ಜಿಲ್ಲೆಗೊಂದು ವಿವಿ ಎಫೆಕ್ಟ್: ಮೈವಿವಿಯಲ್ಲಿ ಹತ್ತು ಸಾವಿರ ಪ್ರವೇಶಾತಿ ಕುಸಿತ

ಮೈಸೂರು, ಡಿಸೆಂಬರ್‌ 1: ಜಿಲ್ಲೆಗೊಂದು ವಿವಿ ಸ್ಥಾಪನೆಯಾದ ಪರಿಣಾಮ ಈ ವರ್ಷ ಮೈಸೂರು ವಿಶ್ವವಿದ್ಯಾಲಯದಲ್ಲಿ 10 ಸಾವಿರ ಪ್ರವೇಶಾತಿ ಕುಸಿತ ಕಂಡಿದೆ.

ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳು ಸೇರ್ಪಡೆ ಆಗಿದ್ದವು. ಆದರೆ, ಈ ಮೂರು ಜಿಲ್ಲೆಗಳಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯ ತೆರೆದ ಕಾರಣ ಈ ವರ್ಷ ಮೈಸೂರು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಪ್ರವೇಶಾತಿ ಕಡಿಮೆ ಆಗಿದೆ. ಆಯಾ ಜಿಲ್ಲೆಯ ವಿದ್ಯಾರ್ಥಿಗಳು ಹೊಸ ವಿವಿಯಲ್ಲೇ ಪ್ರವೇಶ ಪಡೆದುಕೊಂಡಿದ್ದಾರೆ.

one University for one district effect: Ten thousand admission drop in Mysore University

ಕುಸಿದ ಪ್ರವೇಶಾತಿ:

ಕಳೆದ ವರ್ಷ ವಿವಿಧ ಸ್ನಾತಕ ಪದವಿ ಕೋರ್ಸ್‌ಗಳಿಗೆ 36 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಈ ಶೈಕ್ಷಣಿಕ ಸಾಲಿನಲ್ಲಿ 26 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, 10 ಸಾವಿರ ವಿದ್ಯಾರ್ಥಿಗಳು ಕಡಿಮೆ ಆಗಿದ್ದಾರೆ. ಈ ಹಿಂದೆ ಮೈಸೂರು ವಿವಿ ವ್ಯಾಪ್ತಿಯಲ್ಲಿ 232 ಕಾಲೇಜುಗಳು ಬರುತ್ತಿದ್ದವು. ಈಗ ಆ ಸಂಖ್ಯೆ 111ಕ್ಕೆ ಇಳಿದಿದೆ. ಬೋಧಕ-ಬೋಧಕೇತರ ಸೇರಿದಂತೆ ಕಾಯಂ ನೌಕರರಿಗೆ ಸರಕಾರದಿಂದಲೇ ವೇತನ ಬರುತ್ತದೆ. ಅತಿಥಿ ಉಪನ್ಯಾಸಕರು ಸೇರಿದಂತೆ ಕಾಯಂ ಅಲ್ಲದ ಸಿಬ್ಬಂದಿಗೆ ವಿವಿಯೇ ವೇತನ ಭರಿಸಬೇಕಿದೆ.

420 ಹುದ್ದೆ ಖಾಲಿ:

ಮೈಸೂರು ವಿವಿಗೆ 665 ಕಾಯಂ ಪ್ರಾಧ್ಯಾಪಕರು ಆಗತ್ಯ. ಆದರೆ, ಪ್ರಸ್ತುತ ಕೇವಲ 245 ಕಾಯಂ ಅಧ್ಯಾಪಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 420 ಹುದ್ದೆ ಖಾಲಿ ಉಳಿದಿದೆ. ಬೋಧಕರೇತರರು ವೃಂದದಲ್ಲೂ ತಾತ್ಕಾಲಿಕ ಸಿಬ್ಬಂದಿ ಹೆಚ್ಚಿದ್ದಾರೆ. ಮೈಸೂರು ವಿವಿ 900 ಅತಿಥಿ ಉಪನ್ಯಾಸಕರಿಂದಲೇ ನಡೆಯುತ್ತಿದೆ. ಇದು ಗುಣಮಟ್ಟದ ಶಿಕ್ಷಣಕ್ಕೂ ಕಂಟಕಪ್ರಾಯವಾಗಿದೆ. ಸಂಶೋಧನೆಗೂ ಮುಳ್ಳಾಗಿ ಪರಿಣಮಿಸಿದೆ. ಕಳೆದ ಬಾರಿ ನ್ಯಾಕ್‌ನಿಂದ ವಿವಿ 'ಎ' ಗ್ರೇಡ್ ಪಡೆಯಲು ಅಧ್ಯಾಪಕರ ಕೊರತೆಯೇ ಪ್ರಮುಖ ಕಾರಣವಾಗಿತ್ತು.

"ಜಿಲ್ಲೆಗೊಂದು ವಿವಿ ಸ್ಥಾಪನೆಯಾದ ಪರಿಣಾಮ ಮೈಸೂರು ವಿವಿ ಕಾರ್ಯ ವ್ಯಾಪ್ತಿ ಮೈಸೂರು ಜಿಲ್ಲೆಗಷ್ಟೇ ಸೀಮಿತಗೊಂಡಿದೆ. ಪರಿಣಾಮ ಸ್ನಾತಕ ಪದವಿ ಕೋರ್ಸ್ ಪ್ರವೇಶಾತಿಯಲ್ಲಿ 10 ಸಾವಿರ ಮಕ್ಕಳು ಕಡಿಮೆ ಆಗಿದ್ದಾರೆ. ಸರಕಾರದಿಂದ ಯಾವುದೇ ಅನುದಾನ ಬರುತ್ತಿಲ್ಲ. ಯುಜಿಸಿಯಿಂದ ಬರುತ್ತಿದ್ದ ಅನುದಾನವೂ ಕಡಿಮೆ ಆಗಿದೆ" ಎನ್ನುತ್ತಾರೆ ಮೈಸೂರು ವಿವಿ‌ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+