ಚೆನ್ನೈ ಪ್ರವಾಹದಿಂದ ಬದುಕುಳಿದು ಬಂದ ಮೈಸೂರು ಟೆಕ್ಕಿ
ಮೈಸೂರು, ಡಿಸೆಂಬರ್, 05: ಚೆನ್ನೈನಲ್ಲಿ ಸಂಭವಿಸಿರುವ ಜಲಪ್ರವಾಹದಲ್ಲಿ ಸಿಲುಕಿ ಕುಟುಂಬಸ್ಥರ ಸಂಪರ್ಕ ಕಳೆದುಕೊಂಡಿದ್ದ ಹುಣಸೂರು ತಾಲೂಕಿನ ಬಿಳಿಕೆರೆಯ ಸಾಫ್ಟ್ ವೇರ್ ಇಂಜಿನಿಯರ್ ಸುಧೀಂದ್ರ ಸುರಕ್ಷಿತವಾಗಿ ಬಂದು ತಮ್ಮ ಊರು ತಲುಪಿದ್ದು, ಕುಟುಂಬದವರು ಆತಂಕದಿಂದ ನಿರಾಳರಾಗಿದ್ದಾರೆ.
ಚೆನ್ನೈನ ರಮಾಪುರಂನ ಕಾಗ್ನಿಜೆಂಟ್ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸುಧೀಂದ್ರ ಗೌಡ ಕಳೆದ ಕೆಲದಿನಗಳಿಂದ ಕುಟುಂಬದವರ ಸಂಪರ್ಕಕ್ಕೆ ಲಭ್ಯವಾಗಿರಲಿಲ್ಲ. ಹೀಗಾಗಿ ಹುಟ್ಟೂರು ಬಿಳಿಕೆರೆಯಲ್ಲಿ ಆತನ ವಿಚಾರವಾಗಿ ಚಿಂತೆಗೀಡಾಗಿದ್ದು, ಇದೀಗ ಮನೆಯಲ್ಲಿ ಸಂತಸದ ವಾತಾವರಣ ಮೂಡಿದೆ.[ಚೆನ್ನೈ ಪ್ರವಾಹ: ಸಂಪರ್ಕಕ್ಕೆ ಸಿಕ್ಕ ಮಂಡ್ಯ ಟೆಕ್ಕಿ]

ಚೆನ್ನೈನಿಂದ ಮರಳಿ ಬಂದ ಸುಧೀಂದ್ರ ಅವರು, 'ಪ್ರವಾಹದಿಂದಾಗಿ ನಾನು ಉಳಿದುಕೊಂಡಿದ್ದ ಬಡಾವಣೆ ಸಂಪೂರ್ಣ ನೀರುಮಯವಾಗಿತ್ತು. ಆಗ ನಾಲ್ಕು ಅಂತಸ್ತಿನ ಮನೆಯಲ್ಲಿ ಸುಮಾರು ಎರಡು ದಿನಗಳ ಕಾಲ 11 ಮಂದಿ ಆಹಾರ, ನೀರು ಇಲ್ಲದೆ ಬದುಕುತ್ತಿದ್ದೆವು.[ಚೆನ್ನೈಗೆ ಮೈಸೂರಿನ ಯಾವ ಸಂಸ್ಥೆಯಿಂದ ಆಹಾರ ರವಾನೆ?]
ಪ್ರವಾಹ ಇಳಿದ ಬಳಿಕ ಹೇಗೋ ಸಾಹಸ ಮಾಡಿ ಒಂದಷ್ಟು ಹಣ ಸಂಗ್ರಹಿಸಿಕೊಂಡು ಚೆನ್ನೈ ಬಸ್ ನಿರ್ವಾಹಕನಲ್ಲಿ ಬೆಂಗಳೂರಿನಲ್ಲಿ ಹಣ ಪಾವತಿಸುವುದಾಗಿ ವಿನಂತಿ ಮಾಡಿ ಬೆಂಗಳೂರು ತಲುಪಿದ ಬಳಿಕ ಹಣ ಪಾವತಿಸಿ ಮನೆಗೆ ಬಂದಿದ್ದೇನೆ' ಎಂದು ತಮ್ಮ ಕಹಿ ಅನುಭವ ಹೇಳಿದ್ದಾರೆ.












Click it and Unblock the Notifications