ದಸರೆ ಉದ್ಘಾಟನೆಗೆ ಕವಿ ನಿಸಾರ್ ಅಹ್ಮದ್ ಗೆ ಅಧಿಕೃತ ಆಹ್ವಾನ
ಮೈಸೂರು, ಸೆಪ್ಟೆಂಬರ್ 7 : ಸೆ. 21 ರಿಂದ ಆರಂಭವಾಗುವ ಮೈಸೂರು ದಸರಾ ಮಹೋತ್ಸವವನ್ನ ಉದ್ಘಾಟಿಸಲು ಕವಿ ಪ್ರೊ ಕೆ ಎಸ್ ನಿಸಾರ್ ಅಹಮದ್ ಅವರಿಗೆ ಮೈಸೂರು ಜಿಲ್ಲಾಡಳಿತ ಅಧಿಕೃತ ಆಹ್ವಾನ ನೀಡಿತು.
ಮೈಸೂರು ಜಿಲ್ಲಾಧಿಕಾರಿ ಹಾಗೂ ದಸರಾ ವಿಶೇಷಾಧಿಕಾರಿ ರಂದೀಪ್ ಡಿ. ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಎಂ.ಜೆ. ರವಿಕುಮಾರ್, ಹಾಗೂ ಸ್ವಾಗತ ಸಮಿತಿ ಸದಸ್ಯರು ಗುರುವಾರ ಬೆಂಗಳೂರಿನ ನಾಗರಬಾವಿಯಲ್ಲಿರುವ ಪ್ರೊ. ನಿಸಾರ್ ಅಹ್ಮದ್ ಅವರ ನಿವಾಸಕ್ಕೆ ತೆರಳಿ ಅವರನ್ನು ಅಧಿಕೃತವಾಗಿ ಆಹ್ವಾನಿಸಿದರು.

ಸೆ.21ರಂದು ಚಾಮುಂಡಿ ಬೆಟ್ಟದಲ್ಲಿ ಚಾಮುಂಡಿ ತಾಯಿಯ ಸನ್ನಿಧಿಯಲ್ಲಿ ದಸರಾ ಉದ್ಘಾಟನೆಯನ್ನು ತಾವು ನೆರವೇರಿಸಬೇಕೆಂದು ಪ್ರೊ.ನಿಸಾರ್ ಅವರ ಬಳಿ ಕೇಳಿಕೊಂಡರಲ್ಲದೇ, ಫಲತಾಂಬೂಲ ನೀಡಿ, ಶಾಲು ಹೊದೆಸಿ ಆಹ್ವಾನ ನೀಡಿದರು. ಇದೇ ಸಂದರ್ಭ ದಸರಾ ಉದ್ಘಾಟನೆಯನ್ನು ನೆರವೇರಿಸುತ್ತಿರುವುದಕ್ಕೆ ಪ್ರೊ.ನಿಸಾರ್ ಅಹ್ಮದ್ ಅತ್ಯಂತ ಸಂತಸ ವ್ಯಕ್ತಪಡಿಸಿದ್ದಾರೆ.
ಬಾಲ್ಯದಲ್ಲಿರುವಾಗ ನಾಡಹಬ್ಬ ದಸರಾವನ್ನು ದೂರದಿಂದ ನೋಡುತ್ತಿದ್ದೆವು. ಆದರೆ ಈಗ ನಾಡಹಬ್ಬ ದಸರಾದ ಉದ್ಘಾಟನೆಯನ್ನು ನೆರವೇರಿಸುತ್ತಿರುವುದು ಅತ್ಯಂತ ಸಂತಸ ತಂದಿದೆ ಎಂದಿದ್ದಾರೆ.












Click it and Unblock the Notifications