ಬಿಜೆಪಿ ನಾಯಕರೇ, ಬಡಾಯಿ ಕೊಚ್ಚುವುದನ್ನು ಮೊದಲು ಬಿಡಿ: ಸಿದ್ದರಾಮಯ್ಯ
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ನಾಯಕರು ಜೈಲಿಗೆ ಹೋಗಿದ್ದು , ಭ್ರಷ್ಟಾಚಾರ ಮಾಡಿದ್ದು ಗೊತ್ತಿಲ್ಲವೇ? ಜನ ಅದ್ಯಾವುದನ್ನೂ ಮರೆತಿಲ್ಲ. ಅದಕ್ಕಾಗಿಯೇ ಗುಂಡ್ಲುಪೇಟೆ, ನಂಜನಗೂಡಲ್ಲಿ ಜನ ಉತ್ತರ ಕೊ
ಮೈಸೂರು, ಮೇ 8 : ಬಿಜೆಪಿ ನಾಯಕರು ಮೊದಲು ಹಿಂಗಾರು ಪರಿಹಾರ ಕೊಡಿಸಿ ಮಾತನಾಡಲಿ. ಬಡಾಯಿ ಕೊಚ್ಚುವುದನ್ನು ಮೊದಲು ಅವರು ಕಡಿಮೆ ಮಾಡಲಿ ಎಂದು ಬಿಜೆಪಿ ನಾಯಕರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರು ಜೈಲಿಗೆ ಹೋಗಿದ್ದು , ಭ್ರಷ್ಟಾಚಾರ ಮಾಡಿದ್ದು ಗೊತ್ತಿಲ್ಲವೇ? ಜನ ಅದ್ಯಾವುದನ್ನೂ ಮರೆತಿಲ್ಲ. ಅದಕ್ಕಾಗಿಯೇ ಗುಂಡ್ಲುಪೇಟೆ, ನಂಜನಗೂಡಲ್ಲಿ ಜನ ಉತ್ತರ ಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಗೆ ಟಾಂಗ್ ನೀಡಿದರು.
ನಿನ್ನೆ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಶ್ವೇತ ಪತ್ರ ಹೊರಡಿಸಬೇಕೆಂದು ಹೇಳಿಕೆ ನೀಡಿದ್ದಾರೆ. ಮೊದಲು ಹಿಂಗಾರಿಗೆ ಕೇಳಿದ್ದ ಹಣವನ್ನ ಬಿಡುಗಡೆ ಮಾಡಲಿ ಎಂದು ತಿರುಗೇಟು ನೀಡಿದರು. ಅವರಿಗೆ ಸರಿಯಾದ ಮಾಹಿತಿ ಇಲ್ಲ. ಬರಪರಿಹಾರಕ್ಕಾಗಿ ನಾವು ಕೇಂದ್ರದ ಬಳಿ 4200 ಕೋಟಿ ರೂ. ಕೇಳಿದ್ರೆ, ಅವರು 1600 ಕೋಟಿ ರೂ. ಕೊಟ್ಟಿದ್ದಾರೆ. ಆ ಹಣವನ್ನು ಶೇ. 80 ರಷ್ಟು ರೈತರಿಗೆ ವಿತರಿಸಿದ್ದೇವೆ. ರೈತರ ಪರ ಕಾಳಜಿ ಇದ್ದರೆ ಮುಂಗಾರಿಗೆ ಕೇಂದ್ರದಿಂದ ಬಿಜೆಪಿ 3.600 ಕೋಟಿ ರೂ. ಕೊಡಿಸಲಿ ಎಂದು ತಿಳಿಸಿದರು.[ಕಾಂಬೋಡಿಯಾ ಸಂಸತ್ ಚುನಾವಣೆಗೆ ಸಜ್ಜಾಗುತ್ತಿದೆ ಮೈಲಾಕ್ ಶಾಹಿ]

ದೇಶದಲ್ಲಿ ಕರ್ನಾಟಕ 2ನೇ ಗೂಂಡಾರಾಜ್ಯವೆಂಬ ನಿರ್ಮಲಾ ಸೀತಾರಾಮನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಕಾನೂನು ಸುವ್ಯವಸ್ಥೆ ಇಲ್ಲದೆ ಜನ ಬಂಡವಾಳ ಹೂಡಿಕೆಗೆ ಬರ್ತಾರಾ? ಅವರು ಕರ್ನಾಟಕದಿಂದಲೇ ರಾಜ್ಯ ಸಭಾ ಸದಸ್ಯರಾಗಿ ಹೋಗಿದ್ದಾರೆ. ಅವರು ಜವಬ್ದಾರಿಯಿಂದ ಮಾತನಾಡಬೇಕು ಎಂದು ಎಚ್ಚರಿಸಿದರು. [ಬಿಜೆಪಿ ಕಾರ್ಯಕಾರಿಣಿಗೆ ತೆರೆ; ಕೊನೆಗೂ ಭಾಷಣ ಬಿಗಿದ ಈಶ್ವರಪ್ಪ]
ಹೆಚ್. ವಿಶ್ವನಾಥ್ ಪಕ್ಷ ಬಿಟ್ಟು ಹೋಗಲ್ಲ
ಮಾಜಿ ಸಂಸದ ಹೆಚ್. ವಿಶ್ವನಾಥ್ ಕಾಂಗ್ರೆಸ್ ತೊರೆಯುತ್ತಾರೆ ಎಂಬ ಸುದ್ದಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹೆಚ್. ವಿಶ್ವನಾಥ್ ಅವರು ಕಾಂಗ್ರೆಸ್ ಬಿಟ್ಟು ಹೋಗಲ್ಲ. ಯಾರು ಕೂಡ ಪಕ್ಷ ಬಿಟ್ಟು ಹೋಗಲ್ಲ. ನಾನು ಯಾರ ಜೊತೆಯೂ ಮಾತಾಡಿಲ್ಲ ಎಂದರು[ಮಾಧ್ಯಮದವರೆದುರು ಮುಜುಗರಕ್ಕೀಡಾದ ಅರವಿಂದ ಲಿಂಬಾವಳಿ]












Click it and Unblock the Notifications