ಲೋಕಸಭಾ ಚುನಾವಣೆಯ ಮತಎಣಿಕೆಗೆ ಮೈಸೂರಿನಲ್ಲಿ ಸಕಲ ಸಿದ್ಧತೆ

ಮೈಸೂರು, ಮೇ 12 : ಲೋಕಸಭಾ ಎಲೆಕ್ಷನ್ ರಿಸೆಲ್ಟ್ ಗೆ ಮೈಸೂರು ಜಿಲ್ಲೆ ಸಜ್ಜುಗೊಂಡಿದ್ದು, ಈಗಾಗಲೇ ಮತ ಎಣಿಕೆಗೆ ಸಕಲ ರೀತಿಯಲ್ಲಿ ಪೂರ್ವ ತಯಾರಿ ನಡೆಸಲಾಗುತ್ತಿದೆ. ಮೇ 23 ರಂದು ಪಡುವರಹಳ್ಳಿಯ ಮಹಾರಾಣಿ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ಬೆಳಿಗ್ಗೆ 8ರಿಂದ ಆರಂಭಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ತಿಳಿಸಿದ್ದಾರೆ.

ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿ, ಮತ ಎಣಿಕೆ ಕೇಂದ್ರದಲ್ಲಿ ಸಕಲ ಸಿದ್ಧತೆ ನಡೆದಿದೆ. ಭದ್ರತಾದೃಷ್ಠಿಯಿಂದ 45 ಸಿಸಿ ಕಣ್ಗಾವಲಿನ ವ್ಯವಸ್ಥೆ ಮಾಡಲಾಗಿದೆ. 24 ಗಂಟೆಯೂ ಬೆಳಕಿನ ವ್ಯವಸ್ಥೆ ಇದೆ. ಯಾವುದೇ ಸಮಯದಲ್ಲಿ ಇನ್ಸ್ ಪೆಕ್ಟರ್ ರ್ಯಾಂಕ್ ಗಿಂತ ಹೆಚ್ಚಿನ ದರ್ಜೆಯ ಅಧಿಕಾರಿ, ನಮ್ಮ ಕಡೆಯಿಂದ ಓರ್ವರು ದಿನದ 24 ಗಂಟೆಯೂ ಕರ್ತವ್ಯದಲ್ಲಿರುತ್ತಾರೆ ಎಂದರು.

8 ಮತ ಕ್ಷೇತ್ರಗಳ 6 ಕ್ಷೇತ್ರಗಳಿಗೆ ಎರಡೆರಡು ಎಣಿಕೆ ಕೊಠಡಿ 14 ಮೇಜು ಇಟ್ಟು, ಪ್ರತಿ ಮೇಜಿಗೆ ಮೂರು ಸಿಬ್ಬಂದಿ ನಿಯೋಜಿಸಲಾಗುವುದು. ಚಾಮುಂಡೇಶ್ವರಿ ಮತ್ತು ಚಾಮರಾಜ ಕ್ಷೇತ್ರಗಳಿಗೆ ಸಿಂಗಲ್ ಕಂಬೈಂಡ್ ವ್ಯವಸ್ಥೆ ಮಾಡಲಾಗಿದೆ. ಚುನಾವಣಾಧಿಕಾರಿಯ ಸಮಕ್ಷಮದಲ್ಲಿ ಪೋಸ್ಟಲ್ ಬ್ಯಾಲೆಟ್ ಪೇಪರ್ ಮತ ಎಣಿಕೆ ನಡೆಯಲಿದ್ದು, 8 ಗಂಟೆಗೆ ಇವಿಎಂ ಮತಯಂತ್ರಗಳ ಎಣಿಕೆ ನಡೆಯಲಿದೆ ಎಂದರು.

Officers are getting for Mysuru – kodagu lokasabha election counting

ಅಭ್ಯರ್ಥಿಗಳ ಏಜೆಂಟರುಗಳಿಗೆ ಮುಂದಿನ ವಾರದಲ್ಲಿ ತರಬೇತಿಯನ್ನು ಇಟ್ಟುಕೊಳ್ಳಲಾಗುವುದು. ಪ್ರತಿಯೊಂದು ಹಂತದಲ್ಲಿಯೂ ಕ್ರಾಸ್ ವೆರಿಫಿಕೇಶನ್ ಗೆ ಅವಕಾಶವಿದೆ. 3- 4 ಸೆಲ್ ಇಂತಹ ಸ್ಥಳದಲ್ಲಿ ಇದೆಯಾ ಇಲ್ಲವಾ? ಅದೇ ಬೂತ್ ಮಷಿನ್ ಇದೆಯಾ ಇಲ್ಲವಾ ? ಎಂಬುದನ್ನು ಪಾರದರ್ಶಕವಾಗಿಯೇ ಮಾಡಲಾಗುತ್ತದೆ. ಪ್ರತಿ ಟೇಬಲ್ ಗೆ ಓರ್ವ ಅಧಿಕಾರಿ, ಓರ್ವ ಸಿಬ್ಬಂದಿ ಹಾಗೂ ಮೈಕ್ರೋ ಅಬ್ಸರ್ವರ್ ಇರುತ್ತಾರೆ. ಅಂದು ಮಧ್ಯಾಹ್ನ 2 ಗಂಟೆಯ ವೇಳೆಗೆ ಸಂಪೂರ್ಣ ಮತ ಎಣಿಕೆ ಮಾಹಿತಿ ಸಿಗಲಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+