ನಿರ್ಭಯಾ ಬಾಲಾಪರಾಧಿ ಬಿಡುಗಡೆ ಖಂಡಿಸಿ ಮೈಸೂರಲ್ಲಿ ಸಹಿ ಚಳವಳಿ
ಮೈಸೂರು, ಡಿಸೆಂಬರ್, 24: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಬಂಧಿಯಾಗಿದ್ದ ಬಾಲಾಪರಾಧಿ ಬಿಡುಗಡೆ ಖಂಡಿಸಿ ರಾಮನಗರದ ವಿದ್ಯಾರ್ಥಿನಿಯರು ಸಹಿ ಸಂಗ್ರಹ ಚಳವಳಿ ನಡೆಸಿದ್ದು. ದೆಹಲಿ ಹೈಕೋರ್ಟಿನ ತೀರ್ಪಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಂತಿನಿಕೇತನ ಸಮೂಹ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಹಿ ಸಂಗ್ರಹ ಕಾರ್ಯಕ್ರಮದಲ್ಲಿ ಕಾಲೇಜಿನ ನೂರಾರು ವಿದ್ಯಾರ್ಥಿನಿಯರು ಸಹಿ ಹಾಕಿ ಡಿಸೆಂಬರ್ 20ರಂದು ಬಿಡುಗಡೆಯಾದ ನಿರ್ಭಯಾ ಅತ್ಯಾಚಾರಿ ಆರೋಪಿ ಮೇಲೆ ತಮ್ಮ ವಿರೋಧ ವ್ಯಕ್ತಪಡಿಸಿದರು.[ದೆಹಲಿ ರೇಪ್ ಕೇಸ್ ಬಾಲಾಪರಾಧಿ ರಹಸ್ಯವಾಗಿ ಬಿಡುಗಡೆ]

ನಿರ್ಭಯಾ ಅತ್ಯಾಚಾರಿ ಆರೋಪಿಯನ್ನು ಬಿಡುಗಡೆ ಮಾಡಿರುವ ಕ್ರಮ ಸರಿಯಲ್ಲ ಎಂದು ಹೇಳಿರುವ ವಿದ್ಯಾರ್ಥಿನಿಯರು ಬಾಲಾಪರಾಧಿಗಳು ಬಿಡುಗಡೆಯಾದರೇ ಮುಂದಿನ ದಿನಗಳಲ್ಲಿ ಇನ್ನಷ್ಟು ಅನಾಹುತಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ.
ಈ ಪ್ರಕರಣ ನಮ್ಮ ದೇಶದಲ್ಲಿ ಕಠಿಣ ಕಾನೂನಿನ ಕೊರತೆಯಿದೆ ಎಂಬುದನ್ನು ತೋರಿಸುತ್ತಿದ್ದು, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಅತ್ಯಾಚಾರ ಮಾಡಲು ಪ್ರೇರಣೆ ನೀಡಿದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.[ಬಾಲಾಪರಾಧಿಗಳ ವಯೋಮಿತಿ ಇಳಿಕೆ, ವಿಧೇಯಕದ ಪ್ರಮುಖ ಅಂಶಗಳು]
ದೆಹಲಿಯಲ್ಲಿ 2012ರ ಡಿಸೆಂಬರ್ 16ರಂದು ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಜ್ಯೋತಿಸಿಂಗ್ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಅದರಲ್ಲಿದ್ದ ಬಾಲಾಪರಾಧಿ 3 ವರ್ಷಗಳ ಜೈಲು ಶಿಕ್ಷೆ ಪೂರೈಸಿ ಡಿಸೆಂಬರ್ 20ರಂದು ಬಿಡಗಡೆಗೊಂಡಿದ್ದಾನೆ. ಈತನ ಬಿಡುಗಡೆ ವಿರೋಧಿಸಿ ಜ್ಯೋತಿಸಿಂಗ್ ತಾಯಿ ಸೇರಿದಂತೆ ಹಲವಾರು ಮಂದಿ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ಕೈಗೊಂಡಿದ್ದರು.












Click it and Unblock the Notifications