ಮೈಸೂರು ದಸರೆ ಸ್ತಬ್ಧಚಿತ್ರದಲ್ಲಿ ರಾರಾಜಿಸಲಿದ್ದಾರೆ ಪ್ರಧಾನಿ ಮೋದಿ
ಮೈಸೂರು, ಸೆಪ್ಟೆಂಬರ್ 10: ಪ್ರಧಾನಿ ಮೋದಿಯವರ ಸ್ತಬ್ಧಚಿತ್ರಗಳು ಇದೇ ಮೊದಲ ಬಾರಿಗೆ ಮೈಸೂರು ದಸರಾದಲ್ಲಿ ರಾರಾಜಿಸಲಿವೆ. ಮೈಸೂರು ದಸರಾ ಪ್ರಮುಖ ಆಕರ್ಷಣೆ ಜಂಬೂಸವಾರಿ ದಿನದಂದು ಪ್ರದಶರ್ನಗೊಳ್ಳುವ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಪ್ರಧಾನಿ ಮೋದಿಯವರ ಹಲವು ಜನಪ್ರಿಯ ಯೋಜನೆಗಳು ಜನರನ್ನು ತಲುಪಲಿವೆ ಎಂದು ತಿಳಿಸಿದ್ದಾರೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ.
ಅರಮನೆಗೆ ಬಂದಾಯ್ತು ಗಜಪಡೆ; ಇಲ್ಲಿದೆ ನೋಡಿ ದಸರಾ ಆನೆಗಳ ಬಯೋಡಾಟಾ | Oneindia Kannada
ದಸರೆಗೆ ಮುನ್ನವೇ ಹಿಂತಿರುಗಿ ಹೋಗುವನೇ ಈಶ್ವರ ಆನೆ?
ಈ ಕುರಿತು ಮಾತನಾಡಿದ ಅವರು, "ಈ ಬಾರಿಯ ದಸರಾ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಮೋದಿ ಅವರ ಜನಪ್ರಿಯ ಯೋಜನೆಗಳು ಬಿತ್ತರವಾಗಲಿವೆ. ಕೇಂದ್ರ ಸರ್ಕಾರದ ಯೋಜನೆಗಳ ಟ್ಯಾಬ್ಲೋ ಮಾಡಲು ನಿರ್ಧಾರ ಮಾಡಿದ್ದೇವೆ" ಎಂದರು.
ಮೋದಿಯವರ ಸ್ತಬ್ಧಚಿತ್ರಗಳೊಂದಿಗೆ ಮೈಸೂರು ಸಂಸ್ಥಾನದ ಸಾಧನೆ, ಸಿದ್ದಗಂಗಾ ಶ್ರೀ, ಆದಿಚುಂಚನಗಿರಿ ಹಾಗೂ ಸುತ್ತೂರು ಶ್ರೀಗಳ ಸಾಧನೆಗಳು ಬಿತ್ತರವಾಗಲಿವೆ. ಈ ಬಾರಿ ವಿಶಿಷ್ಟ ಹಾಗೂ ವಿನೂತನ ಮಾದರಿಯಲ್ಲಿ ಸ್ತಬ್ಧಚಿತ್ರಗಳು ತಯಾರಾಗಲಿವೆ ಎಂದು ಸಚಿವ ವಿ.ಸೋಮಣ್ಣ ಮಾಹಿತಿ ನೀಡಿದ್ದಾರೆ.