ಮನಸಿನ ಮಾತು ಹಂಚಿಕೊಳ್ಳಲು ಯದುವೀರ್ ಹೊಸ ಬ್ಲಾಗ್!
ಮೈಸೂರು, ನವೆಂಬರ್ 15 : ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಮ್ಮ ಬ್ಲಾಗ್ ಮೂಲಕ ಮನಸಿನ ಮಾತನ್ನು ಹಂಚಿಕೊಂಡಿದ್ದಾರೆ. ವೈಯಕ್ತಿಕ ವೆಬ್ ಸೈಟ್ ನಲ್ಲಿ ಭೇರುಂಡ ಹೆಸರಿನಲ್ಲಿ ಮೊದಲ ಸುದ್ದಿಪತ್ರವನ್ನು ಯದುವೀರ್ ಪ್ರಕಟಿಸಿದ್ದಾರೆ. ದಸರಾ ವಿಶೇಷಾಂಕದ ಸುದ್ದಿಪತ್ರವನ್ನು ಉದ್ಘಾಟನೆಯ ಸುದ್ದಿ ಪತ್ರ (ಇನಾಗರಲ್ ನ್ಯೂಸ್ ಲೇಟರ್) ಎಂಬ ಹೆಸರಿನಲ್ಲಿ ಮೊದಲ ಪತ್ರ ಬರೆದು ಪ್ರಕಟಿಸಿದ್ದಾರೆ.
ತಮ್ಮ ಮನಸಿನ ಮಾತನ್ನು ಹಂಚಿಕೊಂಡು, ಜನರ ಜೊತೆ ಬೆರೆಯಲು ಮೈಸೂರಿನ ಯದುವಂಶದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ 'ಭೇರುಂಡ' ಎಂಬ ಹೆಸರಿನ ಬ್ಲಾಗ್ ಆರಂಭಿಸಿದ್ದಾರೆ.

ಇಷ್ಟು ದಿನ ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಫೋಟೋಗಳನ್ನು ಅಪ್ಲೋಡ್ ಮಾಡಿ ಜನರ ಜೊತೆ ಸಂಪರ್ಕದಲ್ಲಿದ್ದ ಮಹಾರಾಜರು ಈಗ ತಮ್ಮ ಬರವಣಿಗೆಯ ಮೂಲಕ ಜನರ ಜೊತೆ ಬೆರೆಯಲು ಮುಂದಾಗಿದ್ದು, ವೆಬ್ ಸೈಟ್‍ನಲ್ಲಿ ಬ್ಲಾಗ್ ಆರಂಭಿಸಿ ಇವತ್ತು ಮೊದಲ ಸುದ್ದಿಪತ್ರವನ್ನು ಪ್ರಕಟಿಸಿದ್ದಾರೆ.
ದಸರಾ ವಿಶೇಷಾಂಕದ ಸುದ್ದಿಪತ್ರ ಬಿಡುಗಡೆ ಮಾಡಿದ ಮಹಾರಾಜರು, ಇದು ಉದ್ಘಾಟನೆಯ ಸುದ್ದಿ ಪತ್ರ ಎಂದು ಬ್ಲಾಗ್ ನಲ್ಲಿ ಹೇಳಿದ್ದಾರೆ. ಉದ್ಘಾಟನಾ ಪತ್ರದ ಹೆಸರಿನಲ್ಲಿ ಮೊದಲ ಪತ್ರ ಒಂದನ್ನು ಬರೆದಿದ್ದಾರೆ. ಈ ಪತ್ರ ನಿಮಗೆಲ್ಲ ನಮ್ಮ ಪ್ರಾಥಮಿಕ ಮಾಹಿತಿ ನೀಡಲಿದೆ. ರಾಜಮನೆತನದ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ತಿಳಿಸಲಿದೆ. ಈ ಬ್ಲಾಗ್ ಮೂಲಕ ನಮ್ಮ ಕಾರ್ಯಕ್ರಮಗಳು ನಿಮಗೆ ತಿಳಿಯಲಿದೆ ಎಂದು ಬರೆದಿದ್ದಾರೆ.

ರಾಜಮನೆತನದ ಕಾರ್ಯಕ್ರಮಗಳಲ್ಲಿ ಈ ಸೇವೆಯು ಒಂದು ಭಾಗ. ನಾವು ನೀವು ಪರಸ್ಪರ ಅರ್ಥ ಮಾಡಿಕೊಳ್ಳಲು ಈ ಪತ್ರ ನಾಂದಿಯಾಗಲಿದೆ. ನನಗೆ ಬರವಣಿಗೆ ಇಷ್ಟವಾಗಿದ್ದರಿಂದ ನನ್ನ ಆಲೋಚನೆಗಳನ್ನು ಈ ಮೂಲಕ ಹಂಚಿಕೊಳ್ಳಲಿದ್ದೇನೆ ಎಂದು ಬರೆದುಕೊಂಡಿದ್ದಾರೆ.












Click it and Unblock the Notifications