ಹಾಡಿ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ನಾದಬ್ರಹ್ಮ ಹಂಸಲೇಖ
ಮಕ್ಕಳೊಂದಿಗೆ ಆಚರಿಸಿಕೊಂಡರು. ಹಾಡಿ ಮಕ್ಕಳೊಂದಿಗೆ ಮಧ್ಯಾಹ್ನದ ಊಟ ಸವಿದ ಹಂಸಲೇಖ ಸ್ಥಳದಲ್ಲೇ ಆದಿವಾಸಿ ಗಿರಿಜನ 10 ಮಕ್ಕಳನ್ನು ಉಚಿತ ಸಂಗೀತ ಅಭ್ಯಾಸಕ್ಕೆ ಆಯ್ಕೆ ಮಾಡಿದರು. ಸಂಗೀತದ ಬಗ್ಗೆ ಆಸಕ್ತಿ ಹೊಂದಿರುವ ಈ ಮಕ್ಕಳಿಗೆ ಉಚಿತವಾಗಿ ಸಂಗೀತ ಶಿಕ್ಷಣ ಕೊಡಲಾಗುವುದು ಎಂದು ತಿಳಿಸಿದರು.
ಆದಿವಾಸಿಗಳ ಮಕ್ಕಳು ಹುಟ್ಟು ಕಲಾವಿದರು: ಹಂಸಲೇಖ
ಕಳೆದ ವರ್ಷ ತಮ್ಮ 69ನೇ ಹುಟ್ಟುಹಬ್ಬದಲ್ಲಿ 69 ಮಂದಿ ಗಾಯಕರು ಹಾಡಿ ಹಾಡಿ ರಂಜಿಸಿದರು. ಈ ಬಾರಿ ಕಾಂಕ್ರಿಟ್ ನಾಡಿನಲ್ಲಿ ಹುಟ್ಟುಹಬ್ಬ ಆಚರಣೆ ಮಾಡುವುದು ಬೇಡ ಎಂದುಕೊಂಡು ಕಾಡಿನ ನಡುವೆ ಕಾಡು ಮಕ್ಕಳ ನಡುವೆ ಆಚರಿಸಿಕೊಳ್ಳೋಣ ಎಂದು ಇಲ್ಲಿಗೆ ತಮ್ಮ ಪತ್ನಿಯೊಂದಿಗೆ ಬಂದೆ. ಆದರೂ, ಕಾಯಕ್ರಮ ವ್ಯವಸ್ಥಾಪಕರು ಕೇಕ್ ತಂದಿದ್ದಾರೆ ಎಂದು ಖುಷಿ ಪಟ್ಟು ಕೇಕ್ ಕತ್ತರಿಸಿದರು. ಇಂದಿನ ಹುಟ್ಟುಹಬ್ಬ ತಮಗೆ ಮರೆಯಲಾಗದ ದಿನ ಎಂದು ಸ್ಮರಿಸಿದರು.
''ಈ ಮಕ್ಕಳಿಗೆ ಸಂಗೀತ ಕಲಿಯಲು ಬೇಕಾಗುವ ಸಂಗೀತ ಉಪಕರಣಗಳು ಮತ್ತು ಟ್ಯಾಬ್ಲೆಟ್ ಕೊಡಲಾಗುವುದು. ಆದಿವಾಸಿಗಳ ಮಕ್ಕಳು ಹುಟ್ಟು ಕಲಾವಿದರು. ಅವರಲ್ಲಿರುವ ಆಸಕ್ತಿ ಗಮನಿಸಿ ಇಂದು 10 ಮಕ್ಕಳನ್ನು ಆಯ್ಕೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಮತ್ತಷ್ಟು ಮಕ್ಕಳನ್ನು ಆಯ್ಕೆ ಮಾಡಿಕೊಂಡು ಉಚಿತವಾಗಿ ಸಂಗೀತ ಶಿಕ್ಷಣ ನೀಡಲಾಗುವುದು,'' ಎಂದರು.

ಆನ್‌ಲೈನ್ ಸಂಗೀತ ಶಿಕ್ಷಣ
ಆಗಸ್ಟ್ 15ರಂದು ಆನ್‌ಲೈನ್‌ನಲ್ಲೇ ಉಚಿತ ಸಂಗೀತ ಶಿಕ್ಷಣ ಪ್ರಾರಂಭ ಮಾಡಲಿದ್ದು, ಆಸಕ್ತಿ ಇರುವ ಯಾರೂ ಬೇಕಾದರೂ ಸಂಗೀತವನ್ನು ಉಚಿತವಾಗಿ ಪಡೆಯಬಹುದು. ಅದಕ್ಕೆ ಈ ಯೋಜನೆಗೆ ''ದಯಾ'' ಎಂದು ಹೆಸರಿಡಲಾಗಿದೆ,''ಎಂದರು. ಲತಾ ಹಂಸಲೇಖ, ಬಿರ್ಸಾ ಮುಂಡಾ ಬುಡಕಟ್ಟು ಸಮಾಜಗಳ ಅಭಿವೃದ್ಧಿ ಹಾಗೂ ಸೇವಾಸಂಸ್ಥೆಯ ಅಧ್ಯಕ್ಷ ಶೇಖರ್ ಎಲೆಹುಂಡಿ, ಕಾರ್ಯದರ್ಶಿ ಬಸವನಗಿರಿ ಹಾಡಿಯ ಬಿ.ಎಂ. ನಟರಾಜು, ಸದರಿ ಸಂಘಟನೆಯ ಮಹಾಪೋಷಕ ಜಿ.ಎನ್. ದೇವದತ್ತ, ಬೂದನೂರು ವೆಂಕಟೇಶ್, ಚಕ್ಕೋಡನಹಳ್ಳಿ ಗ್ರಾಪಂ ಅಧ್ಯಕ್ಷ ಕಾಳಿಂಗೇಗೌಡ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ನಾರಾಯಣಪ್ಪ, ಗಿರಿಜನ ಸಮನ್ವಯಾಧಿಕಾರಿ ನಾಗರಾಜು ಮತ್ತಿತತರು ಹಾಜರಿದ್ದರು.
-
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ












Click it and Unblock the Notifications