ಸಿದ್ದು ಸರ್ಕಾರದ ಸಾಧನಾ ಸಮಾವೇಶಕ್ಕೆ ಸಾಕ್ಷಿಯಾಯ್ತು ಮೈಸೂರು

ಮೈಸೂರು, ಜೂನ್ 3: ರಾಜ್ಯ ಸರ್ಕಾರ 4 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ 'ಕೊಟ್ಟ ಮಾತು ದಿಟ್ಟ ಸಾಧನೆ ಮತ್ತು ಸಾಧನಾ ಸಮಾವೇಶ'ಕ್ಕೆ ದೀಪ ಬೆಳಗಿಸುವ ಮೂಲಕ ಸಿದ್ದರಾಮಯ್ಯ ಚಾಲನೆ ನೀಡಿದರು.

ಈ ವೇಳೆ ಸಚಿವರಿಂದ ಡೊಳ್ಳು ಹೊಡೆಯುವ ಮೂಲಕ 5ನೇ ವರ್ಷಕ್ಕೆ ಸರ್ಕಾರ ಕಾಲಿಟ್ಟಿದೆ ಎಂದು ಸಂಭ್ರಮಿಸಿದರು. ನಂತರ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಸರ್ಕಾರದ ಯೋಜನೆಗಳ ಕಿರು ಹೊತ್ತಿಗೆಯನ್ನ ಬಿಡುಗಡೆ ಮಾಡಿದರು.[ಮೈಸೂರಿನಲ್ಲಿ ಸಾಧನ ಸಮಾವೇಶ: ಬಿಎಸ್ವೈ, ಗೌಡರಿಗೂ]

Palace city Mysuru Witnesses Sadhana samavesha by Karnataka state govrnment

ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷಪರಮೇಶ್ವರ್, ಸಚಿವರಾದ ಎಂ. ಕೃಷ್ಣಪ್ಪ, ಯು.ಟಿ.ಖಾದರ್, ಆಂಜನೇಯ, ಹಿರಿಯ ಮುಖಂಡ ಆಸ್ಕರ್ ಫರ್ನಾಂಡೀಸ್, ಸೇರಿ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು.

ಸೊಕ್ಕನ್ನು ಅಡಗಿಸುವ ಸಮಾವೇಶವಲ್ಲ
ಕಾರ್ಯಕ್ರಮಕ್ಕೆ ಚಾಲನೆ ದೊರೆತ ಬಳಿಕ ಮೊದಲಿಗೆ ಮಾತನಾಡಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ, ಇದು ವಿರೋಧ ಪಕ್ಷದ ಸೊಕ್ಕನ್ನ ಅಡಗಿಸುವ ಸಮಾವೇಶ ಅಲ್ಲ.

Palace city Mysuru Witnesses Sadhana samavesha by Karnataka state govrnment

ಅಲ್ಲದೆ ನಮ್ಮ ಬಲ ತೋರಿಸುವ ಸಮಾವೇಶ ಅಲ್ಲ. ನಾವು ನೀಡಿದ್ದ 165 ಭರವಸೆ ಈಡೇರಿಸುವ ಸಮಾವೇಶ ಇದಾಗಿದೆ. ನಾವು ನಾಲ್ಕು ವರ್ಷದ ಆಡಳಿತಾವಧಿಯಲ್ಲಿ ಎಂದೂ ರೆಸಾರ್ಟ್ ರಾಜಕಾರಣ ಮಾಡಿಲ್ಲ ಎಂದು ಬಿಜೆಪಿಗೆ ಟಾಂಗ್ ನೀಡಿದರು.

ನಮ್ಮ ನಾಲ್ಕು ವರ್ಷದ ಆಡಳಿತದಲ್ಲಿ ಯಾವತ್ತೂ ಒಡಕು ಬಂದಿಲ್ಲ. ನಮ್ಮ‌ಸರ್ಕಾರ ಜಾತಿ, ಒಂದು ಕೋಮಿನ ಪರವಾಗಿ ಕೆಲಸ ಮಾಡಿಲ್ಲ. ಎಲ್ಲಾ ಕೋಮಿನವರನ್ನೂ ಸಮಾನ ಭಾವನೆಯಿಂದ ಕಾಣಲಾಗುತ್ತಿದೆ. ನಮ್ಮದು ಎಲ್ಲ ವರ್ಗದ ಸರ್ಕಾರವಾಗಿದೆ. 30 ಇಲಾಖೆಯ ಸಾಧನೆ ಮಾಡಿ, ನುಡಿದ್ದಂತೆ ನಡೆದಿದ್ದೇವೆ ಎಂದು ಸಚಿವ ಮಹದೇವಪ್ಪ ಹರ್ಷ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+