• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಷ್ಟ ನಷ್ಟ ಸಹಜ, ದುಡುಕಬೇಡಿ; ಪೇಜಾವರ ಶ್ರೀ

|

ಮೈಸೂರು, ಜುಲೈ 31: ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಅಳಿಯ, ಉದ್ಯಮಿ, ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಸಾವಿಗೆ ಪೇಜಾವರ ಶ್ರೀಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಟ್ಯಾಕ್ಸ್‌ ಟೆರರಿಸಂಗೆ ಸಿದ್ಧಾರ್ಥ ಬಲಿ: ಸಿದ್ದರಾಮಯ್ಯ ಟ್ಯಾಕ್ಸ್‌ ಟೆರರಿಸಂಗೆ ಸಿದ್ಧಾರ್ಥ ಬಲಿ: ಸಿದ್ದರಾಮಯ್ಯ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಎಸ್ ಎಂ ಕೃಷ್ಣ ಅವರು ನನಗೆ ತುಂಬಾ ಆತ್ಮೀಯರು. ರಾಜ್ಯದ ಹಿರಿಯ ರಾಜಕೀಯ ಮುತ್ಸದ್ದಿ ಕೃಷ್ಣರವರ ಅಳಿಯನ ಸಾವು ತುಂಬಾ ವಿಷಾದ ತಂದಿದೆ. ಬಹುದೊಡ್ಡ ಉದ್ಯಮ ನಡೆಸುತ್ತಿದ್ದ, ಎಷ್ಟೋ ಜನರಿಗೆ ಉದ್ಯೋಗ ನೀಡಿದ್ದ ಸಿದ್ಧಾರ್ಥ್ ಅವರ ಸಾವು ದುಃಖ ತರಿಸಿದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

"ವ್ಯವಹಾರದಲ್ಲಿ ಲಾಭ ನಷ್ಟ ಆಗುವುದು ಸಹಜ. ಎಲ್ಲವನ್ನೂ, ಎಲ್ಲಾ ಪರಿಸ್ಥಿತಿಗಳನ್ನೂ ಸಮತೋಲನವಾಗಿ ಕಾಣಬೇಕು. ಇದನ್ನು ಅರಿತು ಯಾವ ಉದ್ಯಮಿಗಳೂ ಈ ರೀತಿ ದುಡುಕಬಾರದು. ಇದು ಅವರಷ್ಟೇ ಅಲ್ಲ, ಅವರನ್ನು ಅವಲಂಬಿಸಿರುವ ಕುಟುಂಬಕ್ಕೂ ನೋವು. ಸಿದ್ಧಾರ್ಥ್ ಅವರ ಕುಟುಂಬಕ್ಕೆ ಈ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ" ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರು ಪ್ರಾರ್ಥಿಸಿದರು.

English summary
Pejawara shree Vishwesha theertha swamiji reacted to business man VG siddharatha's death. "The death of Siddharth is so sad. Loss is common in business; dont take wrong decision" he adviced to enterpreneurs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X