ಪ್ರಧಾನಿ ಮೋದಿ ಚಾಲನೆ ನೀಡಿದ್ದ ಮೈಸೂರು ರೈಲು ನಿಲ್ದಾಣದ ವಿಶ್ವದರ್ಜೆಯ ಅಭಿವೃದ್ಧಿ ಕಾಮಗಾರಿ ಆರಂಭ ಶೀಘ್ರ

ಮೈಸೂರು, ಮೇ 26: ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದ ಸಾಂಸ್ಕೃತಿಕ ನಗರಿ ಮೈಸೂರು ಜನರ ಬಹುನಿರೀಕ್ಷೆಯ ಕೇಂದ್ರ ರೈಲ್ವೆ ನಿಲ್ದಾಣ ವಿಸ್ತರಣೆ ಯೋಜನೆಯ ಟೆಂಡರ್ ಪ್ರಕ್ರಿಯೆ ಶುರುವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭವಾಗಿ, ಕೆಲವೇ ತಿಂಗಳುಗಳಲ್ಲಿ ನಿಲ್ದಾಣ ಸುಂದರ ಆಧುನಿಕ ರೂಪ ಪಡೆದುಕೊಂಡು ವಿಶ್ವ ದರ್ಜೆಯ ಸೇವೆಯನ್ನು ಪ್ರಯಾಣಿಕರಿಗೆ ನೀಡಲಿದೆ.

ಸುಮಾರು ಎಂಟು ದಶಕಗಳ ಹಿಂದೆ ಅಂದರೆ 1940ರಲ್ಲಿ ಸ್ಥಾಪನೆಯಾಗಿರುವ ಈ ರೈಲು ನಿಲ್ದಾಣವು ಇಂದು ಜನಸಂಖ್ಯೆ ಆಧಾರದಲ್ಲಿ ಉತ್ತಮ ಸೇವೆ ಒದಗಿಸುವ ದೃಷ್ಟಿಯಿಂದ ವಿಸ್ತರಣೆ ಅಗತ್ಯವಾಗಿದೆ. ಇದು ಇಲ್ಲಿನ ಜನರ ಬಹುದಿನಗಳ ಬೇಡಿಕೆಯು ಆಗಿತ್ತು.

Mysuru Railway Station

ಈ ಕಾರಣದಿಂದಲೇ ಮೈಸೂರು ರೈಲ್ವೆ ನಿಲ್ದಾಣ ಅಭಿವೃದ್ಧಿ ಕಾಮಗಾರಿಗೆ ಕಳೆದ ವರ್ಷ 2022ರ ಜೂನ್ 20ರಂದು ಪ್ರಧಾನಿ ನರೇಂದ್ರ ಮೋದಿ 346.64 ಕೋಟಿ ರೂ. ವೆಚ್ಚದ ಯೋಜನೆಯಡಿ ಶಿಲಾನ್ಯಾಸ ನೆರವೇರಿಸಿದ್ದರು. ಅಲ್ಲಿಂದ ಈವರೆಗೂ ಅಭಿವೃದ್ಧಿ, ವಿಸ್ತರಣೆ ಹೇಗಿರಬೇಕು ಎಂದೆಲ್ಲ ನೀಲ ನಕ್ಷೆ ತಯಾರಿಸಲಾಗಿದೆ.

ಸದ್ಯ ಯೋಜನೆ ಅನುಷ್ಠಾನಕ್ಕಾಗಿ ಟೆಂಡರ್ ಕರೆಯಲಾಗಿದೆ, ಆದಷ್ಟು ಶೀಘ್ರವೇ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ. ಮುಂದಿನ ಎರಡು ತಿಂಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು. ರೈಲು ನಿಲ್ದಾಣ ವಿಸ್ತರಣಾ ಯೋಜನೆಯು ಪೂರ್ಣಗೊಳಿಸಲು 36 ತಿಂಗಳ ಕಾಲಾವಕಾಶ ಬೇಕಾಗಬಹುದು ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ಅಧಿಕಾರಿಗಳಾದ ಶಿಲ್ಪಿ ಅಗರ್‌ವಾಲ್‌ ತಿಳಿಸಿದ್ದಾರೆ ಎಂದು ವಿಜಯ ಕರ್ನಾಟಕ ವರದಿ ಮಾಡಿದೆ.

ಯೋಜನೆಯಲ್ಲಿ ಈ ಅಭಿವೃದ್ಧಿ ಪ್ರಸ್ತಾಪ

ಮೈಸೂರಿನ ರಾಜ ಕಾಲದಲ್ಲಿ ನಿರ್ಮಾಣವಾದ ಈ ಪಾರಂಪರಿಕ ರೈಲು ನಿಲ್ದಾಣ ಕಟ್ಟಡವು ಈಗಿನ ಜನಸಂಖ್ಯೆಗೆ ಅನುಗುಣವಾಗಿ ವಿಸ್ತರಣೆಗೆ ಯೋಜಿಸಲಾಗಿದೆ. ಮೈಸೂರು ಹಾಗೂ ಬೆಂಗಳೂರು ರೈಲ್ವೆ ನಿಲ್ದಾಣಗಳಲ್ಲಿ ರೈಲುಗಳ ಸ್ವಚ್ಛತೆ, ಕೆಲ ಕಾಲ ನಿಲುಗಡೆಗೆ ಸ್ಥಳಾವಕಾಶ, ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳು, ರೈಲು ದುರಸ್ತಿ ಕಾರ್ಯಕ್ಕೆ ಪಿಟ್‌ಲೈನ್‌, ಬೇಕಾಗುವಷ್ಟು ಫ್ಲಾಟ್‌ಫಾರಂ ನಿರ್ಮಾಣ ಸೇರಿದಂತೆ ಭವಿಷ್ಯ ದೃಷ್ಟಿಯಲ್ಲಿಟ್ಟುಕೊಂಡು ಅಭಿವೃದ್ಧಿ ಮಾಡಲಾಗುತ್ತಿದೆ.

Mysuru Railway Station

ರಾಜ್ಯದ ಎರಡು ಪ್ರಮುಖ ನಗರಗಳಾದ ಮೈಸೂರು-ಬೆಂಗಳೂರು ಮಧ್ಯೆ ಜೋಡಿ ಹಳಿ ನಿರ್ಮಾಣವಾಗಿದೆ. ವಿದ್ಯುದೀಕರಣ ಸಹ ಪೂರ್ಣಗೊಂಡಿದೆ. ಮುಂದಿನ ದಿನಗಳಲ್ಲಿ ಹೆಚ್ಚು ರೈಲುಗಳು ಈ ಮಾರ್ಗದಲ್ಲಿ ಒಡಾಡಲಿವೆ. ಹೀಗಾಗಿ ಪ್ರಯಾಣಿಕರ ಸಂಖ್ಯೆಯು ಹೆಚ್ಚಾಗಲಿದೆ. ಸದ್ಯ ನಿಲ್ದಾಣಕ್ಕೆ ಬರುತ್ತಿರುವ ಕೆಲವು ರೈಲುಗಳಿಗೆ ನಿಲುಗಡೆಗೆ ಸ್ಥಳವಿಲ್ಲ. ಹೀಗಾಗಿ ಎಷ್ಟೋ ಸಮಯ ಮಾರ್ಗ ಮಧ್ಯೆಯೇ ಇಲ್ಲವೇ ನಿಲ್ದಾಣಕ್ಕೂ ದೂರದಲ್ಲಿ ನಿಲ್ಲಬೇಕಾದ ಸ್ಥಿತಿ ಇದೆ. ಇದೆಲ್ಲದರ ಸುಧಾರಣೆಗಾಗಿ ನಿಲ್ದಾಣ ವಿಸ್ತರಣೆ ಅಭಿವೃದ್ಧಿ ಯೋಜನೆ ಸರ್ಕಾರ ಕೈಗೆತ್ತಿಕೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕ್ವಾಟ್ರರ್ಸ್‌ ತೆರವಿಗೆ ಸಿದ್ಧತೆ

ಹಾಲಿ ರೈಲು ನಿಲ್ದಾಣದಲ್ಲಿ ಹೆಚ್ಚುವರಿಯಾಗಿ ಮೂರು ಪ್ಲಾಟ್‌ ಫಾರಂ ನಿರ್ಮಿಸಲಾಗುತ್ತಿದೆ. ಅದಕ್ಕೆ ಅಗತ್ಯವಾಗಿರುವ ಸ್ಥಳಗಳಲ್ಲಿ ಈಗಿರುವ ಕ್ವಾಟ್ರರ್ಸ್‌ಗಳನ್ನು ತೆರವುಗೊಳಿಸಿದ ನಂತರ ಅಲ್ಲಿ ಸ್ಥಾಪಿಸಲಾಗುವುದು. ಈ ಸಂಬಂಧ ತೆರವು ಕಾರ್ಯ ನಡೆಯಲಿದೆ. ಇದರಿಂದ ರೈಲ್ವೆ ಸಿಬ್ಬಂದಿಗೆ ಬೇರೆ ಸ್ಥಳಗಳಲ್ಲಿ ಕ್ವಾಟ್ರರ್ಸ್‌ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ.

ಎಲ್ಲವು ಅಂದುಕೊಂಡಂತೆ ಅಭಿವೃದ್ಧಿಯಾದ ನಂತರ ಮೈಸೂರಿನ ಪ್ರಯಾಣಿಕರಿಗೆ ಮತ್ತು ರೈಲು ಗಾಡಿಗಳಿಗೆ ಹೆಚ್ಚುವರಿಯಾಗಿ ಮೂರು ಪ್ಲಾಟ್‌ಫಾರಂ (7,8,9), ಹೆಚ್ಚುವರಿ 4 ಪಿಟ್‌ಲೈನ್‌ ಮತ್ತು 4 ಸ್ಟಾಬ್ಲಿಂಗ್‌ ಲೈನ್‌ ಸಿಗುತ್ತವೆ. ಕೋಚ್‌ಗಳ ಸ್ವಯಂ ಚಾಲಿತ ವಾಷಿಂಗ್‌ ಪ್ಲಾಂಟ್‌ ಓವರ್‌ ಬ್ರಿಡ್ಜ್‌ ಅನ್ನು 9ರವರೆಗೆ ವಿಸ್ತರಣೆ ಆಗಲಿದೆ. ಈ ಮೂಲಕ ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಲಿದೆ ಎಂದು ಶಿಲ್ಪಿ ಅಗರ್‌ವಾಲ್‌ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+