಹೇಳಿಕೊಂಡು ನಕಲಿ ಗುರುತಿನ ಚೀಟಿ ತೋರಿಸಿ ದಾಖಲೆಗಳನ್ನು ಪರಿಶೀಲಿಸುವ ನಾಟಕ ಮಾಡುತ್ತಿದ್ದ. ನಂತರ ನಿಮ್ಮ ದಾಖಲೆ ನಕಲಿ ಇದನ್ನು ಸರಿ ಮಾಡಿ ಕೊಡುತ್ತೇನೆ. ಒಮ್ಮೆ ನನಗೆ ಹಣ ನೀಡಿದರೆ ಸಾಕು ಐದು ವರ್ಷ ತೆರಿಗೆ ಪಾವತಿ ಮಾಡಬೇಕಾಗಿಲ್ಲ ಎಂದು ನಂಬಿಸಿ ಹಣ ಪಡೆಯುತ್ತಿದ್ದ.

ಈ ರೀತಿ ಇಲ್ಲಿಯವರೆಗೆ ಸುಮಾರು 100 ಅಂಗಡಿಯವರನ್ನು ಆರೋಪಿ ವಂಚಿಸಿದ್ದಾನೆ. ಈತ ಮೊದಲು ತಾಲೂಕು ಕಚೇರಿ ಮತ್ತು ಮೈಸೂರು ಮಹಾನಗರ ಪಾಲಿಕೆಯ ದಲ್ಲಾಳಿಯಾಗಿ ಕೆಲಸ ಮಾಡುತ್ತಿದ್ದ. ಇದರಿಂದ ಅಧಿಕಾರಿಗಳ ಸಂಪರ್ಕ ಚೆನ್ನಾಗಿತ್ತು. ಅಲ್ಲದೇ ಈತನಿಗೆ ಕಾಗದ ಪತ್ರಗಳ ಬಗ್ಗೆಯೂ ಸಂಪೂರ್ಣ ತಿಳಿವಳಿಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

English summary
Mysuru: Police arrest fake assistant commissioner on Thursday. Vinod Rao a resident of Rajendra nagar allegedly try to fraud shop owners. in the name of assistant commissioner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X