ಮಹಾಬಲೇಶ್ವರ ರಥಕ್ಕೆ ಆಕ್ಷೇಪಾರ್ಹ ಲಾಂಛನ: ಭಕ್ತರ ಆಕ್ರೋಶ
ಮೈಸೂರು, ಮಾರ್ಚ್ 10: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಮಹಾಬಲೇಶ್ವರ ರಥದ ಚಕ್ರಕ್ಕೆ ಆಕ್ಷೇಪಾರ್ಹ ಲಾಂಛನ ಪೇಂಟ್ ಮಾಡಿದ್ದರಿಂದ ಪೇಂಟರ್ ವಿರುದ್ಧ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾ.15 ರಂದು ಮಹಾಬಲೇಶ್ವರ ರಥೋತ್ಸವ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ರಥಕ್ಕೆ ಬಣ್ಣ ಬಳಿಯಲು ಗುತ್ತಿಗೆ ನೀಡಲಾಗಿತ್ತು. ಗುತ್ತಿಗೆದಾರರು ಭಕ್ತರಿಗೆ ಸಹ್ಯವಲ್ಲದ ಲಾಂಛನದ ಚಿಹ್ನೆಯನ್ನು ರಥದ ಗಾಲಿಗೆ ಹಾಕಿದ್ದಾರೆ. ಇದಕ್ಕೆ ಭಕ್ತರಿಂದ ಆಕ್ಷೇಪ ವ್ಯಕ್ತವಾಗಿದ್ದು, ಅವರ ವಿರುದ್ಧ ಆಕ್ರೋಶಗೊಂಡಿದ್ದಾರೆ.

ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ಪೋಸ್ಟ್ ಮಾಡಿದ್ದು, ಚಾಮುಂಡಿ ಬೆಟ್ಟದ ರಥದ ಚಕ್ರಕ್ಕೆ ಮಾಡಿರುವ ಪೇಂಟಿಂಗ್ ನೋಡಿ. ಇಂಥದ್ದನ್ನು ಸಹಿಸಬೇಕಾ ಹೇಳಿ? ನಿಮ್ಮ ಗಮನಕ್ಕೆ ಇರಲಿ ಅಂತ ಫೋಟೋ ಹಾಕಿದ್ದೇನೆ, ಪಾಠ ಕಲಿಸದೇ ಬಿಡಲ್ಲ ಎಂದು ಪೇಂಟರ್ ವಿರುದ್ಧ ಗರಂ ಆಗಿದ್ದಾರೆ.












Click it and Unblock the Notifications