ನಾಡಹಬ್ಬ ದಸರಾಕ್ಕೆ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಪ್ಯಾಕೇಜ್ ಟೂರ್

ಮೈಸೂರು, ಅಕ್ಟೋಬರ್. ೦1 : ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಇನ್ನು 17 ದಿನಗಳಷ್ಟೇ ಬಾಕಿ ಉಳಿದಿದೆ. ದಸರಾ ಅಂಗವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ಸಹ ಪ್ರವಾಸಿಗರ ಅನುಕೂಲಕ್ಕಾಗಿ ಪ್ಯಾಕೇಜ್ ಟೂರ್ ವ್ಯವಸ್ಥೆ ಮಾಡಲಾಗಿದೆ.

ಈ ವಿಶೇಷ ಪ್ಯಾಕೇಜ್ ಟೂರ್ ಮೂಲಕ ಪ್ರವಾಸಿಗರು ಅ.11ರಿಂದ ಅ.25ರವರೆಗೆ ಮೈಸೂರು ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಬಹುದಾಗಿದೆ. ಕೆಎಸ್ಆರ್ ಟಿಸಿಯ ಮೈಸೂರು ಕೇಂದ್ರೀಯ ಬಸ್ ನಿಲ್ದಾಣ ಮತ್ತು ಕೆಎಸ್ ಆರ್‍ಟಿಸಿ ಖಾಸಗಿ ಬುಕ್ಕಿಂಗ್ ಕೌಂಟರ್ ಹಾಗೂ ಆನ್ ಲೈನ್ ಮುಖಾಂತರವೂ ಮುಂಗಡ ಟಿಕೆಟ್ ಕಾಯ್ದಿರಿಸಲು ಅವಕಾಶ ನೀಡಲಾಗಿದೆ.

ಗಿರಿಧಾಮಗಳನ್ನು ಸಂದರ್ಶಿಸುವ ಗಿರಿದರ್ಶಿನಿ', ಜಲಾಶಯ ಹಾಗೂ ಜಲಪಾತಗಳ ದರ್ಶನದ ಜಲ ದರ್ಶಿನಿ' ಹಾಗೂ ಧಾರ್ಮಿಕ ಸ್ಥಳಗಳನ್ನು ಸಂದರ್ಶಿಸುವ ದೇವ ದರ್ಶಿನಿ' ಪ್ರವಾಸಗಳನ್ನು ಮುಂದುವರಿಸಲಾಗಿದೆ.

Package Tour has been arranged for the benefit of tourists

ಗಿರಿ ದರ್ಶಿನಿಯಲ್ಲಿ ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು, ಚಾಮುಂಡಿ ಬೆಟ್ಟಕ್ಕೆ ಭೇಟಿ ಇರುತ್ತದೆ. ತೆರಳುವ ಸಮಯ ಬೆಳಗ್ಗೆ 6.30, ಕ್ರಮಿಸುವ ದೂರ 325 ಕಿಮೀ, ಪ್ರಯಾಣ ದರ 350 ರೂ, ಮಕ್ಕಳಿಗೆ 175 ರೂ.

ಜಲ ದರ್ಶಿನಿಯಲ್ಲಿ ಗೋಲ್ಡನ್ ಟೆಂಪಲ್, ದುಬಾರೆ ಅರಣ್ಯ, ನಿಸರ್ಗಧಾಮ, ಅಬ್ಬಿ ಜಲಪಾತ, ರಾಜಸೀಟ್, ಹಾರಂಗಿ ಜಲಾಶಯ, ಕೆಆರ್ ಎಸ್ ಭೇಟಿ ಇರುತ್ತದೆ. ತೆರಳುವ ಸಮಯ ಬೆಳಗ್ಗೆ 6.30, ಕ್ರಮಿಸುವ ದೂರ 350 ಕಿ.ಮೀ, ಪ್ರಯಾಣ ದರ 375 ರೂ. ಮಕ್ಕಳಿಗೆ 190 ರೂ.

ದೇವದರ್ಶಿನಿಯಲ್ಲಿ ನಂಜನಗೂಡು, ತಲಕಾಡು, ಬ್ಲಫ್, ಮುಡುಕುತೊರೆ, ಸೋಮನಾಥಪುರ, ಶ್ರೀರಂಗಪಟ್ಟಣ, ಕೆಆರ್ ಎಸ್ ಭೇಟಿ ಇರುತ್ತದೆ. ತೆರಳುವ ಸಮಯ ಬೆಳಗ್ಗೆ 6.30, ಕ್ರಮಿಸುವ ದೂರ 250 ಕಿ.ಮೀ., ಪ್ರಯಾಣದರ 275 ರೂ. ಮಕ್ಕಳಿಗೆ 140 ರೂ . ಹೀಗೆ ಈ ಬಾರಿ ವಿಶೇಷವಾದ ಪ್ಯಾಕೇಜ್ ಗಳನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೀಡುತ್ತಿರುವುದು ವಿಶೇಷ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+