ಮೈಸೂರು: ಗಾಂಜಾ ಮಾರುತ್ತಿದ್ದ ವ್ಯಕ್ತಿ ಬಂಧನ, 8 ಕೆಜಿ ಮಾಲು ವಶ
ಮೈಸೂರು, ಸೆಪ್ಟೆಂಬರ್ 25: ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ತಾಲೂಕಿನ ಪಂಚವಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಶ್ರೀಹರಿ ಹೋಟೆಲ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಹುಣಸೂರು ತಾಲೂಕಿನ ಬೀರತಮ್ಮಡಹಳ್ಳಿ ಹಾಡಿ ಮೂಲದ ಸದ್ದಾಂ ಹುಸೇನ್ (30)ನನ್ನು ಪೊಲೀಸರು ಬಂಧಿಸಿದ್ದದು, ಆರೋಪಿಯಿಂದ ಒಂದು ಲಕ್ಷ ರು ಮೌಲ್ಯದ 5 ಕೆ,ಜಿ ಗಾಂಜಾವನ್ನು ವಶ ಪಡೆದುಕೊಂಡಿದ್ದಾರೆ.

ಸೋಮವಾರ ಹೋಟೆಲ್ ಬಳಿ ಪ್ಲಾಸ್ಟಿಕ್ ಬ್ಯಾಗಿನಲ್ಲಿ ಒಂದು ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ 8 ಕೆಜಿ ಒಣ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಮಾರ್ಗದರ್ಶನದಲ್ಲಿ ಪಿರಿಯಾಪಟ್ಟಣ ಠಾಣಾ ಪೊಲೀಸರು ದಾಳಿ ಮಾಡಿದ್ದಾರೆ.
ಕಾರ್ಯಾಚರಣೆಯಲ್ಲಿ ಹುಣಸೂರು ಡಿವೈಎಸ್ ಪಿ ಭಾಸ್ಕರ್ ರೈ, ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ಹೆಚ್.ಎನ್.ಸಿದ್ದಯ್ಯ, ಸಬ್ ಇನ್ಸ್ ಪೆಕ್ಟರ್ ಎಸ್.ಎಸ್.ರವಿಕಿರಣ್, ಸಿಬ್ಬಂದಿ ಅಸ್ಲಾಂಪಾಷ, ಉದಯಿತ್, ರುದ್ರೇಶ್, ಜಯರಾಮೇಗೌಡ, ಸಿದ್ದೇಗೌಡ, ಕಾಂತರಾಜ್, ವಿ.ಜೆ.ಮಂಜುನಾಥ್, ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications