ಜಾತ್ರೆಯಲ್ಲಿ ಬಲೂನ್ ಸ್ಫೋಟ: ಭಾರೀ ಅವಘಡದಿಂದ ಸುತ್ತೂರು ಶ್ರೀ ಪಾರು
ಮೈಸೂರು, ಫೆಬ್ರವರಿ 05: ಮೈಸೂರಿನ ನಂಜನಗೂಡಿನಲ್ಲಿ ನಡೆಯುತ್ತಿದ್ದ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ನೈಟ್ರೋಜನ್ ಬಲೂನ್ ಸ್ಫೋಟಿಸಿದ ಪರಿಣಾಮ ಮೂವರು ಗಾಯಗೊಂಡಿದ್ದಾರೆ.
ಬಲೂನ್ ಸ್ಫೋಟಿಸಿದ ಸ್ಥಳದಲ್ಲೇ ಇದ್ದ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿ ಅದೃಷ್ಟವಶಾತ್ ಅಪಾಯದಿಂದ ಪಾರಾದ ಘಟನೆ ನಡೆದಿದೆ.

ಸುತ್ತೂರು ಜಾತ್ರೆಯಲ್ಲಿ ನಡೆಯುತ್ತಿದ್ದ ಕುಸ್ತಿ ಪಂದ್ಯಾವಳಿ ಉದ್ಘಾಟನೆ ವೇಳೆ ಇದ್ದಕ್ಕಿದ್ದಂತೆ ನೈಟ್ರೋಜನ್ ಬಲೂನ್ ಸ್ಫೋಟಿಸಿದೆ. ಈ ಸಂದರ್ಭದಲ್ಲಿ ಬಿಜೆಪಿಯ ಕಲ್ಮಳ್ಳಿ ಶಿವಕುಮಾರ್, ಹೊಸಕೋಟೆ ದೇವಣ್ಣ ಗಾಯ, ಮರಿತಿಬ್ಬೇಗೌಡ ಎಂಬುವವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.












Click it and Unblock the Notifications