ಎಚ್.ಡಿ.ಕೋಟೆ; ಜಮೀನಿನ ಜಗಳ ಕೊನೆಯಾಗಿದ್ದು ಅಣ್ಣನ ಕೊಲೆಯಲ್ಲಿ

ಮೈಸೂರು, ಜೂನ್ 20: ಭೂಮಿಗೆ ಸಂಬಂಧಿಸಿದಂತೆ ಅಣ್ಣ ತಮ್ಮಂದಿರ ನಡುವಿನ ಜಗಳ ತಾರಕಕ್ಕೇರಿ ತಮ್ಮನಿಂದಲೇ ಅಣ್ಣ ಕೊಲೆಯಾದ ಘಟನೆ ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲೂಕಿನ ಹೈರಿಗೆ ಗ್ರಾಮದಲ್ಲಿ ನಡೆದಿದೆ.

ಮಹದೇವೇಗೌಡ (53) ತಮ್ಮನಿಂದ ಕೊಲೆಯಾದವರು. ತಮ್ಮ ಗಂಗಾಧರ್, ಅಣ್ಣ ಮಹದೇವೇಗೌಡ ಮೇಲೆ ಕುಡುಗೋಲುನಿಂದ ಹಲ್ಲೆ ಮಾಡಿ ಇರಿದು ಕೊಲೆ ಮಾಡಿದ್ದಾನೆ. ಮೃತ ಮಹದೇವೇಗೌಡರ ಹೆಸರಿನಲ್ಲಿದ್ದ ಆರು ಎಕರೆ ಜಮೀನನ್ನು ಉಳುಮೆ ಮಾಡುವ ವಿಚಾರದಲ್ಲಿ ಗಲಾಟೆ ಆರಂಭವಾಗಿದೆ. ಜಮೀನಿನಲ್ಲಿ ಮಾತಿಗೆ ಮಾತು ನಡೆದು ಕೊನೆಗೆ ಕೊಲೆಯಲ್ಲಿ ಜಗಳ ಅಂತ್ಯವಾಗಿದೆ.

Person Murdered His Brother For Land Issue In HD Kote Mysuru

ಘರ್ಷಣೆಯಲ್ಲಿ ಆರೋಪಿ ಗಂಗಾಧರನಿಗೂ ಗಾಯವಾಗಿದೆ. ಪೊಲೀಸರು ಈತನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಎಚ್. ಡಿ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+