ಸಾಹಿತ್ಯ ಸಮ್ಮೇಳನದಲ್ಲಿ ಕಿಟ್ ವಿತರಣಾ ಕಾರ್ಯಕ್ರಮ ಆರಂಭ
ಮೈಸೂರು, ನವೆಂಬರ್ 25 : ಕಿಟ್ ವಿತರಣೆ ಕಾರ್ಯಕ್ರಮ ಈಗಾಗಲೇ ಪ್ರಾರಂಭವಾಗಿದೆ. ಭಾನುವಾರದ ವರೆಗೂ ಸಹ ಕಿಟ್ ಹಾಗೂ ಓಓಡಿ ಪತ್ರ ಪಡೆಯಬಹುದಾಗಿದೆ.
ನೋಂದಣಿಯಾಗದವರಿಗೂ ಸಹ ಒಒಡಿ ಪತ್ರ ನೀಡಲಾಗುತ್ತದೆ. ಕನ್ನಡಾಭಿಮಾನಿಗಳು ಹಾಗೂ ಸರ್ಕಾರಿ ನೌಕರರು ಆತಂಕ ಪಡುವುದು ಬೇಡ ಎಂದು ನೋಂದಣಿ ಸಮಿತಿ ಅಧ್ಯಕ್ಷರಾಗಿರುವ ಮೈಲಾಕ್ ಅಧ್ಯಕ್ಷ ಹೆಚ್. ಎ. ವೆ.ಕಟೇಶ್ ಅವರು ತಿಳಿಸಿದ್ದಾರೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರುದ್ರಮುನಿ ಅವರು ಎರಡನೇ ದಿನದ ಕಿಟ್ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿದರು. ನೋಂದಣಿ ಸಮಿತಿ ಕಾರ್ಯದರ್ಶಿ ಎಸ್. ಜಿ. ಸೋಮಶೇಖರ್ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.












Click it and Unblock the Notifications