ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು; ನಕಲಿ ರೆಮ್ಡೆಸಿವಿರ್ ಔಷಧ ಮಾರಾಟ ಜಾಲ ಪತ್ತೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಏಪ್ರಿಲ್ 19; ಕರ್ನಾಟಕದಲ್ಲಿ ಕೋವಿಡ್ 2ನೇ ಅಲೆಯಿಂದಾಗಿ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿಯೇ ನಕಲಿ ರೆಮ್ಡೆಸಿವಿರ್ ಔಷಧ ಮಾರಾಟ ಜಾಲವನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ನಕಲಿ ಔಷಧಿ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಧಂತೆ ಮೈಸೂರಿನ ಸಿಸಿಬಿ ಪೊಲೀಸರು ನಗರದ ಜೆಎಸ್ಎಸ್ ಆಸ್ಪತ್ರೆ ಸ್ಟಾಫ್‌ ನರ್ಸ್ ಗಿರೀಶ್ ಬಂಧಿಸಿದ್ದಾರೆ. ಈತನೊಂದಿಗೆ ಸಹಕರಿಸಿದ್ದ ಶಿವಪ್ಪ, ಮಂಗಳ, ಮಂಜುನಾಥ್ ಮತ್ತು ಪ್ರಶಾಂತ್ ಎಂಬುವರನ್ನು ಸಹ ವಶಕ್ಕೆ ಪಡೆಯಲಾಗಿದೆ.

ಭಾರತದಲ್ಲಿ 92 ದಿನವಾದರೂ ಶೇ.50ರಷ್ಟು ಕಾರ್ಮಿಕರಿಗಿಲ್ಲ ಕೊರೊನಾ ಲಸಿಕೆಭಾರತದಲ್ಲಿ 92 ದಿನವಾದರೂ ಶೇ.50ರಷ್ಟು ಕಾರ್ಮಿಕರಿಗಿಲ್ಲ ಕೊರೊನಾ ಲಸಿಕೆ

ಬಂಧಿತ ಆರೋಪಿಗಳಿಂದ 2.82 ಲಕ್ಷ ರೂ. ನಗದು ಹಾಗೂ 800ಕ್ಕೂ ಹೆಚ್ಚು ರೆಮ್ಡೆಸಿವಿರ್ ನಕಲಿ ಔಷಧಿ ಬಾಟಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಗಿರೀಶ್‌, ಸೆಪ್ಟ್ರಿಯಾಕ್ಸೊನ ಎಂಬ ಆ್ಯಂಟಿಬಯೋಟಿಕ್ ಔಷಧ ಹಾಗೂ ನಾರ್ಮಲ್ ಸಲೈನ್ ಬಳಕೆ ಮಾಡಿ ನಕಲಿ ಔಷಧಿ ತಯಾರಿಸುತ್ತಿದ್ದ.

'ನಾಳೆ ಬಾ': ತಮಿಳುನಾಡಿನಲ್ಲಿ ಕೊರೊನಾ ಲಸಿಕೆ ಕೇಳಿದವರಿಗೆ ಇದೇ ಉತ್ತರ! 'ನಾಳೆ ಬಾ': ತಮಿಳುನಾಡಿನಲ್ಲಿ ಕೊರೊನಾ ಲಸಿಕೆ ಕೇಳಿದವರಿಗೆ ಇದೇ ಉತ್ತರ!

 Police Arrest 5 For Selling Fake Remdesivir Injections

ಕೇವಲ 100 ರೂ.ಗಳಿಗೆ ನಕಲಿ ರೆಮ್ಡೆಸಿವಿರ್ ಔಷಧಿ ತಯಾರಿಸಿ, ಅದನ್ನು 4 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದ. ಅಲ್ಲದೇ ತಾನು ತಯಾರಿಸಿದ ಈ ನಕಲಿ ಔಷಧಿಯನ್ನು ಕೆಲವು ಮೆಡಿಕಲ್ ರೆಪ್ರಸೆಂಟ್‌ಗಳ ಮೂಲಕ ಸಾರ್ವಜನಿಕರು ಹಾಗೂ ಆಸ್ಪತ್ರೆಗೂ ಸರಬರಾಜು ಮಾಡಿಸುತ್ತಿದ್ದ ಎಂಬ ಆರೋಪವೂ ಇದೆ.

ಸೆಪ್ಟೆಂಬರ್ ವೇಳೆಗೆ 10 ಪಟ್ಟು ಕೋವ್ಯಾಕ್ಸಿನ್ ಲಸಿಕೆ ಉತ್ಪಾದನೆ: ಹರ್ಷವರ್ಧನ್ಸೆಪ್ಟೆಂಬರ್ ವೇಳೆಗೆ 10 ಪಟ್ಟು ಕೋವ್ಯಾಕ್ಸಿನ್ ಲಸಿಕೆ ಉತ್ಪಾದನೆ: ಹರ್ಷವರ್ಧನ್

"ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ರೆಮ್ಡೆಸಿವಿರ್ ಔಷಧಿಯು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ತನಿಖೆ ನಡೆಸುವಾಗ ಈ ನಕಲಿ ಜಾಲ ಪತ್ತೆಯಾಗಿದೆ" ಎಂದು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಮಾಹಿತಿ ನೀಡಿದ್ದಾರೆ.

ಆರೋಪಿ ಗಿರೀಶ್ ಕಳೆದ 11 ವರ್ಷದಿಂದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಸ್ಟಾಫ್‌ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದ. ಖಾಲಿಯಾಗಿದ್ದ ರೆಮ್ಡಿಸಿವಿರ್‌ ಔಷಧದ ಬಾಟಲಿಗೆ ಬೇರೆ ಔಷಧಿ ತುಂಬಿ ಅದನ್ನೇ ರೆಮ್ಡಿಸಿವಿರ್‌ ಔಷಧಿ ಎಂದು ಮಾರಾಟ ಮಾಡುತ್ತಿದ್ದ.

ನಕಲಿ ಔಷಧಿಯನ್ನು ಮೆಡಿಕಲ್‌ ರೆಪ್‌ಗಳಾಗಿದ್ದ ಪ್ರಶಾಂತ್ ಮತ್ತು ಮಂಜುನಾಥ್ ಎಂಬುವವರ ಜೊತೆ ಸೇರಿ ಮಾರಾಟ ಮಾಡುತ್ತಿದ್ದ ಎನ್ನುವುದು ತನಿಖೆಯಿಂದ ಗೊತ್ತಾಗಿದೆ.

English summary
Mysuru CCB police arrested 5 people for selling fake Remdesivir injections. Police seized 800 fake injections and 2.82 lakh money.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X