ಮೈಸೂರು : ಬ್ರೌನ್ ಶುಗರ್ ಸಾಗಿಸುತ್ತಿದ್ದ ಇಬ್ಬರ ಬಂಧನ

ಮೈಸೂರು, ನವೆಂಬರ್, 05 : ಅಕ್ರಮವಾಗಿ ಬ್ರೌನ್ ಶುಗರ್ ಸಾಗಿಸುತ್ತಿದ್ದ ಇಬ್ಬರನ್ನು ಯುವಕರನ್ನು ಹುಣಸೂರು ಪೊಲೀಸರು ಗುರುವಾರ ಬಂಧಿಸಿದ್ದು, ಅವರ ಬಳಿ ಇದ್ದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರಿನ ಎನ್.ಆರ್.ಮೊಹಲ್ಲಾದ ರವಿಕುಮಾರ್ ಮತ್ತು ಮಹದೇವ್ ಬ್ರೌನ್ ಶುಗರ್ ದಂಧೆ ನಡೆಸುತ್ತಿದ್ದ ಇಬ್ಬರು ಯುವಕರು. ಕೆಲವು ಮೂಲಗಳಿಂದ ದೊರೆತ ಮಾಹಿತಿಯ ಮೇರೆಗೆ ಬೆನ್ನಟ್ಟಿದ ಹುಣಸೂರು ವೃತ್ತ ನಿರೀಕ್ಷಕರ ತಂಡ ಇವರಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.[ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲೂ ಮದ್ಯ ನಿಷೇಧಿಸಿ!]

Mysuru police arrested two boys case of brown sugar

ಮೂಲತಃ ಮೈಸೂರಿನ ಆರ್‍ಎಂಸಿ ಯಾರ್ಡ್ ನಲ್ಲಿ ಎನ್.ಆರ್.ಮೊಹಲ್ಲಾದ ರವಿಕುಮಾರ್ ಮತ್ತು ಮಹದೇವ್ ಕೂಲಿಕಾರರಾಗಿ ದುಡಿಯುತ್ತಿದ್ದರು. ಇವರಿಬ್ಬರು ಒಂದು ವಾರದ ಹಿಂದೆ ಕೀನ್ಯಾ ದೇಶದ ಪ್ರಜೆಗಳ ಬಳಿ ಇದ್ದ ಮಾದಕ ವಸ್ತುವನ್ನು ಬೆದರಿಸಿ ಬಲವಂತವಾಗಿ ಪಡೆದುಕೊಂಡಿದ್ದರು.

ಮಡಿಕೇರಿ, ಕುಶಾಲನಗರದಲ್ಲಿ ಬ್ರೌನ್ ಶುಗರ್ ಗೆ ಭಾರೀ ಬೇಡಿಕೆಯಿದ್ದು ಲಕ್ಷಾಂತರ ರೂ. ಹಣ ಸಿಗುತ್ತದೆ ಎಂದು ಕೆಲವರು ಹೇಳಿರುವುದನ್ನು ನಂಬಿ ಅದರ ಮಾರಾಟಕ್ಕಾಗಿ ಮಡಿಕೇರಿ ಕಡೆ ಹೊರಟಿದ್ದರು.[ಕಲಬುರಗಿಯಲ್ಲಿ 50ಲಕ್ಷ ಮೌಲ್ಯದ ಗಾಂಜಾ ವಶ]

ಆರೋಪಿಗಳು ತಮ್ಮ ಬೈಕಿನಲ್ಲಿ ಮೈಸೂರಿನಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದಾಗ, ತಾಲೂಕಿನ ಬಿಳಿಕೆರೆ ಹೋಬಳಿ ಮನುಗನಹಳ್ಳಿಯ ಅಂಕನಹಳ್ಳಿ ಗೇಟ್ ಬಳಿ ಅಡ್ಡಗಟ್ಟಿದ ಪೊಲೀಸರು ಆರೋಪಿಗಳನ್ನು ಪರಿಶೀಲಿಸಿದ್ದಾರೆ. ಆಗ ಅವರ ಬಳಿ ಇದ್ದ ಬ್ಯಾಗಿನಲ್ಲಿ 554 ಗ್ರಾಂ ಬ್ರೌನ್ ಶುಗರ್ ಪತ್ತೆಯಾಗಿದೆ.

ಹುಣಸೂರು ವೃತ್ತ ನಿರೀಕ್ಷಕ ಧರ್ಮೆಂದ್ರ ಅವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಬಿಳಿಕೆರೆ ಠಾಣಾಧಿಕಾರಿ ಪುರುಷೋತ್ತಮ, ಪೇದೆಗಳಾದ ಮನೋಹರ್, ಲಿಂಗರಾಜಪ್ಪ, ಶ್ರೀನಿವಾಸ್ ಪ್ರಸಾದ್, ಕುಮಾರ್, ಗವೀಗೌಡ, ಪ್ರಭಾಕರ್, ನಾಗೇಶ್, ನಂಜುಂಡ ನ್ನೊಳಗೊಂಡ ತಂಡ ಈ ಆರೋಪಿಗಳನ್ನು ಹಿಡಿದು ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+