ಮತದಾನ ಮಾಡಿದ ನಂಜನಗೂಡು ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್
ಯಳಂದೂರು, ಮೇ 10: ಕರ್ನಾಟಕ ವಿಧಾನಸಭಾ ಚುನಾವಣೆ ಮತದಾನ ದಿನವಾದ ಮೇ 10 ರಂದು ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್ ಅವರು ಚಾಮರಾಜನಗರದ ಹೆಗ್ಗವಾಡಿ ಗ್ರಾಮದಲ್ಲಿ ಮತದಾನ ಮಾಡಿದರು.
ಇದಕ್ಕೂ ಮುನ್ನ ಅವರು ಚಾಮರಾಜನಗರ ತಾಲ್ಲೂಕಿನ ಹೆಗ್ಗವಾಡಿ ಗ್ರಾಮದಲ್ಲಿ ಬುಧವಾರ ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ದರ್ಶನ್ ಧ್ರುವನಾರಾಯಣ್ ಅವರು ಮತದಾನಕ್ಕೂ ಮುನ್ನ ತಮ್ಮ ತಂದೆ ದಿವಂಗತ ಧ್ರುವನಾರಾಯಣ್ ಹಾಗೂ ತಾಯಿ ದಿವಂಗತ ವೀಣಾ ಧ್ರುವನಾರಾಯಣ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು. ದರ್ಶನ್ ಅವರು ಸಹೋದರ ಧೀರನ್ ಅವರ ಜತೆಗೂಡಿ ತಮ್ಮ ತಂದೆ-ತಾಯಿಗೆ ಪೂಜೆ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿದರು.

ನಂತರ ಗ್ರಾಮದಲ್ಲಿನ ಮತಗಟ್ಟೆ ಸಂಖ್ಯೆ 65 ರಲ್ಲಿ ಕುಟುಂಬದ ಸದಸ್ಯರು ಹಾಗೂ ಕಾರ್ಯಕರ್ತರೊಂದಿಗೆ ತೆರಳಿ ಮತದಾನ ಮಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ .ಎಸ್.ರೇವಣ್ಣ, ಅಜಯ್ ಶಂಭು, ಗ್ರಾ.ಪಂ. ಸದ್ಯಸರಾದ ಆರ್.ಕೆಂಪರಾಜ್, ನಾಗರಾಜು, ಕೌಶಿಕ್, ಸತೀಶ್, ಮಹೇಶ್, ಮಹದೇವಸ್ವಾಮಿ, ಮನು, ಮಧುಶಂಕರ್ ಹಾಗೂ ಇತರರು ಉಪಸ್ಥಿತರಿದ್ದರು.












Click it and Unblock the Notifications