• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು: ಪಾರ್ಕಿಂಗ್ ರೂಲ್ಸ್ ಪಾಲಿಸದಿದ್ದರೆ ಇನ್ಮುಂದೆ ವೀಲ್ ಲಾಕ್

|

ಮೈಸೂರು, ಮೇ 29: ಮೈಸೂರಿನಲ್ಲಿ ಇತ್ತೀಚೆಗೆ ಟೈಗರ್ ವಾಹನ ಸ್ಥಗಿತಗೊಂಡ ಬಳಿಕ ಜನರು ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುತ್ತಿರುವುದು ಪೊಲೀಸರಿಗೆ ತಲೆನೋವಾಗಿದೆ. ಇದನ್ನು ನಿಯಂತ್ರಿಸಲೆಂದೇ ಮತ್ತೊಂದು ದುಬಾರಿ ದಂಡ ಇರುವ ಯೋಜನೆಯನ್ನು ತರಲು ಮೈಸೂರು ಟ್ರಾಫಿಕ್ ಪೊಲೀಸರು ನಿರ್ಧರಿಸಿದ್ದಾರೆ.

ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲುವ ವಾಹನಗಳಿಗೆ ವೀಲ್ ಲಾಕ್ ಮಾಡುವ ಮೂಲಕ ದಂಡ ವಿಧಿಸಲು ತೀರ್ಮಾನಿಸಿದ್ದು, ಇಂದಿನಿಂದಲೇ ಕಾರ್ಯಾಚರಣೆ ಆರಂಭವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ ಬಾಲಕೃಷ್ಣ ತಿಳಿಸಿದ್ದಾರೆ. ಎಲ್ಲೆಂದರಲ್ಲಿ ಪಾರ್ಕ್ ಮಾಡಿರುವ, ಸಂಚಾರಕ್ಕೆ ಅಡಚಣೆ ಉಂಟು ಮಾಡುವ ವಾಹನವನ್ನು ಗುರುತಿಸಿ, ಅವುಗಳಿಗೆ ವೀಲ್ ಲಾಕ್ ಮಾಡಲಿದ್ದು ದೂರವಾಣಿ ಸಂಖ್ಯೆಯ ಸ್ಟಿಕ್ಕರ್ ಅನ್ನು ಅದರ ಮೇಲೆ ಅಂಟಿಸಲಿದ್ದಾರೆ.

ಮೈಸೂರಿನಲ್ಲಿ ಬೇಕಾಬಿಟ್ಟಿ ಆಟೋ ಓಡಿಸುವವರಿಗೆ ದಂಡ ವಿಧಿಸಿದ ಟ್ರಾಫಿಕ್ ಪೊಲೀಸ್

ಒಂದು ಗಂಟೆ ಅವಧಿಯಲ್ಲಿ ವಾಹನ ಸವಾರರು ಸ್ಥಳಕ್ಕೆ ಬಂದರೆ, 100ರೂ ಪಾವತಿಸಿ ವೀಲ್ ಲಾಕ್ ಅನ್ನು ತೆರವುಗೊಳಿಸುವ ಮೂಲಕ ವಾಹನವನ್ನು ಪಡೆಯಬಹುದು. ನಿಗದಿತ ಅವಧಿಯೊಳಗೆ ವಾಹನ ಸವಾರರು ಬಾರದಿದ್ದರೆ ಅಂತಹ ಗಾಡಿಗಳನ್ನು ಟೋಯಿಂಗ್ ಮಾಡಿ ಪಕ್ಕದ ಪೊಲೀಸ್ ಠಾಣಾ ಆವರಣದಲ್ಲಿ ಇರಿಸಲಾಗುತ್ತದೆ. ಅಲ್ಲಿಗೆ ಬಂದ ಮೇಲೆ ವಾಹನ ಸವಾರರು ಟೋಯಿಂಗ್ ಶುಲ್ಕದೊಂದಿಗೆ ದಂಡದ ಹಣವನ್ನು ಪಾವತಿ ಮಾಡಬೇಕಾಗುತ್ತದೆ.

ವಾಹನ ಸವಾರರು ದಂಡದಿಂದ ತಪ್ಪಿಸಿಕೊಳ್ಳಲು ವೀಲ್ ಲಾಕ್ ಡ್ಯಾಮೇಜ್ ಮಾಡಿದರೆ ಅಂತಹ ವಾಹನ ಸವಾರರ ವಿರುದ್ಧ ಕಾನೂನು ರೀತಿ ಕಠಿಣ ಕ್ರಮ ವಹಿಸಲು ಪೊಲೀಸ್ ಇಲಾಖೆ ತೀರ್ಮಾನ ಕೈಗೊಂಡಿದೆ. ಈ ಹಿಂದೆ ವೀಲ್ ಲಾಕ್ ಮಾಡಿದ ವೇಳೆ ಚಾಲಕನೊಬ್ಬ ಕಾರಿನ ಚಕ್ರಕ್ಕೆ ಹಾಕಿದ್ದ ಲಾಕ್ ತೆಗೆಯಲು ಸಾಧ್ಯವಾಗದೆ ಚಕ್ರವನ್ನೇ ಕಳಚಿ, ಬೇರೆ ಚಕ್ರ ಅಳವಡಿಸಿದ್ದ. ಈ ಹಿನ್ನೆಲೆ ಪೊಲೀಸರು ಈ ಕ್ರಮವನ್ನು ಕೈಗೊಂಡಿದ್ದಾರೆ.

ಪ್ರತಿ ಸಂಚಾರ ಪೊಲೀಸ್ ಠಾಣೆಗಳಿಗೆ 100ರಂತೆ ಒಟ್ಟು ಐದು ಸಂಚಾರಿ ಠಾಣೆಗಳಿಗೆ 500 ವೀಲ್ ಲಾಕ್ ಗಳನ್ನು ನೀಡಿದ್ದು, ನಗರದ ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ಕಾರ್ಯನಿರ್ವಹಿಸುವ ಸಂಚಾರ ಪೊಲೀಸರು ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಿರುವುದು ಕಂಡಲ್ಲಿ ವೀಲ್ ಲಾಕ್ ಅಳವಡಿಸಿ ದಂಡ ವಸೂಲಿ ಮಾಡಲಿದ್ದಾರೆ.

ಮೈಸೂರಿನಲ್ಲಿ ಸಂಚಾರಿ ನಿಯಮ ಪಾಲಿಸಿದವರಿಗೆ ಟ್ರಾಫಿಕ್ ಪೊಲೀಸರಿಂದ ಗಿಫ್ಟ್

ಭಾರಿ ಸರಕು ಸಾಗಣೆ ವಾಹನಗಳ ದಂಡ 100 ರೂ, ಟೋಯಿಂಗ್ ಶುಲ್ಕ 1500 ರೂ, ಒಟ್ಟು 1600ರೂ, ಮಧ್ಯಮ ಸರಕು ಸಾಗಣೆ ವಾಹನಗಳ ದಂಡ 100ರೂ ಟೋಯಿಂಗ್ ಶುಲ್ಕ 1250 ರೂ, ಒಟ್ಟು 1350ರೂ, ಲಘು ವಾಹನ ದಂಡ 100ರೂ, ಟೋಯಿಂಗ್ ಶುಲ್ಕ 1000ರೂ, ಒಟ್ಟು 1100ರೂ, ದ್ವಿಚಕ್ರ ವಾಹನ ದಂಡ 100ರೂ, ಟೋಯಿಂಗ್ ಶುಲ್ಕ 650ರೂ, ಒಟ್ಟು 750 ರೂಗಳ ದಂಡವನ್ನು ವಿಧಿಸಲಾಗಿದೆ.

English summary
Mysuru City Traffic Police has started new plan Wheel Locking System for ‘No Parking’ zones across the city. Traffic Police already purchased about 500 locks and will distribute 100 locks each police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more