ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಷಪ್ರಸಾದಕ್ಕೆ ಮತ್ತೆರೆಡು ಬಲಿ: ಸಾವಿನ ಸಂಖ್ಯೆ 13ಕ್ಕೆ ಏರಿಕೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 16 : ಕಿಚುಕತ್ತಿ ಮಾರಮ್ಮನ ದೇವಾಲಯದಲ್ಲಿ ವಿಷಪ್ರಸಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಮೃತಪಟ್ಟಿದ್ದಾರೆ. ಸದ್ಯ ಮೃತಪಟ್ಟವರ ಸಂಖ್ಯೆ 13ಕ್ಕೆ
ಏರಿಕೆಯಾಗಿದೆ.

ಕಳೆದ ರಾತ್ರಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಸ್ವಸ್ಥ ಮಹಿಳೆ ನಿಧನರಾಗುವ ಮೂಲಕ ಸಾವಿನ ಸರಣಿ ಹೆಚ್ಚಿದಂತಾಗಿದೆ. ಚಾಮರಾಜನಗರದ ಬಿದರವಳ್ಳಿ ಗ್ರಾಮದ ನಿವಾಸಿ ನಲಮ್ಮ (35 ) ಮೃತ ಮಹಿಳೆ. ಈಕೆ ತಮ್ಮ ಸಂಬಂಧಿಗಳ ಜೊತೆ ದೇವಸ್ಥಾನಕ್ಕೆ ಹೋಗಿ ಪ್ರಸಾದ ಸೇವಿಸಿದ್ದರು ಎನ್ನಲಾಗಿದೆ.

ಕಿಚ್ಚುಗುತ್ತಿ ಮಾರಮ್ಮ ದೇಗುಲದ ಅಭಿವೃದ್ಧಿಯೇ ಭಕ್ತರ ಜೀವಕ್ಕೆ ಕುತ್ತಾಯಿತಾ? ಕಿಚ್ಚುಗುತ್ತಿ ಮಾರಮ್ಮ ದೇಗುಲದ ಅಭಿವೃದ್ಧಿಯೇ ಭಕ್ತರ ಜೀವಕ್ಕೆ ಕುತ್ತಾಯಿತಾ?

ಕಳೆದ ಆರು ತಿಂಗಳ ಹಿಂದೆಯಷ್ಟೆ ನಲ್ಲಮ್ಮರ ಪತಿ ಹೃದಾಯಘಾತದಿಂದ ಮೃತಪಟ್ಟಿದ್ದರು. ಇಂದು ನಲ್ಲಮ್ಮ ಮೃತಪಟ್ಟಿದ್ದು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

 Number of deaths due to poisoning has risen to 13

ವಿಷಯುಕ್ತ ಪ್ರಸಾದ ಸೇವಿಸಿ ಚಿಕಿತ್ಸೆ ಪಡೆಯುತ್ತಿರುವವನ್ನು ಕಟ್ಟಿಹಾಕಿದ್ದಾರೆ ವೈದ್ಯರು! ಏಕೆ? ವಿಷಯುಕ್ತ ಪ್ರಸಾದ ಸೇವಿಸಿ ಚಿಕಿತ್ಸೆ ಪಡೆಯುತ್ತಿರುವವನ್ನು ಕಟ್ಟಿಹಾಕಿದ್ದಾರೆ ವೈದ್ಯರು! ಏಕೆ?

ವಿಷಪ್ರಸಾದ ಸೇವಿಸಿದ ಪರಿಣಾಮ ಇಂದು ಭಾನುವಾರ ಬೆಳಿಗ್ಗೆ 8: 15 ಸುಮಾರಿಗೆ ಮಗೇಶ್ವರಿ (35) ಎಂಬುವವರು ಸಹ ಮೃತಪಟ್ಟಿದ್ದಾರೆ. ಮಗೇಶ್ವರಿ ಎಂ.ಜಿ ದೊಡ್ಡಿ‌ ನಿವಾಸಿಯಾಗಿದ್ದು, ಇವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಮರಣೋತ್ತರ ಪರೀಕ್ಷೆಗೆಂದು ಶವಗಳನ್ನು ಕೆ.ಆರ್. ಆಸ್ಪತ್ರೆಗೆ ರವಾನಿಸಲಾಗಿದೆ.

English summary
Number of deaths due to poisoning has risen to 13. Now two women, Nallamma and Mageshwari, have died.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X