ಮೈಸೂರಿನಲ್ಲಿ ಸಾಧನಾ ಸಮಾವೇಶ: ಬಾರಿನ ಮುಂದೆ ಜನರ ಸಾಲು!
ಮೈಸೂರು, ಜೂನ್ 3: ಗಾಂಧಿಜೀಯವರು ಕಂಡ ಕನಸು ಇಂದು ಕಾಂಗ್ರೆಸ್ ಸರ್ಕಾರದಿಂದ ನನಸಾಗಿದೆ ಎಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಸರ್ಕಾರದ ಸಾಧನಾ ಸಮಾವೇಶ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರೊಬ್ಬರು ವೇದಿಕೆಯಲ್ಲಿಉದ್ವೇಗದಿಂದ ಮಾತನಾಡುತ್ತಿದ್ದರೆ, ಅತ್ತ ನೂರಡಿ ರಸ್ತೆಯ ಬಾರಿನ ಮುಂದೆ ಸಾಲು ಸಾಲಾಗಿ ಜನ ನಿಂತಿದ್ದರು!
ಇವರೆಲ್ಲರೂ ಸಾಧನಾ ಸಮಾವೇಶಕ್ಕೆಂದು ಬಂದವರು ಎಂಬುದು ಮತ್ತಷ್ಟು ಅಚ್ಚರಿಯ ಸಂಗತಿ! ತಾವು ಬದುಕಿರುವವರೆಗೂ ಮದ್ಯಪಾನವನ್ನು ವಿರೋಧಿಸಿದ್ದ ಗಾಂಧೀಜಿಯವರ ಹೆಸರನ್ನು ನಾಯಕರು ಪ್ರಸ್ತಾಪಿಸುವ ಹೊತ್ತಲ್ಲೇ, ಹಲವರು ಬಾರಿನ ಮುಂದೆ ಜಮಾಯಿಸಿದ್ದು, ಕಾಕತಾಳಿಯವೋ, ವಿಪರ್ಯಾಸವೋ ದೇವರೇ ಬಲ್ಲ![ಸಿದ್ದು ಸರ್ಕಾರದ ಸಾಧನಾ ಸಮಾವೇಶಕ್ಕೆ ಸಾಕ್ಷಿಯಾಯ್ತು ಮೈಸೂರು]

ರಾಜ್ಯ ಕಾಂಗ್ರೆಸ್ ಸರ್ಕಾರ ನಾಲ್ಕು ವರ್ಷ ಪೂರೈಸಿದ ಸಂಭ್ರಮಕ್ಕಾಗಿ, ನಾಲ್ಕು ವರ್ಷದ ಸಾಧನೆಯನ್ನು ಮೆಲುಕು ಹಾಕುತ್ತಿದ್ದರೆ, ವಿವಿಧ ಯೋಜನೆಗಳ ಫಲಾನುಭವಿಗಳಾಗಿ ಬಂದಿದ್ದ ಹಲವರು ಬಾರಿನ ಮುಂದೆ ಪ್ರತಿಷ್ಠಾಪನೆಯಾಗಿದ್ದು ವ್ಯಂಗ್ಯವೇ ಸರಿ!












Click it and Unblock the Notifications