ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೋ ಪಾರ್ಕಿಂಗ್ ನಲ್ಲಿ ಪೊಲೀಸರ ಗಾಡಿ, ಸಾಮಾಜಿಕ ಜಾಲತಾಣದಲ್ಲಿ ತರಾಟೆ

|
Google Oneindia Kannada News

Recommended Video

ಕಾನೂನು ಪಾಲನೆ ಮಾಡಬೇಕಾದ ಪೊಲೀಸರಿಂದಲೇ ಕಾನೂನು ಉಲ್ಲಂಘನೆ! | Oneindia Kannada

ಮೈಸೂರು, ಡಿಸೆಂಬರ್ 10 : ಕಾನೂನನ್ನು ಕಾಪಾಡಬೇಕಾದ ಪೊಲೀಸರೇ ಕಾನೂನು ಉಲ್ಲಂಘಿಸಿದರೆ ನಾಗರಿಕರಿಗೆ ಕಾನೂನು ಪಾಠ ಮಾಡುವ ಯಾವ ನೈತಿಕತೆ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ಆರಂಭವಾಗಿದೆ.

ನೈಸ್‌ ರಸ್ತೆಯ 2 ಮಾರ್ಗದಲ್ಲಿ ಟೋಲ್‌ ಪ್ಲಾಜಾ ವಿಸ್ತರಣೆ: ಎಲ್ಲೆಲ್ಲಿ? ನೈಸ್‌ ರಸ್ತೆಯ 2 ಮಾರ್ಗದಲ್ಲಿ ಟೋಲ್‌ ಪ್ಲಾಜಾ ವಿಸ್ತರಣೆ: ಎಲ್ಲೆಲ್ಲಿ?

ಸಾಮಾನ್ಯವಾಗಿ ನಾವೆಲ್ಲರೂ ನೋ ಪಾರ್ಕಿಂಗ್ ನಲ್ಲಿ ಗಾಡಿ ನಿಲ್ಲಿಸಿದರೇ ಸಾಕು, ಟ್ರಾಫಿಕ್ ಪೊಲೀಸ್ ರವರ ವಾಹನ ಬಂದು ನಮ್ಮ ಗಾಡಿಗಳನ್ನು ನಮಗೆ ಗೊತ್ತಾಗದಂತೆ ಎತ್ತಿಕೊಂಡು ಹೋಗುತ್ತಾರೆ.

ಬೆಂಗಳೂರು ಟ್ರಾಫಿಕ್ ಸಿಗ್ನಲ್ ಸ್ಮಾರ್ಟ್‌ಗೊಳಿಸಲಿದೆ ಜಪಾನ್ ಬೆಂಗಳೂರು ಟ್ರಾಫಿಕ್ ಸಿಗ್ನಲ್ ಸ್ಮಾರ್ಟ್‌ಗೊಳಿಸಲಿದೆ ಜಪಾನ್

ನಾವು ತಲೆ ಮೇಲೆ ಕೈ ಹೊತ್ತು ಅವರ ವಾಹನದ ಹಿಂದೆ ಓಡಿ ದಂಡ ಕಟ್ಟುವವರೆಗೂ ಖಾಕಿ ಪಡೆ ಬಿಡುವುದಿಲ್ಲ. ಆದರೆ ಇದೇ ನಮ್ಮ ಗಾಡಿಗಳನ್ನು ಎತ್ತಿಕೊಂಡು ಹೋಗುವ ಟೈಗರ್ ವಾಹನವೇ ನೋ ಪಾರ್ಕಿಂಗ್ ನಲ್ಲಿ ಯಾರು ಜವಾಬ್ದಾರಿ ?

ನೋಪಾರ್ಕಿಂಗ್ ಸ್ಥಳದಲ್ಲೇ ಟೋಯಿಂಗ್ ವಾಹನ

ನೋಪಾರ್ಕಿಂಗ್ ಸ್ಥಳದಲ್ಲೇ ಟೋಯಿಂಗ್ ವಾಹನ

ಹೌದು, ಸಂಚಾರ ನಿಯಮ ಉಲ್ಲಂಘಿಸಿದವರಿಗೆ ದಂಡ ಹಾಕುವ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸಿರುವ ಬಗ್ಗೆ ಯುವಕನೋರ್ವ ಸಾಮಾಜಿಕ ಜಾಲತಾಣದಲ್ಲಿ ಸರಿಯಾಗಿ ತರಾಟೆ ತೆಗೆದುಕೊಂಡಿದ್ದಾನೆ. ಮೈಸೂರಿನ ದೇವರಾಜ ಠಾಣೆಯ ಮುಂಭಾಗ ನೋ ಪಾರ್ಕಿಂಗ್ ಫಲಕ ಅಳವಡಿಸಿದ್ದರೂ ಸ್ಥಳದಲ್ಲೇ ಟೋಯಿಂಗ್ ವಾಹನವನ್ನು ಪಾರ್ಕಿಂಗ್ ಮಾಡಿರುವುದನ್ನು ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿರುವ ಯುವಕ ಸಾರ್ವಜನಿಕರಿಗೊಂದು ನ್ಯಾಯ ಪೊಲೀಸರಿಗೊಂದು ನ್ಯಾಯವೇ ಎಂದು ಪ್ರಶ್ನಿಸಿದ್ದಾನೆ.

ಫುಟ್‌ಪಾತ್‌ಮೇಲೆ ಪೊಲೀಸರ ವಾಹನ

ಫುಟ್‌ಪಾತ್‌ಮೇಲೆ ಪೊಲೀಸರ ವಾಹನ

ಪೋಸ್ಟ್ ನಲ್ಲಿ ತಾನು ಸ್ನೇಹಿತರೊಂದಿಗೆ ದೇವರಾಜ ಸಂಚಾರ ಪೊಲೀಸ್ ಠಾಣೆ ಬಳಿ ಹೋಗುತ್ತಿದ್ದಾಗ ನೋ ಪಾರ್ಕಿಂಗ್ ಫಲಕವಿರುವ ಸ್ಥಳದಲ್ಲಿ ಫುಟ್ ಪಾತ್ ಮೇಲೆ ಹತ್ತಿಸಿ ನಿಲ್ಲಿಸಲಾಗಿದ್ದ ಟೋಯಿಂಗ್ ವಾಹನ ಮೊಬೈಲ್ ಗೆ ಸೆರೆಸಿಕ್ಕಿದೆ. ಇದನ್ನು ಜಾಲತಾಣದಲ್ಲಿ ಹರಿಬಿಟ್ಟಿರುವ ಯುವಕ ಪೊಲೀಸರು ತಿಳಿದು ಮಾಡಿದ್ದಾರೋ ತಿಳಿಯದೆ ಮಾಡಿದ್ದಾರೋ ಗೊತ್ತಿಲ್ಲ ? ಆದರೆ ಮೈಸೂರು ಸಿಟಿ ಪೊಲೀಸರು ಈ ಬಗ್ಗೆ ಯಾವ ರೀತಿಯ ಕ್ರಮ ಜರುಗಿಸುತ್ತಾರೆ. ಎಷ್ಟು ದಂಡ ವಿಧಿಸುತ್ತಾರೋ ನೋಡೋಣ ಎಂದು ಉಲ್ಲೇಖಿಸಿದ್ದಾರೆ.

ಯುವಕ ಮಾಡಿರುವ ಪೋಸ್ಟ್ ವೈರಲ್ ಆಗಿದ್ದು ಕಾಡಿನಲ್ಲಿರುವ ಹುಲಿಗಿಂತ ಮೈಸೂರಿನಲ್ಲಿರುವ ಟೈಗರ್ ಕಂಡರೆ ಹೆಚ್ಚು ಭಯವಾಗುತ್ತದೆ.

ಅತ್ತಿತ್ತ ನೋಡುವಷ್ಟರಲ್ಲಿ ಟೋಯಿಂಗ್ ವಾಹನದ ಮೇಲೆ ನಮ್ಮ ಗಾಡಿ

ಅತ್ತಿತ್ತ ನೋಡುವಷ್ಟರಲ್ಲಿ ಟೋಯಿಂಗ್ ವಾಹನದ ಮೇಲೆ ನಮ್ಮ ಗಾಡಿ

ಬೈಕ್ ನಿಲ್ಲಿಸಿ ಅತ್ತಿತ್ತ ನೋಡುವಷ್ಟರಲ್ಲಿ ಟೋಯಿಂಗ್ ವಾಹನದ ಮೇಲಿರುತ್ತದೆ ಅನೌನ್ಸ್ ಮಾಡದೇ ಏಕಾಏಕಿ ದ್ವಿಚಕ್ರ ವಾಹನಗಳನ್ನು ಹೊತ್ತುಕೊಂಡು ಹೋಗುತ್ತಾರೆ. ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದಕ್ಕೆ ದಂಡ ಸಹ ಕಟ್ಟಿಸಿಕೊಳ್ಳುತ್ತಾರೆ.

ಸಂಚಾರ ಪೊಲೀಸರೇ ನಿಯಮ ಪಾಲಿಸುವುದಿಲ್ಲ

ಸಂಚಾರ ಪೊಲೀಸರೇ ನಿಯಮ ಪಾಲಿಸುವುದಿಲ್ಲ

ಸಂಚಾರ ನಿಯಮಗಳ ಬಗ್ಗೆ ಪಾಠ ಹೇಳುವ ಪೊಲೀಸರೇ ಹೀಗೆ ನಿಯಮ ಉಲ್ಲಂಘಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ ದಂಡ ವಸೂಲಿ ಮಾಡಲೇಬೇಕು. ಇಲ್ಲವಾದಲ್ಲಿ ಸಾರ್ವಜನಿಕರನ್ನು ಪ್ರಶ್ನಿಸುವ ನೈತಿಕತೆಯನ್ನೂ ಕಳೆದುಕೊಂಡಂತಾಗುತ್ತದೆ ಎಂದು ಹಲವಾರು ಪ್ರತಿಕ್ರಿಯೆಗಳು ಈಗಾಗಲೇ ವ್ಯಕ್ತವಾಗಿದೆ .

English summary
The Mysuru police violated the traffic rules. Police have stopped the toeing vehicle at No parking spot opposite the Devaraja police station. The young man uploaded a photo of a vehicle standing in No parking place on his Facebook page and denounced police for violating the policy rules.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X