ಮೈಸೂರು: ಹರಿಕಥೆ ಕಲಾವಿದರೊಬ್ಬರ ಮನೆ ಧ್ವಂಸಗೊಳಿಸಿದ ಪಕ್ಕದ ಮನೆಯವ
ಮೈಸೂರು, ಅಕ್ಟೋಬರ್ 29: ಹರಿಕಥೆ ಕಲಾವಿದರೊಬ್ಬರ ಮನೆಯನ್ನು ಪಕ್ಕದ ಮನೆಯವರೇ ದ್ವೇಷದಿಂದ ಧ್ವಂಸಗೊಳಿಸಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಮಲ್ಲುಪುರ ಗ್ರಾಮದಲ್ಲಿ ನಡೆದಿದೆ.
ಹರಿಕಥೆ ಕಲಾವಿದ ಸಚಿನ್ ಮತ್ತು ಪಕ್ಕದ ಮನೆಯ ನಿವಾಸಿ ಸುರೇಶ್ ಮನೆಯವರ ನಡುವೆ, ಮನೆ ಮುಂದೆ ಇರುವ ಮೋರಿ ವಿಚಾರವಾಗಿ ಹಿಂದೆ ಜಗಳ ನಡೆದಿತ್ತು.
ದ್ವೇಷದ ಹಿನ್ನೆಲೆಯಲ್ಲಿ ನಿನ್ನೆ ಹರಿಕಥೆ ಕಲಾವಿದ ಸಚಿನ್ ಮನೆಯಲ್ಲಿ ಇಲ್ಲದಿದ್ದಾಗ ಸುರೇಶ್ ಕಲ್ನಾರು ದ್ವೇಷದ ಹಿನ್ನೆಲೆ ಮನೆಯ ಮೇಲ್ಛಾವಣಿ ಮೇಲೆ ದೊಡ್ಡ ಕಲ್ಲುಗಳನ್ನು ಎಸೆದು ಧ್ವಂಸ ಮಾಡಿದ್ದಾರೆ ಎಂದು ಹೇಳಲಾಗಿದೆ.

ಈ ದಾಳಿಯಿಂದಾಗಿ ಮನೆಯ ಪೀಠೋಪಕರಣ, ಟಿವಿ, ಫ್ರಿಡ್ಜ್ ಹಾಗೂ ವಾಷಿಂಗ್ ಮಿಶಿನ್ ಸೇರಿ ಹಲವು ವಸ್ತುಗಳು ಧ್ವಂಸಗೊಳಿಸಲಾಗಿದೆ. ಈ ಸಂಬಂಧ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸುರೇಶ್ ನನ್ನು ವಶಕ್ಕೆ ಪಡೆದು ಪೋಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications