"ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ಪರೀಕ್ಷೆಯಿಲ್ಲದೆ ಪಾಸ್ ಮಾಡಿ"

ಮೈಸೂರು, ಜೂನ್ 2: ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಲಾಕ್‌ ಡೌನ್‌ ಮಾಡಿರುವುದರಿಂದ ಎಸ್‌ಎಸ್‌ಎಲ್‌ಸಿ, ದ್ವಿತೀಯ, ಅಂತಿಮ ಡಿಗ್ರಿ, ಇಂಜಿನಿಯರಿಂಗ್ ಪರೀಕ್ಷೆಗಳು ಸೇರಿದಂತೆ ಎಲ್ಲಾ ಪದವಿ ವಿದ್ಯಾರ್ಥಿಗಳನ್ನು ಪರೀಕ್ಷೆಗಳಿಲ್ಲದೆ ತೇರ್ಗಡೆ ಮಾಡಿ, ಇಲ್ಲದಿದ್ದಲ್ಲಿ ಹೋರಾಟ ಅನಿವಾರ್ಯ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.

Recommended Video

      ಆರೋಗ್ಯವನ್ನೇ ಮರೆತ ಅನಾರೋಗ್ಯ ಸಚಿವ..ಇದೇನ್ ಸನ್ಮಾನ ಮಾಡಿಸಿಕೊಳ್ಳೋ ಟೈಮೆನ್ರೀ | Oneindia Kannada

      ಎಸ್‌ಎಸ್‌ಎಲ್‌ಸಿ ಹಾಗೂ ಎಲ್ಲಾ ಪದವಿಯ ಅಂತಿಮ ಪರೀಕ್ಷೆಗಳನ್ನು ರದ್ದು ಮಾಡಿ, ಪಾಸ್ ಮಾಡುವಂತೆ ಒತ್ತಾಯಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.

      ಮೈಸೂರು ನಗರದ ಕೆ.ಆರ್ ಗೇಟ್ ಬಳಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಮುಂಬೈ ಐಐಟಿ ಅಂತಿಮ ಪರೀಕ್ಷೆ ಹೊರತುಪಡಿಸಿ ಎಲ್ಲ ಪರೀಕ್ಷೆಗಳನ್ನು ರದ್ದುಮಾಡಿದೆ. ಗೋವಾ ವಿಶ್ವವಿದ್ಯಾಲಯ ಎಲ್ಲಾ ಪದವಿಯ ಅಂತಿಮ ಪರೀಕ್ಷೆ ಹೊರತುಪಡಿಸಿ ಪರೀಕ್ಷೆಗಳನ್ನು ರದ್ದು ಮಾಡಿ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಿದ್ದಾರೆ ಎಂದು ತಿಳಿಸಿದರು.

      ಆನ್ ಲೈನ್ ಪಾಠ ನಡೆಸುತ್ತಿದ್ದಾರೆ

      ಆನ್ ಲೈನ್ ಪಾಠ ನಡೆಸುತ್ತಿದ್ದಾರೆ

      ಐಐಟಿ ಕಾನ್ಪುರ್ ಕೊರೊನಾ ವೈರಸ್ ಕಾರಣದಿಂದ ಎಲ್ಲಾ ಪದವಿಯ ಪರೀಕ್ಷೆಗಳನ್ನು ರದ್ದು ಮಾಡಿದೆ. ಅಂತಿಮ ಇಂಜಿನಿಯರ್ಸ್ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸದೇ ಉತ್ತೀರ್ಣರನ್ನಾಗಿಸಬೇಕು. ಶೇಕಡಾ 20 ರಷ್ಟು ಪಾಠಗಳು ಮಾತ್ರ ನಡೆದಿವೆ. ಉಳಿದ ಪಾಠ ಪ್ರವಚನಗಳನ್ನು ಆನ್ ಲೈನ್ ಮೂಲಕ ನಡೆಸುತ್ತಿದ್ದಾರೆ. ಇದು ವಿದ್ಯಾರ್ಥಿಗಳಿಗೆ ಅರ್ಥವಾಗುವುದಿಲ್ಲ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಆನ್ ಲೈನ್ ಪಾಠ ಸಾಧ್ಯವೇ ಇಲ್ಲ ಎಂದರು.

      ಸ್ಮಾರ್ಟ್ ಫೋನ್ ಸಿಗದೆ ಅನೇಕ ದುರಂತಗಳು ನಡೆದಿವೆ

      ಸ್ಮಾರ್ಟ್ ಫೋನ್ ಸಿಗದೆ ಅನೇಕ ದುರಂತಗಳು ನಡೆದಿವೆ

      ಆನ್ ಲೈನ್ ಪಾಠ ಬೇಕಾದರೆ ಸ್ಮಾರ್ಟ್ ಫೋನ್ ಕೊಳ್ಳಬೇಕು. ಸ್ಮಾರ್ಟ್ ಫೋನ್ ಗಳಿಗೆ ಅನೇಕ ಗ್ರಾಮಗಳಲ್ಲಿ ನೆಟ್ ವರ್ಕ್ ಸಿಗುವುದಿಲ್ಲ. ವಿದ್ಯಾರ್ಥಿಗಳಿಗೆ ಇದೊಂದು ದೊಡ್ಡ ನರಕವಾಗಿದೆ. ಸ್ಮಾರ್ಟ್ ಫೋನ್ ಸಿಗದೇ ಅನೇಕ ದುರಂತಗಳು ನಡೆದಿವೆ. ತರಗತಿಯಲ್ಲಿ ವಿದ್ಯಾರ್ಥಿಗಳ ಕಲಿಕಾ ಮಾನದಂಡಕ್ಕೆ ಅನುಗುಣವಾಗಿ ತೇರ್ಗಡೆ ಮಾಡಬಹುದು ಎಂದು ವಾಟಾಳ್ ನಾಗರಾಜ್ ಹೇಳಿದರು.

      ಸಂಸದ ಶ್ರೀನಿವಾಸ್ ಪ್ರಸಾದ್ ಭೇಟಿ

      ಸಂಸದ ಶ್ರೀನಿವಾಸ್ ಪ್ರಸಾದ್ ಭೇಟಿ

      ಫೇಸ್ ಬುಕ್ ಟ್ವಿಟ್ಟರ್ ಸೇರಿದಂತೆ ಬಹುತೇಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಮೋಟ್ ಡಿಗ್ರಿ ಸ್ಟೂಡೆಂಟ್ಸ್ ಎಂಬ ಶೀರ್ಷಿಕೆಯಡಿ ವಿದ್ಯಾರ್ಥಿಗಳಿಂದ ಬಾರಿ ಹೋರಾಟ ನಡೆಯುತ್ತಿದೆ ಎಂದರು.

      ಇದೇ ಸಂದರ್ಭದಲ್ಲಿ ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ವಾಟಾಳ್ ನಾಗರಾಜ್, ""ನಮ್ಮದು, ಅವರದು 40 ವರ್ಷದ ಸ್ನೇಹ. ಹೀಗಾಗಿ ಅವರ ಅರೋಗ್ಯ ವಿಚಾರಿಸಿದೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.

      ಇನ್ನೂ ಮೂರು ಜನ್ಮ ಕಳೆದರೂ ಬಿಜೆಪಿ ಸೇರಲ್ಲ

      ಇನ್ನೂ ಮೂರು ಜನ್ಮ ಕಳೆದರೂ ಬಿಜೆಪಿ ಸೇರಲ್ಲ

      ನನ್ನ ಬಿಜೆಪಿ ಎಂ.ಎಲ್.ಸಿ ಮಾಡಿದರೆ, ಬಿಜೆಪಿ ಪಕ್ಷಕ್ಕೆ ಶಕ್ತಿ ಮತ್ತು ಗೌರವ ಬರುತ್ತದೆ. ರಾಜ್ಯದ ಜನ ಅವರನ್ನು ಮೆಚ್ಚುತ್ತಾರೆ. ನಾನು ಯಾರನ್ನು ಎಂಎಲ್ಸಿ ಮಾಡಿ ಅಂತ ಕೇಳಿಲ್ಲ. 5 ಬಾರಿ ಎಂಎಲ್ಎ ಆಗಿದ್ದೇನೆ. ಎಂಎಲ್ಸಿ ಮಾಡೋದು ಅವರಿಗೆ ಬಿಟ್ಟ ವಿಚಾರವೆಂದು ತಿಳಿಸಿದರು. ಎಂಎಲ್ಸಿ ಚುನಾವಣೆಗೆ ನಾನು ಸ್ಪರ್ಧೆ ಮಾಡುತ್ತೇನೆ. ಈಶಾನ್ಯ ಪದವೀಧರ ಕ್ಷೇತ್ರ ಹಾಗೂ ಬೆಂಗಳೂರು ಪದವೀಧರ ಕ್ಷೇತ್ರದಿಂದ ಒತ್ತಾಯ ಇದೆ, ಇನ್ನೂ ಯಾವ ಕ್ಷೇತ್ರ ಅಂತ ನಿರ್ಧಾರ ಮಾಡಿಲ್ಲ. ಇನ್ನೂ ಮೂರು ಜನ್ಮ ಕಳೆದರೂ ಬಿಜೆಪಿ ಸೇರಲ್ಲ ಎಂದು ಮೈಸೂರಿನಲ್ಲಿ ವಾಟಾಳ್ ನಾಗರಾಜ್ ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+