ಮೈಸೂರು ರೈಲು ವಸ್ತು ಸಂಗ್ರಹಾಲಯದಲ್ಲಿ ಹೊಸ ಆಕರ್ಷಣೆಗಳು

ಮೈಸೂರು, ಡಿಸೆಂಬರ್ 26: ಭಾರತೀಯ ರೈಲ್ವೆ ಸಂರಕ್ಷಣಾ ಪಡೆ ಸೇವೆಗಳ ಸದಸ್ಯ ಮತ್ತು ಸಹಾಯಕ್ ಅವರ ಪ್ರತಿಮೆಗಳ ಅನಾವರಣ ಮತ್ತು ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅಜಯ್ ಕುಮಾರ್ ಸಿಂಗ್ ಅವರಿಂದ ಮೈಸೂರು ಹಾಗೂ ಚಾಮರಾಜಪುರಂ ರೈಲ್ವೆ ನಿಲ್ದಾಣಗಳ ಪರಿಶೀಲನೆ ನಡೆಸಲಾಯಿತು.

ಹುಬ್ಬಳ್ಳಿಯ ನೈಋತ್ಯ ವಲಯ ರೈಲ್ವೆ ಮಹಿಳಾ ಕಲ್ಯಾಣ ಸಂಸ್ಥೆಯ ವಲಯ ಅಧ್ಯಕ್ಷರಾದ ಶ್ರೀಮತಿ ಸುಜಾತಾ ಸಿಂಗ್ ರವರು, ಭಾರತೀಯ ರೈಲ್ವೆಯಲ್ಲಿ ಅತ್ಯಂತ ಹೇರಳವಾಗಿ ಕಾಣಸಿಗುವ ಇಬ್ಬರು-ರೈಲ್ವೆ ಸಂರಕ್ಷಣಾ ಪಡೆ ಸೇವೆಗಳ ಸದಸ್ಯ (ಈ ಹಿಂದೆ ಆರ್‌.ಪಿ.ಎಫ್.) ಮತ್ತು ಸಹಯಾಕ್ (ಈ ಮೊದಲು ಪೋರ್ಟರ್ ಎಂದು ಕರೆಯಲಾಗುತ್ತಿತ್ತು) ಇವರ ಜೀವ ಗಾತ್ರ (ಸಹಜ ಪ್ರಮಾಣ)ದ ಪ್ರತಿಮೆಗಳನ್ನು ಮೈಸೂರು ರೈಲ್ವೆ ಸಂಗ್ರಹಾಲಯದಲ್ಲಿ ಅನಾವರಣಗೊಳಿಸಿದರು.

ಗಮನಾರ್ಹವಾಗಿ ಸಹಾಯ

ಗಮನಾರ್ಹವಾಗಿ ಸಹಾಯ

ರೈಲ್ವೆ ಸಂಗ್ರಹಾಲಯದಲ್ಲಿನ ಈ ಹೊಸ ಆಕರ್ಷಣೆಗಳು ಸಂದರ್ಶಕರಿಗೆ ಈ ಎರಡು ವಿಭಿನ್ನ ಜನರ ಗುಂಪುಗಳು ಬಹಳಷ್ಟು ವರ್ಷಗಳಿಂದ ರೈಲ್ವೆಗೆ ಹೇಗೆ ಗಮನಾರ್ಹವಾಗಿ ಸಹಾಯ ಮಾಡುತ್ತಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತವೆ. ಮೈಸೂರಿನ ಮಹಿಳಾ ಕಲ್ಯಾಣ ಸಂಸ್ಥೆಯ ವಿಭಾಗದ ಅಧ್ಯಕ್ಷೆ ಕಲಿಕಾ ಅಗರ್‌ವಾಲ್ ಮತ್ತು ಇತರ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಗಣಕೀಕೃತ ಪ್ರಯಾಣಿಕರ ಕಾಯ್ದಿರಿಸುವ ಟಿಕೆಟ್ ವ್ಯವಸ್ಥೆ

ಗಣಕೀಕೃತ ಪ್ರಯಾಣಿಕರ ಕಾಯ್ದಿರಿಸುವ ಟಿಕೆಟ್ ವ್ಯವಸ್ಥೆ

ಇದಕ್ಕಿಂತ ಮೊದಲು, ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಜೊತೆಯಲ್ಲಿ ಹುಬ್ಬಳ್ಳಿಯ ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಎ.ಕೆ.ಸಿಂಗ್ ಅವರು ಚಾಮರಾಜಪುರಂ ರೈಲ್ವೆ ನಿಲ್ದಾಣವನ್ನು ಪರಿಶೀಲಿಸಿದರು. ಭೇಟಿಯ ಸಂದರ್ಭದಲ್ಲಿ ರೈಲು-ಬಳಕೆದಾರರ ಅನುಕೂಲಕ್ಕಾಗಿ ನಿಲ್ದಾಣದಲ್ಲಿ ಸ್ಥಾಪಿಸಲಾದ ಗಣಕೀಕೃತ ಪ್ರಯಾಣಿಕರ ಕಾಯ್ದಿರಿಸುವ ಟಿಕೆಟ್ ವ್ಯವಸ್ಥೆಯನ್ನು (ಪಿಆರ್ಎಸ್) ನಿಯೋಜಿಸಲಾಯಿತು.

ಮೈಸೂರು ವಿಭಾಗದ ಹಿರಿಯ ಅಧಿಕಾರಿಗಳ ಉಪಸ್ಥಿತಿ

ಮೈಸೂರು ವಿಭಾಗದ ಹಿರಿಯ ಅಧಿಕಾರಿಗಳ ಉಪಸ್ಥಿತಿ

ಮೈಸೂರಿನಿಂದ ಪ್ರಯಾಣಿಕರ ಸೇವೆಗಳನ್ನು ಕ್ರಮೇಣ ಪುನರಾರಂಭಿಸಿದ ನಂತರ ಎ.ಕೆ.ಸಿಂಗ್ ಅವರು ಮೈಸೂರು ರೈಲ್ವೆ ನಿಲ್ದಾಣ ಮತ್ತು ಪಿಟ್ ಲೈನ್ ಗಳನ್ನು ಪರಿಶೀಲಿಸಿದರು. ಪರಿಶೀಲನೆ ವೇಳೆ ಮೈಸೂರು ವಿಭಾಗದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 12.00 ಗಂಟೆವರಗೆ ಕಾರ್ಯನಿರ್ವಹಣೆ

12.00 ಗಂಟೆವರಗೆ ಕಾರ್ಯನಿರ್ವಹಣೆ

ಚಾಮರಾಜಪುರಂ ರೈಲ್ವೆ ನಿಲ್ದಾಣದ ಪ್ರಯಾಣಿಕರ ಕಾಯ್ದಿರಿಸುವ ಟಿಕೆಟ್ ವ್ಯವಸ್ಥೆಯು ವಾರದ ದಿನಗಳಲ್ಲಿ (ಭಾನುವಾರ ಹೊರತುಪಡಿಸಿ) 10.00 ಗಂಟೆಯಿಂದ 12.00 ಗಂಟೆಯವರೆಗೆ ಮತ್ತು 15.00 ಗಂಟೆಯಿಂದ 18.00 ಗಂಟೆಯವರೆಗೆ ಹಾಗೂ ಭಾನುವಾರ ಬೆಳಿಗ್ಗೆ 10.00 ಗಂಟೆಯಿಂದ 12.00 ಗಂಟೆವರಗೆ ಕಾರ್ಯ ನಿರ್ವಹಿಸುತ್ತದೆ ಎಂದು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಹಾಗೂ ಹಿರಿಯ ಜನಸಂಪರ್ಕಾಧಿಕಾರಿ ಪ್ರಿಯಾ ಶೆಟ್ಟಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+