• search
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಸರಾ ಆಹಾರ ಮೇಳ: ಅಕ್ಟೋಬರ್ 11 ರಿಂದ ವಿಶೇಷ ನಳಪಾಕ ಸ್ಪರ್ಧೆ

|

ಮೈಸೂರು, ಅಕ್ಟೋಬರ್. 04: ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ ಹಾಗೂ ಲಲಿತ್ ಮಹಲ್ ಪ್ಯಾಲೆಸ್ ಹೋಟೆಲ್ ಬಳಿಯ ಮುಡಾ ಮೈದಾನದಲ್ಲಿ ಜನಪ್ರಿಯ ಆಹಾರ ಮೇಳ ನಡೆಯಲಿದೆ.

ಬಂಬೂ ಬಿರಿಯಾನಿ, ಬಿದಿರಕ್ಕಿ ಪಾಯಸ, ಬಿದಿರು-ಕಳಲೆ ಸಾರು, ನಳ್ಳಿ ಸಾರು ಸೇರಿದಂತೆ ಆದಿವಾಸಿ ಬುಡಕಟ್ಟು ಸಮುದಾಯದ ತಿನಿಸುಗಳನ್ನು ಕಳೆದ ಬಾರಿ ಪರಿಚಯಿಸಿದ್ದ ದಸರಾ ಉಪಸಮಿತಿ, ಈ ಬಾರಿ ಚೀನಾ, ಶ್ರೀಲಂಕಾ, ಬಾಂಗ್ಲಾದೇಶ, ಟಿಬೆಟ್‌, ದಕ್ಷಿಣ ಆಫ್ರಿಕಾ, ಕಾಂಬೋಡಿಯಾ ದೇಶಗಳ ತಿನಿಸುಗಳನ್ನೂ ಪರಿಚಯಿಸಲು ಮುಂದಾಗಿದೆ.

ಮೈಸೂರು ದಸರಾ: ಖಾಸಗಿ ದರ್ಬಾರ್ ಗೆ ಸಿದ್ಧವಾದ ರತ್ನ ಖಚಿತ ಸಿಂಹಾಸನ

ದಸರಾ ಸಂದರ್ಭದಲ್ಲಿ ಬೆಳಗ್ಗೆ 11.30 ರಿಂದ ಮಧ್ಯಾಹ್ನ 1 ಗಂಟೆವರೆಗೆ ವಿಶೇಷ ನಳಪಾಕ ಸ್ಪರ್ಧೆಗಳು ನಡೆಯಲಿವೆ. ಅ.11 ರಂದು ಅತ್ತೆ ಸೊಸೆ ವಿಭಾಗದಿಂದ ಅಕ್ಕಿರೊಟ್ಟಿ ಮತ್ತು ಬದನೆಕಾಯಿ ಎಣ್ಣೆಗಾಯಿ ತಯಾರಿಕೆ, ಅ.12ಕ್ಕೆ ಗಂಡ-ಹೆಂಡತಿ ವಿಭಾಗದಿಂದ ರಾಗಿರೊಟ್ಟಿ ಮತ್ತು ಹುಚ್ಚೆಳ್ ಚಟ್ನಿ.

ಅ.13ಕ್ಕೆ ಯುವಕರ ವಿಭಾಗದಿಂದ ವೆಜ್ ಫ್ರೈಡ್ ರೈಸ್‌ ಮತ್ತು ಸಲಾಡ್, ಅ.14ಕ್ಕೆ ಯುವತಿಯರ ವಿಭಾಗದಿಂದ ಗೀರೈಸ್ ಮತ್ತು ವೆಜ್ ಕುರ್ಮಾ, ಅ.15ಕ್ಕೆ ಹಿರಿಯ ಪುರುಷ ಹಾಗೂ ಮಹಿಳೆಯರ ವಿಭಾಗದಿಂದ ಸಿರಿಧಾನ್ಯ ಅಡುಗೆ, ಅ.16ಕ್ಕೆ ಮಹಿಳಾ ಸಂಘ ಅಥವಾ ಸ್ತ್ರೀಶಕ್ತಿ ಸಂಘದ ಸದಸ್ಯರಿಂದ ಕಾಯಿ ಹೊಳಿಗೆ, ವೆಜ್ ಪಕೋಡ ಹಾಗೂ ರೈಸ್‌ ಪಲಾವ್‌ ತಯಾರಿಕೆ.

ಮೈಸೂರು ದಸರಾ ಹಿನ್ನೆಲೆ: ಈ ದಿನಗಳಂದು ಅರಮನೆಗೆ ಪ್ರವೇಶ ನಿರ್ಬಂಧ

ಅ.17 ಕೊನೆಯ ದಿನದಂದು ಹೋಟೆಲ್‌, ಕೆಟರರ್ಸ್ ಹಾಗೂ ಗೃಹ ಕುಟುಂಬದವರಿಂದ ಒತ್ತು ಶಾವಿಗೆ, ನಾಟಿ ಕೋಳಿ ಸಾರು ಹಾಗು ಗಸಗಸೆ ಪಾಯಸ ತಯಾರಿಸುವ ಸ್ಪರ್ಧೆ ಏರ್ಪಡಿಸಲಾಗಿದೆ.

ಯದುರಾಯರಿಂದ ಯದುವೀರ್ ವರೆಗೆ, ತಿಳಿಯಲೇಬೇಕಾದ ರಾಜಮನೆತನದ ಇತಿಹಾಸ

ನಳಪಾಕ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಗ್ಯಾಸ್‌ ಸ್ಟೌವ್ ಮತ್ತು ಅಡುಗೆ ಅನಿಲವನ್ನು ಆಯೋಜಕರೇ ವಿತರಿಸಲಿದ್ದಾರೆ. ಅಗತ್ಯ ಸಾಮಗ್ರಿಗಳನ್ನು ಸ್ಪರ್ಧಿಗಳೇ ತರಬೇಕು. ಭಾಗವಹಿಸುವ ಎಲ್ಲ ಸ್ಪರ್ಧಿಗಳು ಅಗತ್ಯ ದಾಖಲೆಗಳೊಂದಿಗೆ, ಅ.6ರ ಒಳಗೆ ಹೆಸರು ನೋಂದಣಿ ಮಾಡಿಕೊಳ್ಳಬೇಕು.

ಇನ್ನಷ್ಟು ಮೈಸೂರು ಸುದ್ದಿಗಳುView All

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Janapriya Ahara Mela will be held during Dasara like every year. Tha mela will be held at Scouts and Guides Ground from october 10 to 18 and near Lalitha Mahal Palace Ground from October 10 to 19.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more